ಮೈಸೂರು: ಹಿಜಾಬ್ (Hijab) ವಿಚಾರಕ್ಕೆ ಪರೀಕ್ಷೆಗೆ ಗೈರಾದರೆ ಮರು ಪರೀಕ್ಷೆ ಇಲ್ಲ ಅಂತ ಮೈಸೂರಿನಲ್ಲಿ ಕಾನೂನು ಸಚಿವ ಜೆಸಿ ಮಾಧುಸ್ವಾಮಿ (JC Madhuswamy) ಸ್ಪಷ್ಟನೆ ನೀಡಿದ್ದಾರೆ. ಹೈಕೋರ್ಟ್ ಆದೇಶ ಪಾಲಿಸುವುದು ಸರ್ಕಾರದ ಕರ್ತವ್ಯ. ಕರ್ತವ್ಯ ಪಾಲಿಸದೆ ಛೀಮಾರಿ ಹಾಕಿಸಿಕೊಳ್ಳಲು ನಾವು ಸಿದ್ಧರಿಲ್ಲ ಎಂದು ಸಚಿವರು ಹೇಳಿದ್ದಾರೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಒಳಗೆ ಪ್ರವೇಶಕ್ಕೆ ಅನುಮತಿ ಇರಲಿಲ್ಲ. ಹಿಜಾಬ್ಗೆ ಪಟ್ಟು ಬಿದ್ದು ಕೆಲ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕಾರ ಮಾಡಿ, ವಾಪಸ್ ಮನೆಗೆ ತರೆಳಿದ್ದರು. ಕೆಲವರು ಪ್ರತಿಭಟನೆ ನಡೆಸಿದ್ದರು. ಆದರೆ ಈ ಇದೇ ರೀತಿ ಮತ್ತೆ ಪರೀಕ್ಷೆಗೆ ಗೈರಾದರೆ ಮರು ಪರೀಕ್ಷೆ ಇರಲ್ಲ ಅಂತ ಸಚಿವರು ಹೇಳಿದರು.
ಇದೇ ವೇಳೆ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸಚಿವರು, ಸರ್ಕಾರದ ಮುಂದೆ ಇಂತಹ ಪ್ರಸ್ತಾಪವೇ ಇಲ್ಲ ಎಂದರು. ದಿ ಕಾಶ್ಮೀರ್ ಫೈಲ್ಸ್ ನೋಡಲು ಬಲವಂತ ಮಾಡಲ್ಲ. ನೋಡೋದು ಬಿಡೋದು ಕಾಂಗ್ರೆಸ್‌ಗೆ ಬಿಟ್ಟ ವಿಚಾರ. ಈ ಹಿಂದೆ ಏನು ನಡೆದಿತ್ತು ಎಂದು ಜನರಿಗೆ ಹೇಳಬೇಕು. ಅದೇ ಕೆಲಸವನ್ನು ಈ ಚಿತ್ರ ಮಾಡಿದೆ ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ನ್ಯಾಯಮೂರ್ತಿಗೆ ಬೆದರಿಕೆ ಹಾಕಿ ಮೂರು ದಿನ ಕಳೆದರೂ ಜಾತ್ಯತೀತವಾದಿಗಳು ಮೌನವಾಗಿದ್ದಾರೆ; ಸಿಎಂ ಬೊಮ್ಮಾಯಿ:
ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗೆ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆದರಿಕೆ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೀಗ ಒಂದು ವ್ಯವಸ್ಥೆೆಗೆ ಬೆದರಿಕೆ ಹಾಕುವ ಕೆಲಸವಾಗಿದೆ. ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ ವ್ಯವಸ್ಥೆ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತದೆ. ಇದನ್ನು ದಮನ ಮಾಡಬೇಕಿದೆ. ನಾನು ನಮ್ಮ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಆರೋಪಿಗಳನ್ನು ನಮ್ಮ ರಾಜ್ಯದ ವಶಕ್ಕೆ ತೆಗೆದುಕೊಳ್ಳಬೇಕು. ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಇದನ್ನೂ ಓದಿ
ಮಾರ್ಚ್ 23ರವರೆಗೆ ಬೆಂಗಳೂರು ನಗರದಲ್ಲಿ ಮಳೆ ಸಾಧ್ಯತೆ; ರಾಜ್ಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ
Published On - 12:28 pm, Sun, 20 March 22