ರಾಜ್ಯ ಸಚಿವ ಸಂಪುಟ ಸಚಿವರಿಗೆ ಐಷಾರಾಮಿ ಕಾರು ಭಾಗ್ಯ- ಖುಷಿ ಹಂಚಿಕೊಂಡ ಸಚಿವ ಎನ್ ಎಸ್ ಬೋಸರಾಜು!

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಸಂಪುಟ ದರ್ಜೆಯ ಸಚಿವರಿಗೆ ಹೊಸ ಕಾರುಗಳ ಭಾಗ್ಯ ನೀಡಿದ್ದು, ಹೊಸ ಕಾರುಗಳನ್ನು ಈಗಾಗಲೇ ಅಧಿಕೃತವಾಗಿ ವಿತರಣೆ ಮಾಡಲಾಗಿದೆ.

ರಾಜ್ಯ ಸಚಿವ ಸಂಪುಟ ಸಚಿವರಿಗೆ ಐಷಾರಾಮಿ ಕಾರು ಭಾಗ್ಯ- ಖುಷಿ ಹಂಚಿಕೊಂಡ ಸಚಿವ ಎನ್ ಎಸ್ ಬೋಸರಾಜು!
ರಾಜ್ಯ ಸಚಿವ ಸಂಪುಟ ಸಚಿವರಿಗೆ ಐಷಾರಾಮಿ ಕಾರು ಭಾಗ್ಯ
Follow us
|

Updated on:Oct 12, 2023 | 3:55 PM

ಸಿಎಂ ಸಿದ್ದರಾಮಯ್ಯ (CM Siddaramaiah) ಸಂಪುಟದ ಎಲ್ಲ 33 ಸಚಿವರಿಗೂ ಹೊಸದಾಗಿ ಇನ್ನೊವಾ ಹೈಕ್ರಾಸ್‌ ಹೈಬ್ರಿಡ್‌(Innova Hycross Hybrid) ಕಾರುಗಳನ್ನು ಖರೀದಿಸಲಾಗಿದ್ದು, ಇದಕ್ಕಾಗಿ ರೂ. 9.90 ಕೋಟಿ ಖರ್ಚು ಮಾಡಲಾಗಿದೆ. ರಾಜ್ಯ ಸರ್ಕಾರಲು ನೇರವಾಗಿ ಟೊಯೊಟಾ ಕಿರ್ಲೋಸ್ಕರ್ ಬೆಂಗಳೂರು ಘಟಕದಿಂದಲೇ ಕಾರುಗಳನ್ನು ಖರೀದಿಸಿದ್ದು, ಹೊಸ ಕಾರುಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗರಿಷ್ಠ ಸುರಕ್ಷತೆ ಹೊಂದಿರಲಿವೆ.

ಹೊಸ ಕಾರುಗಳ ವಿತರಣೆ ಕುರಿತು ಟ್ವಿಟ್ ಮಾಡಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಅವರು ಕರ್ನಾಟಕ ಸರ್ಕಾರದ ಹೊಸ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. ಜೊತೆಗೆ ಸುಸ್ಥಿರತೆಗೆ ನಮ್ಮ ಬದ್ಧತೆಯ ಭಾಗವಾಗಿ, ಈ ವಾಹನವು ಅತ್ಯಾಧುನಿಕ ಸ್ವಯಂ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಟೆಕ್ ಅನ್ನು ಒಳಗೊಂಡಿದೆ ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ನಾವು ಕರ್ನಾಟಕದಲ್ಲಿ ಹಸಿರು ಮತ್ತು ಸ್ವಚ್ಛ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದ್ದೇವೆ ಎಂದಿದ್ದಾರೆ.

Karnataka ministers cars (1)

33 ಸಚಿವರಿಗೂ ಹೊಸದಾಗಿ ನೀಡಲಾಗಿರುವ ಇನ್ನೊವಾ ಹೈಕ್ರಾಸ್‌ ಹೈಬ್ರಿಡ್‌ ಕಾರುಗಳು ರಾಜ್ಯ ಸರ್ಕಾರದ ಬೇಡಿಕೆಗೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಪ್ರತಿ ಕಾರನ್ನು ರೂ. 30 ಲಕ್ಷ ಬೆಲೆಗೆ ಖರೀದಿಸಲಾಗಿದೆ.

ಇನ್ನು ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಹೊಸ ಇನೋವಾ ಹೈಕ್ರಾಸ್(Innova Hycross) ಕಾರು ಮಾದರಿಯನ್ನು ಕಳೆದ ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಮಾಡಿತ್ತು. ಹೊಸ ಕಾರು ಮಾದರಿಯು ಸದ್ಯ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 18.82 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 30.26 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯು ಜಿ, ಜಿಎಕ್ಸ್, ವಿಎಕ್ಸ್, ಜೆಡ್ಎಕ್ಸ್ ಮತ್ತು ಜೆಡ್ಎಕ್ಸ್(ಒ) ವೆರಿಯೆಂಟ್ ಗಳನ್ನು ಹೊಂದಿದ್ದು, ಹೊಸ ಕಾರು ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ.

ಇದನ್ನೂ ಓದಿ: ಹಳೆಯ ವಾಹನಗಳಿಗೆ ಗುಡ್ ಬೈ ಹೇಳಲು ಬೆಂಗಳೂರಿನಲ್ಲಿ ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ ಆರಂಭ

ಟಿಎನ್ ಜಿಸಿ-ಎ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿರುವ ಹೊಸ ಇನೋವಾ ಹೈಕ್ರಾಸ್ ಹೊಸ ಕಾರು ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ವಿನೂತನ ವಿನ್ಯಾಸದ ಜೊತೆಗೆ ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ. ಹೊಸ ಕಾರು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಸುಧಾರಿತ ಎಂಜಿನ್ ಆಯ್ಕೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಎಂಪಿವಿ ಕಾರು ಮಾರಾಟದಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹೊಸ ಇನೋವಾ ಹೈಕ್ರಾಸ್ ಕಾರು ಮಾದರಿಯು ಪ್ರಮುಖ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, 2.0 ಲೀಟರ್ ಸಾಮಾನ್ಯ ಪೆಟ್ರೋಲ್ ಜೊತೆಗೆ 2.0 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. 2.0 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು 172 ಹಾರ್ಸ್ ಪವರ್ ಮತ್ತು 205 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಹೈಬ್ರಿಡ್ ಮಾದರಿಯು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 150 ಹಾರ್ಸ್ ಪವರ್, 187 ಎನ್ಎಂ ಟಾರ್ಕ್‌ ಉತ್ಪಾದಿಸುತ್ತದೆ.

Karnataka ministers cars (4)

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರ ಸೂಪರ್ ಸೇಫ್ ಗಾರ್ಡ್ ಐಷಾರಾಮಿ ಕಾರಿನ ವಿಶೇಷತೆಗಳೇನು ಗೊತ್ತಾ?

2.0 ಲೀಟರ್ ಆಟ್ಕಿನ್ಸ್ ಸೈಕಲ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಮಾದರಿಯು ಫ್ರಂಟ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆ ಸೆಲ್ಪ್ ಡ್ರೈವ್ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿದ್ದು, ಇದು ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 21 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಈ ಮೂಲಕ ಹೊಸ ಕಾರು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಸಂಪೂರ್ಣ ಪೆಟ್ರೋಲ್ ಟ್ಯಾಂಕ್ ನೊಂದಿಗೆ ಒಂದು ಬಾರಿಗೆ 1,097 ಕಿ.ಮೀ ಸಂಚರಿಸುತ್ತದೆ.

ಇದಲ್ಲದೆ ಹೊಸ ಕಾರು 4,755 ಎಂಎಂ ಉದ್ದ, 1,850 ಎಂಎಂ ಅಗಲ, 1,795 ಎಂಎಂ ಎತ್ತರ, 2,850 ಎಂಎಂ ವ್ಹೀಲ್ ಬೆಸ್ ಮತ್ತು 185 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಗರಿಷ್ಠ ಸುರಕ್ಷತೆಗಾಗಿ ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೌಲಭ್ಯವನ್ನು ಪಡೆದುಕೊಂಡಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಹೊಂದಿರುವ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೊತೆಗೆ ಸ್ಟ್ಯಾಂಡರ್ಡ್ ಮಾದರಿಗಳಿಗೂ ಅನ್ವಯಿಸುವಂತೆ 6 ಏರ್ ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಇಎಸ್ ಪಿ ಸೌಲಭ್ಯಗಳಿದ್ದು, ಆಂಬಿಯೆಂಟ್ ಲೈಟಿಂಗ್, ಫ್ರಂಟ್ ವೆಂಟಿಲೆಟೆಡ್ ಲೆದರ್ ಆಸನಗಳು, ಒಟ್ಟೊಮನ್ ವೈಶಿಷ್ಟ್ಯತೆ ಹೊಂದಿರುವ ಮಧ್ಯದಲ್ಲಿರುವ ಆಸನಗಳು ಗಮನಸೆಳೆಯುತ್ತವೆ.

Published On - 3:33 pm, Thu, 12 October 23