ಇಂದಿನಿಂದ ಮೈಸೂರಿನಲ್ಲಿ 3 ದಿನ ಜಿ20 ಶೃಂಗಸಭೆ: ಪ್ರವಾಸಿಗರು ಮೈಸೂರು ಟ್ರಿಪ್​ ಬದಲಾವಣೆ ಮಾಡಿಕೊಂಡ್ರೆ ಒಳಿತು

| Updated By: Digi Tech Desk

Updated on: Jul 31, 2023 | 10:46 AM

ಇಂದಿನಿಂದ (ಜುಲೈ 31) ಮೈಸೂರಿನಲ್ಲಿ ಮೂರು ದಿನಗಳ ಕಾಲ ಅಂದರೆ ಜುಲೈ 31ರಿಂದ ಆಗಸ್ಟ್ 02ರ ವರೆಗೆ ಜಿ20 ಶೃಂಗಸಭೆ ಸಭೆ ನಡೆಯಲಿದೆ. ಹೀಗಾಗಿ ಪ್ರವಾಸಿಗರು ಈ ಮೂರು ದಿನ ಮೈಸೂರು ಟ್ರಿಪ್​ ಹೋಗುವ ಪ್ಲ್ಯಾನ್ ಇದ್ದರೆ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು.

ಇಂದಿನಿಂದ ಮೈಸೂರಿನಲ್ಲಿ 3 ದಿನ ಜಿ20 ಶೃಂಗಸಭೆ: ಪ್ರವಾಸಿಗರು ಮೈಸೂರು ಟ್ರಿಪ್​ ಬದಲಾವಣೆ ಮಾಡಿಕೊಂಡ್ರೆ ಒಳಿತು
ಮೈಸೂರು ಅರಮನೆ
Follow us on

ಮೈಸೂರು, (ಜುಲೈ 31): ಇಂದಿನಿಂದ (ಜುಲೈ 31) ಮೈಸೂರಿನಲ್ಲಿ (Mysuru) ಮೂರು ದಿನಗಳ ಕಾಲ ಅಂದರೆ ಜುಲೈ 31ರಿಂದ ಆಗಸ್ಟ್ 02ರ ವರೆಗೆ ಜಿ20 ಶೃಂಗಸಭೆ  (G20 Summit) ನಡೆಯಲಿದೆ. ಈ ಸಭೆಯಲ್ಲಿ 43 ರಾಷ್ಟ್ರಗಳ ಜಿ20 ಸದಸ್ಯರು ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ವಿದೇಶಿ ಗಣ್ಯರು ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ(Mysuru Palace)  ವೀಕ್ಷಣೆಗೆ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ. ಪೊಲೀಸರು ಹಾಗೂ ರಾಜ್ಯ ಸರ್ಕಾರ ಅಗತ್ಯ ಮುಂಜಾಗೃತ ಕ್ರಮವನ್ನು ಕೈಗೊಳ್ಳುವ ದೃಷ್ಟಿಯಿಂದ ಎಲ್ಲ ಮಾದರಿಯ ಪ್ರವಾಸಿಗರ ಪ್ರವೇಶಕ್ಕೆ‌ ನಿರ್ಬಂಧ ವಿಧಿಸಿ, ಮೈಸೂರು ಅರಮನೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: G20 Summit: ಜಿ 20 ಶೃಂಗಸಭೆಯ ಸದಸ್ಯರು ಮೈಸೂರು ಅರಮನೆಗೆ ಭೇಟಿ, ಆಗಸ್ಟ್ 1, 2 ರಂದು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ

ಮೈಸೂರು ಅರಮನೆ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ. ಆದ್ರೆ, ಜಿಲ್ಲೆ ಬೇರೆ-ಬೇರೆ ಪ್ರವಾಸಿ ತಾಣಗಳಿಗೆ ವಿದೇಶಿ ಗಣ್ಯರು ಭೇಟಿ ನೀಡಲಿದ್ದಾರೆ. ಆ ವೇಳೆ ಪ್ರವಾಸಿಗರಿಗೆ ನಿರ್ಬಂಧ ಇರಲಿದೆ. ಹೀಗಾಗಿ ಇಂದಿನಿಂದ ಆಗಸ್ಟ್ 02ರವರೆಗೆ ಮೈಸೂರಿ ಪ್ರವಾಸಿ ತಾಣಗಳಿಗೆ ಹೋಗಬೇಕೆನ್ನುವವರು ಪ್ಲ್ಯಾನ್ ಚೇಂಜ್ ಮಾಡಿಕೊಳ್ಳುವುದು ಒಳಿತು.

ಜಿ20 ಶೃಂಗಸಭೆ ಸಭೆಗೆ ಆಗಮಿಸಲಿರುವ 43 ರಾಷ್ಟ್ರಗಳ ಗಣ್ಯರಿಗೆ ಮೈಸೂರಿನ ರ‍್ಯಾಡಿಸನ್ ಬ್ಲೂ ಗ್ರ್ಯಾಂಡ್ ಮರ್ಕ್ಯೂರಿ ಹೋಟೆಲ್‌ನಲ್ಲಿ‌ 70 ಕೊಠಡಿಗಳನ್ನು ಮೀಸಲಿಡಲಾಗಿದ್ದು, ಮೈಸೂರು ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಇನ್ನು ರ‍್ಯಾಡಿಸನ್ ಬ್ಲೂ ಹೋಟೆಲ್ ಹಾಗೂ ಮೈಸೂರು ಅರಮನೆ ಸುತ್ತ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಸೆ 144ರ ಅಡಿಯಲ್ಲಿ ತಾತ್ಕಾಲಿಕ ನೋ ಫ್ಲೈಯಿಂಗ್ ಝೋನ್ ಘೋಷಣೆ ಮಾಡಲಾಗಿದೆ.

ಇನ್ನಷ್ಟು ಮೈಸೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:21 am, Mon, 31 July 23