ಜಾರಕಿಹೊಳಿ ಸಿಡಿ ವಿಚಾರದಲ್ಲಿ ಕಾಂಗ್ರೆಸ್‌ ಮೇಲೆಯೇ ಆರೋಪ ಮಾಡ್ತಿದ್ದಾರೆ, ಮಾಡಲಿ ಬಿಡಿ: ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

ಬಿಜೆಪಿ ಸರ್ಕಾರ ಬಂದ ಮೇಲೆ ಸಿಡಿ ಬಗ್ಗೆ ಎಷ್ಟು ಚರ್ಚೆ ಆಗಿದೆ. ಇದನ್ನ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್​ ಹೇಳಿದ್ದಾರೆ, ವಿಶ್ವನಾಥ್ ಮಾತನಾಡಿದ್ದರು ಯೋಗೇಶ್ವರ್ ಮಾತನಾಡಿದ್ರು. ಆದರೆ ಅವರು ಮಾತಾಡಿದ ಬಗ್ಗೆ ಯಾವುದೇ ತನಿಖೆ ಆಗಿಲ್ಲ ಎಂದು ಶಿವಕುಮಾರ್​ ಹೇಳಿದರು.

ಜಾರಕಿಹೊಳಿ ಸಿಡಿ ವಿಚಾರದಲ್ಲಿ ಕಾಂಗ್ರೆಸ್‌ ಮೇಲೆಯೇ ಆರೋಪ ಮಾಡ್ತಿದ್ದಾರೆ, ಮಾಡಲಿ ಬಿಡಿ: ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ
ಡಿ.ಕೆ.ಶಿವಕುಮಾರ್
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Mar 13, 2021 | 4:50 PM

ಶಿವಮೊಗ್ಗ: ರಮೇಶ್ ಜಾರಕಿಹೊಳಿ ಸಿಡಿ ಅಸಲಿಯೋ ಅಥವಾ ನಕಲಿಯೋ ಎಂದು ಮೊದಲು ಗೊತ್ತಾಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಗರದಲ್ಲಿ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ. ಸಿಡಿಯನ್ನ ಮೊದಲು ಎಫ್‌ಎಸ್‌ಎಲ್‌ಗೆ ಕಳುಹಿಸಿ ಕೊಡಲಿ. ಬಿಜೆಪಿ ಸರ್ಕಾರ ಬಂದ ಮೇಲೆ ಸಿಡಿ ಬಗ್ಗೆ ಎಷ್ಟು ಚರ್ಚೆ ಆಗಿದೆ. ಇದನ್ನ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್​ ಹೇಳಿದ್ದಾರೆ, ವಿಶ್ವನಾಥ್ ಮಾತನಾಡಿದರು ಯೋಗೇಶ್ವರ್ ಮಾತನಾಡಿದ್ರು. ಆದರೆ ಅವರು ಮಾತಾಡಿದ ಬಗ್ಗೆ ಯಾವುದೇ ತನಿಖೆ ಆಗಿಲ್ಲ ಎಂದು ಶಿವಕುಮಾರ್​ ಹೇಳಿದರು.

ಎಸ್‌ಐಟಿ ತನಿಖೆ ಮಾಡ್ತಿದೆ ಮಾಡಲಿ, ತಂಡವೂ ಚೆನ್ನಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿಯು ಸಿಎಂ ಬಗ್ಗೆ ಮಾತನಾಡಿದ್ದಾರೆ. ವಿಡಿಯೋದಲ್ಲಿರೋರು ಕನ್ನಡದ ಬಗ್ಗೆಯೂ ಮಾತನಾಡಿದ್ದಾರೆ ಎಂದು ಹೇಳಿದರು.

ಸಿಡಿ ವಿಚಾರದಲ್ಲಿ ಕಾಂಗ್ರೆಸ್‌ ಮೇಲೆಯೇ ಆರೋಪ ಮಾಡ್ತಿದ್ದಾರೆ, ಮಾಡಲಿ ಬಿಡಿ. ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ, ಮಾಡಲಿ ಬಿಡಿ. ನಮ್ಮ ಮೇಲೆ ಬರಲಿ ಬಿಡಿ. ಕಾಂಗ್ರೆಸ್ ಮೇಲೇ ಬರುವುದು ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಇಂದು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್​ ಬೆನ್ನಿಗೆ ನಿಂತ ಕೈ ಪಡೆ ಶಿವಮೊಗ್ಗದ KSRTC ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್​ನ ಜನಾಕ್ರೋಶ ಪ್ರತಿಭಟನೆ ನಡೆಸಿತು. ನಂತರ, ತೆರೆದ ವಾಹನದಲ್ಲಿ ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ ಖಂಡ್ರೆ ಮತ್ತು ಇತರೆ ಮುಖಂಡರು ಭಾಗಿಯಾಗಿ ಪ್ರತಿಭಟನಾ ಱಲಿ ನಡೆಸಿದರು. ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್​ ಕೂಡ ಭಾಗಿಯಾದರು.

ಇದನ್ನೂ ಓದಿ: ಸೆಕ್ಸ್ ಸಿಡಿ ಪ್ರಕರಣ: ಬ್ಲಾಕ್​ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ರಮೇಶ್ ಜಾರಕಿಹೊಳಿ