Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತ ಶಿವಕುಮಾರ್ ಪೂಜಾರಿಯನ್ನು ಯಾವತ್ತೂ ನೋಡಿಲ್ಲ, ಮಾತಾಡಿಲ್ಲ: ಡಾ ಶರಣಪ್ರಕಾಶ್ ಪಾಟೀಲ್, ಸಚಿವ

ಮೃತ ಶಿವಕುಮಾರ್ ಪೂಜಾರಿಯನ್ನು ಯಾವತ್ತೂ ನೋಡಿಲ್ಲ, ಮಾತಾಡಿಲ್ಲ: ಡಾ ಶರಣಪ್ರಕಾಶ್ ಪಾಟೀಲ್, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 20, 2023 | 12:57 PM

ಶಿವಕುಮಾರ್ ತಾನು ಮಾಡಿರುವ ಆಡಿಯೋದಲ್ಲಿ ಸಚಿವರು ತನ್ನ ಸಾವಿಗೆ ಯಾಕೆ ಕಾರಣ ಅಂತ ಸ್ಪಷ್ಟವಾಗಿ ಹೇಳಿಲ್ಲ. ಹಿಂದೂ ಧರ್ಮದ ಬಗ್ಗೆ ಮಾತಾಡಿದರೆ ಸಚಿವರಿಗೆ ಭಯಂಕರ ಕೋಪ ಬರುತಿತ್ತು ಎಂದು ಹೇಳಿದ್ದಾರೆ. ಅದು ಎಲ್ಲ ಕಾಂಗ್ರೆಸ್ ನಾಯಕರಲ್ಲಿ ಕಾಣುವ ಸಾಮಾನ್ಯ ಸಂಗತಿಯಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ, ತನಿಖೆ ಪೂರ್ಣಗೊಂಡ ಬಳಿಕ ಸತ್ಯ ಹರಬರುತ್ತದೆ ಅಂತ ಡಾ ಶರಣಪ್ರಕಾಶ್ ಪಾಟೀಲ್ ಹೇಳಿದರು.

ಕಲಬುರಗಿ: ಜಿಲ್ಲೆಯ ಶಿರೋಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತನೆಂದು ಹೇಳಲಾಗಿರುವ ಶಿವಕುಮಾರ್ ಪೂಜಾರಿ  (Shivakumar Pujari) ಹೆಸರಿನ ವ್ಯಕ್ತಿ ಆತ್ಯಹತ್ಯೆಯ ಮೂಲಕ ಸಾವನ್ನಪ್ಪಿದ್ದು ಸಾಯುವ ಮೊದಲು ರೆಕಾರ್ಡ್ ಆಡಿಯೋ ಅವರು ವೈದ್ಯಕೀಯ ಶಿಕ್ಷಣ (medical education) ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್ (Dr Sharan Prakash Patil) ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರು ಮಾಡಿರುವ ಆರೋಪದ ಬಗ್ಗೆ ಸಚಿವ ಪಾಟೀಲ್ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದ್ದು ತಮಗೂ ಆತ್ಮಹತ್ಯೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪಾಟೀಲ್, ಶಿವಕುಮಾರ್ ಜೊತೆ ತಾನ್ಯಾವತ್ತೂ ಮಾತಾಡಿಲ್ಲ ಆತ ಯಾರು ಅನ್ನೋದೇ ಗೊತ್ತಿಲ್ಲ ಅಂತ ಹೇಳಿದರು. ಶಿವಕುಮಾರ್ ತಾನು ಮಾಡಿರುವ ಆಡಿಯೋದಲ್ಲಿ ಸಚಿವರು ತನ್ನ ಸಾವಿಗೆ ಯಾಕೆ ಕಾರಣ ಅಂತ ಸ್ಪಷ್ಟವಾಗಿ ಹೇಳಿಲ್ಲ. ಹಿಂದೂ ಧರ್ಮದ ಬಗ್ಗೆ ಮಾತಾಡಿದರೆ ಸಚಿವರಿಗೆ ಭಯಂಕರ ಕೋಪ ಬರುತಿತ್ತು ಎಂದು ಹೇಳಿದ್ದಾರೆ. ಅದು ಎಲ್ಲ ಕಾಂಗ್ರೆಸ್ ನಾಯಕರಲ್ಲಿ ಕಾಣುವ ಸಾಮಾನ್ಯ ಸಂಗತಿಯಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ, ತನಿಖೆ ಪೂರ್ಣಗೊಂಡ ಬಳಿಕ ಸತ್ಯ ಹರಬರುತ್ತದೆ ಅಂತ ಡಾ ಶರಣಪ್ರಕಾಶ್ ಪಾಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ