ಇವರು ಸದನದಲ್ಲಿ ಮಾತಾಡೋಕೆ ನಿಂತರೆ ಸಿಎಂ ಯಡಿಯೂರಪ್ಪ ‌ಕೂಡ ಸುಮ್ಮನಾಗ್ತಾರೆ -ಶಾಸಕರನ್ನು ಕೊಂಡಾಡಿದ ಶ್ರೀರಾಮುಲು

ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಸದನದಲ್ಲಿ ಮಾತನಾಡುತ್ತ ನಿಂತರೆ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಸುಮ್ಮನಾಗ್ತಾರೆ ಎಂದು ಶ್ರೀರಾಮುಲು ಹೇಳಿದರು. ರೈತರ ವಿಚಾರ, ನೀರಾವರಿ ವಿಚಾರದಲ್ಲಿ ಇವರು ಮುಂದಿರುತ್ತಾರೆ ಎಂದು ಶಾಸಕ ಶಿವಲಿಂಗೇಗೌಡರನ್ನ ಸಚಿವ ಬಿ.ಶ್ರೀರಾಮುಲು ಹಾಡಿ ಹೊಗಳಿದರು.

ಇವರು ಸದನದಲ್ಲಿ ಮಾತಾಡೋಕೆ ನಿಂತರೆ ಸಿಎಂ ಯಡಿಯೂರಪ್ಪ ‌ಕೂಡ ಸುಮ್ಮನಾಗ್ತಾರೆ -ಶಾಸಕರನ್ನು ಕೊಂಡಾಡಿದ  ಶ್ರೀರಾಮುಲು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Mar 13, 2021 | 5:45 PM

ಹಾಸನ: ರಾಜಕೀಯದಲ್ಲಿ ಆ ಜಾತಿ ಈ ಜಾತಿ ಎಂದು ಹೇಳುತ್ತೇವೆ. ಆದ್ರೆ ಮಕ್ಕಳಲ್ಲಿ ಸರ್ವಧರ್ಮತ್ವವನ್ನ ಶಿಕ್ಷಕರು ಬೆಳೆಸುತ್ತಾರೆ ಎಂದು ರಾಮನಹಳ್ಳಿ ಇಂದಿರಾ ಗಾಂಧಿ ವಸತಿ ಶಾಲೆ ಉದ್ಘಾಟನೆ ವೇಳೆ ಸಚಿವ ಶ್ರೀರಾಮುಲು ಮಾತನಾಡಿದರು. ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಮನಹಳ್ಳಿಯಲ್ಲಿ ಸಚಿವ ಶ್ರೀರಾಮುಲು ವಸತಿ ಶಾಲೆ ಉದ್ಘಾಟನೆ ಮಾಡಿದರು.

ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಸದನದಲ್ಲಿ ಮಾತನಾಡುತ್ತ ನಿಂತರೆ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಸುಮ್ಮನಾಗ್ತಾರೆ ಎಂದು ಶ್ರೀರಾಮುಲು ಹೇಳಿದರು. ರೈತರ ವಿಚಾರ, ನೀರಾವರಿ ವಿಚಾರದಲ್ಲಿ ಇವರು ಮುಂದಿರುತ್ತಾರೆ ಎಂದು ಶಾಸಕ ಶಿವಲಿಂಗೇಗೌಡರನ್ನ ಸಚಿವ ಬಿ.ಶ್ರೀರಾಮುಲು ಹಾಡಿ ಹೊಗಳಿದರು.

SHIVALINGEGOWDA 1

ಶಿವಲಿಂಗೇಗೌಡ

ಶಿವಲಿಂಗೇಗೌಡರು ಹಿಂದೆ ಕೈಕಟ್ಟಿ ನಿಂತುಕೊಂಡ್ರೇ ಅವರು ಸಾಕಷ್ಟು ವಿಷಯ ಮಾತಾನಾಡುತ್ತಾರೆ. ಕೆಲವರು ಸುಮ್ಮನೇ ಚಟಕ್ಕೆ ಏನೇನೊ ಮಾತನಾಡುತ್ತಾರೆ. ಆದ್ರೆ ಅವರ ಮಾತು ಯಾರಿಗೂ ಅರ್ಥ ಆಗೋದಿಲ್ಲ. ಆದರೆ, ಶಿವಲಿಂಗೇಗೌಡರು ಎಲ್ಲರಿಗೂ ಅರ್ಥ ಆಗೋ ರೀತಿಯಲ್ಲಿ ಅಧ್ಯಯನ ಮಾಡಿಕೊಂಡು ಬಂದು ಮಾತಾಡ್ತಾರೆ. ಅವರು ಎಷ್ಟೆಲ್ಲಾ ಓದಿಕೊಂಡು ಬಂದು ಮಾತಾಡ್ತಾರೆ ಎಂದು ನಮಗೆ ಅನ್ನಿಸುತ್ತೆ ಎಂದು ಶಾಸಕರ ಜನಪರ ಕಾಳಜಿಯನ್ನು ಸಚಿವ ಶ್ರೀರಾಮುಲು ಕೊಂಡಾಡಿದರು.

‘ಶ್ರೀರಾಮುಲುಗೆ ರಾಜ್ಯ ರಾಜಕೀಯದಲ್ಲಿ ಉನ್ನತ ಭವಿಷ್ಯ ಇದೆ’ ರಾಜಕಾರಣದಲ್ಲಿ ಸರಳತೆ ಇರಬೇಕು, ತಾಳ್ಮೆ ಇರಬೇಕು. ಶ್ರೀರಾಮುಲುಗೆ ಈ ಎಲ್ಲಾ ಗುಣಗಳಿವೆ. ಶ್ರೀರಾಮುಲುಗೆ ರಾಜ್ಯ ರಾಜಕೀಯದಲ್ಲಿ ಉನ್ನತ ಭವಿಷ್ಯವಿದೆ. ಇದನ್ನ ನಾನು ಸದನದಲ್ಲೂ ಹೇಳಿದ್ದೆ, ಈಗಲೂ ಹೇಳ್ತೀನಿ ಎಂದು ಸಚಿವ ಶ್ರೀರಾಮುಲುರನ್ನ ಶಾಸಕ ಶಿವಲಿಂಗೇಗೌಡ ಹಾಡಿ ಹೊಗಳಿದರು.

ಶ್ರೀರಾಮುಲು ಅರೋಗ್ಯ ಸಚಿವರಾಗಿದ್ದಾಗ ಒಳ್ಳೇ ಕೆಲಸ ಮಾಡಿದ್ದರು. ಈಗ ಅವರಿಗೆ ಹೇಳಿ ಮಾಡಿಸಿದಂಥ ಸಮಾಜ ಕಲ್ಯಾಣ ಇಲಾಖೆ ಸಿಕ್ಕಿದೆ. ಅವರು ಅಲ್ಲಿಯೂ ಒಳ್ಳೇ ಕೆಲಸ ಮಾಡುತ್ತಾರೆ ಎಂದು ವೇದಿಕೆಯಲ್ಲಿ ಮಾತನಾಡುವ ವೇಳೆ ಸಮಾಜ ಕಲ್ಯಾಣ ಸಚಿವರನ್ನ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕೊಂಡಾಡಿದರು.

ಇದನ್ನೂ ಓದಿ: ಜಾರಕಿಹೊಳಿ ಸಿಡಿ ವಿಚಾರದಲ್ಲಿ ಕಾಂಗ್ರೆಸ್‌ ಮೇಲೆಯೇ ಆರೋಪ ಮಾಡ್ತಿದ್ದಾರೆ, ಮಾಡಲಿ ಬಿಡಿ: ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ