ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇರ್ವಿನ್ ರಸ್ತೆಯ ಮಸೀದಿಯ ಗೋಪುರ ತೆರವು ಮಾಡಲಾಗಿದೆ. ರಸ್ತೆ ಅಗಲೀಕರಣಕ್ಕೆ ಸಮಸ್ಯೆಯಾಗಿದ್ದ ಮಸೀದಿ ಗೋಪುರವನ್ನು ಜೆಸಿಬಿ ಮೂಲಕ ಮಸೀದಿ ಆಡಳಿತ ಮಂಡಳಿ ತೆರವುಗೊಳಿಸಿದೆ. ಮಾತುಕತೆ ಮೂಲಕ ಗೋಪುರ ಕೆಡವಲಾಗಿದೆ.
ರಸ್ತೆ ಅಗಲೀಕರಣಕ್ಕೆ ಮಸೀದಿಯ ಎರಡು ಗೋಪುರ ಅಡ್ಡಿಯಾಗಿತ್ತು. ಈ ಸಂಬಂಧ ರಸ್ತೆ ಅಗಲಿಕರಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಹೈಕೋರ್ಟ್ ಸಹ ಗೋಪುರ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಸದ್ಯ ಗೋಪುರ ತೆರವುಗೊಳಿಸಲು ಮಸೀದಿ ಸಿಬ್ಬಂದಿ ಒಪ್ಪಿದ್ದು ತಾವೇ ಮುಂದೆ ನಿಂತು ಗೋಪುರ ತೆರವುಗೊಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಹೊಸಪೇಟೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆ ನೆಲಸಮ
ವಿಜಯನಗರ: ಹೊಸಪೇಟೆಯ ಎಂ.ಪಿ.ಪ್ರಕಾಶ್ ನಗರದ ಸರ್ವೇ ನಂಬರ್ 86ರಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆ ನೆಲಸಮ ಮಾಡಲಾಗಿದೆ. ಹೊಸಪೇಟೆ ನಗರಸಭೆ ಸಿಬ್ಬಂದಿ ಬೆಳ್ಳಂ ಬೆಳಗ್ಗೆ ಜೆಸಿಬಿಯಿಂದ ಮನೆ ಹೊಡೆದು ಹಾಕಿದೆ. ಸದ್ಯ ಮನೆ ನೆಲಸಮ ಮಾಡಲಾಗಿದ್ದು ಹೊಸಪೇಟೆ ಗ್ರಾಮೀಣ ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭೂಗಳ್ಳರನ್ನು ಮಟ್ಟ ಹಾಕುವಲ್ಲಿ ನಗರಸಭೆ ಅಧಿಕಾರಿಗಳು ಯಶಸ್ವಿ ಹೆಜ್ಜೆ ಇಟ್ಟಿದ್ದಾರೆ.
Published On - 10:31 am, Sat, 20 August 22