ಬರಗಾಲದ ಸಂಕಷ್ಟದಿಂದ ರೈತರು ವಿಲವಿಲ ಒದ್ದಾಡುತ್ತಿದ್ದರೂ ಸಚಿವರಿಗಾಗಿ ಹೊಸ ಐಷಾರಾಮಿ ಕಾರು ಕೊಳ್ಳಲು ಸರ್ಕಾರಕ್ಕೆ ಹಣದ ಅಡಚಣೆ ಇಲ್ಲ!

ಬರಗಾಲದ ಸಂಕಷ್ಟದಿಂದ ರೈತರು ವಿಲವಿಲ ಒದ್ದಾಡುತ್ತಿದ್ದರೂ ಸಚಿವರಿಗಾಗಿ ಹೊಸ ಐಷಾರಾಮಿ ಕಾರು ಕೊಳ್ಳಲು ಸರ್ಕಾರಕ್ಕೆ ಹಣದ ಅಡಚಣೆ ಇಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 20, 2023 | 1:50 PM

ಹಳೆಯ ಕಾರುಗಳು ಒಂದೂವರೆ ಲಕ್ಷ ಕಿಮೀಗಳಿಗಿಂತ ಜಾಸ್ತಿ ಓಡಿದ್ದರಿಂದ ಅವಧಿ ಮುಗಿದಿತ್ತು ಮತ್ತು ವಾಹನ ಖರೀದಿಗಾಗಿ ಹಣವನ್ನು ಪ್ರತ್ಯೇಕವಾಗಿ ತೆಗೆದಿರಿಸಲಾಗುತ್ತದಂತೆ ಹಾಗೂ ಅದನ್ನು ಬೇರೆ ಉದ್ದೇಶಗಳಿಗೆ ಬಳಸಲು ಆಗೋದಿಲ್ವಂತೆ. ಹೇಗಿದೆ ನೋಡಿ ತರ್ಕ! ಆ ಹಣವನ್ನು (ವರದಿಗಾರ ಹೇಳುವಂತೆ ರೂ. 9.90 ಕೋಟಿ) ಮಳೆಯಿಲ್ಲದೆ, ಬೆಳೆಯಿಲ್ಲದೆ ಕಂಗೆಟ್ಟು ಹೋಗಿರುವ ರೈತರಿಗೆ ನೀಡಿದ್ದರೆ ಯಾರೂ ಪ್ರಶ್ನಿಸುತ್ತಿರಲಿಲ್ಲ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ (Siddaramaiah Government) ಆಷಾಡಭೂತಿತನ ಮತ್ತು ದ್ವಂದ್ವ ನೀತಿ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ ಮಾರಾಯ್ರೇ. ರಾಜ್ಯ ಭೀಕರ ಬರದ (severe drought) ಸಂಕಷ್ಟಕ್ಕೆ ಸಿಲುಕಿದೆ. ಬೆಳೆ ನಷ್ಟ ಪರಿಹಾರವಾಗಿ ರೈತರಿಗೆ ನೀಡಲು ಬೊಕ್ಕಸದಲ್ಲಿ ಹಣವಿಲ್ಲ. ಆದರೆ, ಸಂಪುಟ ಸಚಿವರಿಗೆ ಹೊಸ ಐಷಾರಾಮಿ ಕಾರುಗಳನ್ನು (luxury cars) ಕೊಳ್ಳಲು ಸರ್ಕಾರಕ್ಕೆ ಹಣದ ಕೊರತೆ ಎದುರಾಗಲ್ಲ. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಪ್ರಸನ್ನ ಗಾಂವ್ಕರ್ ಹೇಳುವ ಹಾಗೆ ಕಾರುಗಳನ್ನು ಖರೀದಿ ಮಾಡಿದ್ದಕ್ಕೆ ಸರ್ಕಾರದ ಪ್ರತಿನಿಧಿಗಳು (representatives of government) ನೀಡುವ ವಿಸ್ಮಯ ಮೂಡಿಸುತ್ತದೆ. ಹಳೆಯ ಕಾರುಗಳು ಒಂದೂವರೆ ಲಕ್ಷ ಕಿಮೀಗಳಿಗಿಂತ ಜಾಸ್ತಿ ಓಡಿದ್ದರಿಂದ ಅವಧಿ ಮುಗಿದಿತ್ತು ಮತ್ತು ವಾಹನ ಖರೀದಿಗಾಗಿ ಹಣವನ್ನು ಪ್ರತ್ಯೇಕವಾಗಿ ತೆಗೆದಿರಿಸಲಾಗುತ್ತದಂತೆ ಹಾಗೂ ಅದನ್ನು ಬೇರೆ ಉದ್ದೇಶಗಳಿಗೆ ಬಳಸಲು ಆಗೋದಿಲ್ವಂತೆ. ಹೇಗಿದೆ ನೋಡಿ ತರ್ಕ! ಆ ಹಣವನ್ನು (ವರದಿಗಾರ ಹೇಳುವಂತೆ ರೂ. 9.90 ಕೋಟಿ) ಮಳೆಯಿಲ್ಲದೆ, ಬೆಳೆಯಿಲ್ಲದೆ ಕಂಗೆಟ್ಟು ಹೋಗಿರುವ ರೈತರಿಗೆ ನೀಡಿದ್ದರೆ, ಯಾರೂ ಪ್ರಶ್ನಿಸುತ್ತಿರಲಿಲ್ಲ ಮತ್ತು ಭೇಷ್ ಎಂದು ಸರ್ಕಾರದ ಬೆನ್ನು ತಟ್ಟುತ್ತಿದ್ದರು. ಆದರೆ ಸರ್ಕಾರಕ್ಕೆ ಅಷ್ಟೊಂದು ವಿವೇಚನೆ ಎಲ್ಲಿಂದ ಬಂದೀತು? ಅದೇನೋ ಹೇಳ್ತಾರಲ್ಲ ಹೇಳೋದು ಆಚಾರ ತಿನ್ನೋದು ಬದನೆ ಅಂತ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ