ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ: ಮಗನ ಅಂಗಾಂಗ ದಾನ ಮಾಡಿದ ತಂದೆ-ತಾಯಿ

| Updated By: ವಿವೇಕ ಬಿರಾದಾರ

Updated on: Oct 30, 2022 | 3:11 PM

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿದ ಪೋಷಕರು

ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ: ಮಗನ ಅಂಗಾಂಗ ದಾನ ಮಾಡಿದ ತಂದೆ-ತಾಯಿ
ಇಂಜಿನಿಯರಿಂಗ್​ ವಿದ್ಯಾರ್ಥಿ ಮನೋಜ್​
Follow us on

ಮೈಸೂರು: ನಗರದಲ್ಲಿ ಮತ್ತೊಬ್ಬ ಯುವಕನ ಕುಟುಂಬ ಅಂಗಾಂಗ ದಾನ ಮಾಡಿದೆ. ಅಪಘಾತದಲ್ಲಿ (Accident) ಮೆದುಳು ನಿಷ್ಕ್ರಿಯಗೊಂಡಿದ್ದ (Brain dead) ಮಗನ ಅಂಗಾಂಗ ದಾನ (Organs donate) ಮಾಡಿ ಪೋಷಕರು ಮಾದರಿಯಾಗಿದ್ದಾರೆ. ಹೆಬ್ಬಾಳ ಬಡಾವಣೆ ನಿವಾಸಿ, ಇಂಜಿನಿಯರಿಂಗ್​ ವಿದ್ಯಾರ್ಥಿ ಮನೋಜ್ ಶಂಕರ್​ಗೆ ​ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ಕೋಮಾಗೆ ಜಾರಿದ್ದನು. ಈ ಸಂಬಂಧ ಮೊನೋಜ್​ ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಮನೋಜ್ ಮೆದುಳು ನಿಷ್ಕ್ರಿಯಗೊಂಡಿದ್ದು, ಎರಡು ದಿನ ಕಳೆದರೂ ಚೇತರಿಸಿಕೊಂಡಿರಲಿಲ್ಲ. ಹೀಗಾಗಿ ಮನೋಜ್​​ನ ತಂದೆ ಜಯಶಂಕರ್, ತಾಯಿ ಜಯಲಕ್ಷ್ಮೀ ಮಗನ ಹೃದಯ, ಲಿವರ್, ಕಿಡ್ನಿ, ಕಾರ್ನಿಯಾ ದಾನ ಮಾಡಿದ್ದಾರೆ. ಮನೋಜ್​ಗೆ ಅಪೋಲೊ ಆಸ್ಪತ್ರೆಯ ಸಿಬ್ಬಂದಿ ಗೌರವ ಸಮರ್ಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Sun, 30 October 22