Bharat Ratna for HD Devegowda | ‘ರೈತರ ಪರ ದನಿ ಎತ್ತಿದ ದೇವೇಗೌಡರಿಗೆ ಭಾರತ ರತ್ನ ನೀಡಿ’

|

Updated on: Mar 13, 2021 | 6:37 PM

ರೈತರ ಪರ ದನಿ ಎತ್ತಿದ ಮಾಜಿ ಪ್ರಧಾನಿ ದೇವೇಗೌಡರಿಗೆ ಭಾರತರತ್ನ ನೀಡಿ ಎಂದು ನಂಜಾವಧೂತ ಸ್ವಾಮೀಜಿಗಳು ಆಗ್ರಹಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಗರೂರಿನಲ್ಲಿ ವಿಭಾಗೀಯ ಒಕ್ಕಲಿಗರ ಸಮಾವೇಶದಲ್ಲಿ ಶ್ರೀಗಳು ಒತ್ತಾಯ ಮಾಡಿದ್ದಾರೆ.

Bharat Ratna for HD Devegowda | ‘ರೈತರ ಪರ ದನಿ ಎತ್ತಿದ ದೇವೇಗೌಡರಿಗೆ ಭಾರತ ರತ್ನ ನೀಡಿ’
‘ರೈತರ ಪರ ದನಿ ಎತ್ತಿದ ದೇವೇಗೌಡರಿಗೆ ಭಾರತ ರತ್ನ ನೀಡಿ’
Follow us on

ನೆಲಮಂಗಲ: ರೈತರ ಪರ ದನಿ ಎತ್ತಿದ ಮಾಜಿ ಪ್ರಧಾನಿ ದೇವೇಗೌಡರಿಗೆ ಭಾರತರತ್ನ ನೀಡಿ ಎಂದು ನಂಜಾವಧೂತ ಸ್ವಾಮೀಜಿಗಳು ಆಗ್ರಹಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಗರೂರಿನಲ್ಲಿ ವಿಭಾಗೀಯ ಒಕ್ಕಲಿಗರ ಸಮಾವೇಶದಲ್ಲಿ ಶ್ರೀಗಳು ಒತ್ತಾಯ ಮಾಡಿದ್ದಾರೆ.

ಒಕ್ಕಲಿಗರ ಸಮಾವೇಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ನಗರೂರಿನಲ್ಲಿ ವಿಭಾಗೀಯ ಒಕ್ಕಲಿಗರ ಸಮಾವೇಶವನ್ನು ಆಯೋಜಿಸಲಾಗಿತ್ತು. BGS ವರ್ಲ್ಡ್ ಸ್ಕೂಲ್ ಆವರಣದಲ್ಲಿ ಸಮಾವೇಶ ನಡೆಯಿತು. ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದಿಂದ ಸಮಾವೇಶ ಏಪರ್ಡಿಸಲಾಗಿತ್ತು. ಒಕ್ಕಲಿಗರಿಗೆ ಇರುವ ಶೇ.4ರಷ್ಟಿರುವ ಮೀಸಲಾತಿ ಶೇ.15ಕ್ಕೆ ಹೆಚ್ಚಿಸಲು ಒತ್ತಾಯ ಮಾಡಿ ಸಮಾವೇಶ ನಡೆಸಲಾಯಿತು.

ಸಮಾವೇಶದಲ್ಲಿ ಪಾಲ್ಗೊಂಡ ಒಕ್ಕಲಿಗರು

ಸಮಾವೇಶದಲ್ಲಿ ನಿರ್ಮಲಾನಂದನಾಥ ಶ್ರೀ, ಕುಮಾರ ಚಂದ್ರಶೇಖರ ಸ್ವಾಮೀಜಿ, ನಂಜಾವಧೂತಶ್ರೀ, ಡಾ.ಸ್ವರೂಪಾನಂದಶ್ರೀ, ರಮಣಾನಂದಶ್ರೀ, ಮಠಾಧೀಶರು, ಬಿಡಿಎ ಅಧ್ಯಕ್ಷ ಎಸ್‌.ಆರ್.ವಿಶ್ವನಾಥ್ ಮತ್ತು ಮಾಜಿ MLC E.ಕೃಷ್ಣಪ್ಪ ಸೇರಿದಂತೆ ಹಲವು ಮುಖಂಡರು ಭಾಗಿಯಾದರು. ಆದರೆ, ಸಮಾವೇಶಕ್ಕೆ ಒಕ್ಕಲಿಗ ಸಮುದಾಯದ ಕೆಲವು ಸಚಿವರು, ಶಾಸಕರು ಹಾಗೂ ರಾಜಕಾರಣಿಗಳು ಗೈರಾಗಿದ್ದರು.

ಬಾಲಗಂಗಾದರನಾಥಶ್ರೀಗಳು

‘ಒಕ್ಕಲಿಗರನ್ನ ಒಗ್ಗೂಡಿಸಿದ ಕೀರ್ತಿ ಬಾಲಗಂಗಾದರನಾಥಶ್ರೀಗೆ ಸಲ್ಲುತ್ತೆ’
ಇನ್ನು, ಉತ್ತರ ಕರ್ನಾಟಕದ ಒಕ್ಕಲಿಗರ ಸಮಸ್ಯೆ ಈಗ ಗೊತ್ತಾಗುತ್ತೆ. ನಾವು ಬೆಂಗಳೂರಿನಲ್ಲಿರುವುದರಿಂದ ಸಮಸ್ಯೆಯ ಬಿಸಿ ತಟ್ಟುತ್ತಿಲ್ಲ ಎಂದು ಸಮಾವೇಶದಲ್ಲಿ ಮಾಜಿ ಎಂಎಲ್​ಸಿ ಕೃಷ್ಣಪ್ಪ ಹೇಳಿದರು. ಒಕ್ಕಲಿಗರನ್ನ ಒಗ್ಗೂಡಿಸಿದ ಕೀರ್ತಿ ಬಾಲಗಂಗಾದರನಾಥಶ್ರೀಗೆ ಸಲ್ಲುತ್ತದೆ ಎಂದು ಸಹ ಹೇಳಿದರು.

ರಾಜಕಾರಣಿಗಳನ್ನು ನಂಬಿದರೆ ಸಮಸ್ಯೆ ಬಗೆಹರಿಯೋದಿಲ್ಲ. ಈಗ ಸ್ಫಟಿಕಪುರಿ, ನಿರ್ಮಲಾನಂದನಾಥಶ್ರೀ ಯೋಗ್ಯರಿದ್ದಾರೆ. ಇವರು ಮನಸ್ಸು ಮಾಡಿದ್ರೆ 105 ಉಪಜಾತಿ ಒಗ್ಗೂಡಿಸಬಹುದು. ಎಲ್ಲ ಒಕ್ಕಲಿಗರನ್ನ ಒಂದು ಮಾಡಬಹುದು ಎಂದು ಕೃಷ್ಣಪ್ಪ ಹೇಳಿದರು.

ನಂಜಾವಧೂತಶ್ರೀಗಳ ಜೊತೆ ನಿರ್ಮಲಾನಂದನಾಥ ಶ್ರೀಗಳು

‘ನಿರ್ಮಲಾನಂದನಾಥರನ್ನ ನೋಡಿದರೆ ಸ್ವಾಮಿ ವಿವೇಕಾನಂದ ನೆನಪಾಗುತ್ತಾರೆ’
ಬಳಿಕ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್‌.ಆರ್‌ ವಿಶ್ವನಾಥ್ ಒಕ್ಕಲುತನ ಮಾಡಿಕೊಂಡು ಒಕ್ಕಲಿಗರು ಬೆಂಗಳೂರಿನ ಸುತ್ತಾಮುತ್ತಾ ವಾಸ ಮಾಡುತ್ತಿದ್ದೇವೆ. ನಿರ್ಮಲಾನಂದನಾಥ ಶ್ರೀಗಳ ನಿರಂತರ ಚಟುವಟಿಕೆಗಳು ನಮ್ಮನ್ನೆಲ್ಲ ಒಗ್ಗೂಡಿಸಿದೆ. ಬೇರೆ ಎಲ್ಲಾ ಸಮುದಾಯದವರು ಮೀಸಲಾತಿ ವಿಚಾರದಲ್ಲಿ ಹೋರಾಟ ಮಾಡಬೇಕಾದರೆ ನಾವೇಕೆ ಕೈಕಟ್ಟಿ ಕೂರಬೇಕು? ಬೆಂಗಳೂರಿನ ಅಭಿವೃದ್ಧಿಗೆ ಅತೀ ಹೆಚ್ಚು ಕೊಡುಗೆ ಕೊಟ್ಟಿರುವುದೇ ಒಕ್ಕಲಿಗರು ಎಂದು ಎಸ್​.ಆರ್​.ವಿಶ್ವನಾಥ್​ ಹೇಳಿದರು.

ಎಸ್‌.ಆರ್‌ ವಿಶ್ವನಾಥ್

‘ಒಕ್ಕಲಿಗ ಸಮುದಾಯದವರು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಾರೆ’
ಬೆಂಗಳೂರನ್ನು 500 ವರ್ಷಗಳ ಹಿಂದೆ ನಿರ್ಮಿಸಿದವರು ಕೆಂಪೇಗೌಡರು. ಅವರಿಗೆ ಬದ್ಧತೆ ಇತ್ತು. ಒಕ್ಕಲಿಗ ಸಮುದಾಯದವರು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಾರೆ ಎಂದು ವಿಶ್ವನಾಥ್​ ಹೇಳಿದರು.

15 ದಿನದ ಹಿಂದೆ ವಿಜಯನಗರದ ಮಠದಲ್ಲಿ ಸಭೆ ಸೇರಿದ್ವಿ. ಒಕ್ಕಲಿಗ ಸಮುದಾಯದ ಎಲ್ಲಾ ಶಾಸಕರು ಸಚಿವರು ಸೇರಿ ಸಭೆ ಮಾಡಿದ್ವಿ. ಒಕ್ಕಲಿಗರ ಅಭಿವೃದ್ದಿ ಪ್ರಾಧಿಕಾರ ವಿವಿಧ ಬೇಡಿಕೆಗಳನ್ನು ಇಟ್ಟಿತ್ತು. ಸದ್ಯ ಅಭಿವೃದ್ಧಿ ಪ್ರಾಧಿಕಾರ ಆಗಿದೆ. ಆದರೆ, ಮತ್ತೆರಡು ಬೇಡಿಕೆಯ ಪರಿಶೀಲನೆ ಮಾಡಬೇಕಿದೆ. ನಿರ್ಮಲಾನಂದನಾಥರನ್ನ ನೋಡಿದರೆ ಸ್ವಾಮಿ ವಿವೇಕಾನಂದರ ರೂಪ ಕಾಣುತ್ತದೆ ಎಂದು ವಿಶ್ವಾನಾಥ್ ಶ್ರೀಗಳನ್ನು ವಿವೇಕಾನಂದರಿಗೆ ಹೋಲಿಸಿದರು.

ಇದನ್ನೂ ಓದಿ: ಇವರು ಸದನದಲ್ಲಿ ಮಾತಾಡೋಕೆ ನಿಂತರೆ ಸಿಎಂ ಯಡಿಯೂರಪ್ಪ ‌ಕೂಡ ಸುಮ್ಮನಾಗ್ತಾರೆ -ಶಾಸಕರನ್ನು ಕೊಂಡಾಡಿದ ಶ್ರೀರಾಮುಲು

Published On - 6:23 pm, Sat, 13 March 21