AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19: ಜನರ ಬಳಿ ಹಣ ಪಡೆದು ನಕಲಿ ಕೋವಿಡ್​-19 ನೆಗೆಟಿವ್​ ವರದಿ ನೀಡುತ್ತಿದ್ದ ಕಿರಾತಕ ಅಂದರ್, ಯಾವೂರಲ್ಲಿ?

ಗುಜರಾತ್‌ನ ರಾಜ್‌ಕೋಟ್ ನಗರದ ಜನರ ಬಳಿ ಹಣ ಪಡೆದು ನಕಲಿ ಕೋವಿಡ್​-19 ನೆಗೆಟಿವ್​ ವರದಿಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಪ್ರಯೋಗಾಲಯದ ಏಜೆಂಟ್​ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

Covid-19: ಜನರ ಬಳಿ ಹಣ ಪಡೆದು ನಕಲಿ ಕೋವಿಡ್​-19 ನೆಗೆಟಿವ್​ ವರದಿ ನೀಡುತ್ತಿದ್ದ ಕಿರಾತಕ ಅಂದರ್, ಯಾವೂರಲ್ಲಿ?
ಪ್ರಾತಿನಿಧಿಕ ಚಿತ್ರ
Follow us
ಪೃಥ್ವಿಶಂಕರ
|

Updated on: Mar 13, 2021 | 5:37 PM

ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್ ನಗರದ ಜನರ ಬಳಿ ಹಣ ಪಡೆದು ನಕಲಿ ಕೋವಿಡ್​-19 ನೆಗೆಟಿವ್​ ವರದಿಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಪ್ರಯೋಗಾಲಯದ ಏಜೆಂಟ್​ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿ ಪರಾಗ್ ಜೋಶಿ ತಲಾ 1,500 ರೂ.ಗಳಿಗೆ ಅಗತ್ಯವಿರುವ ಜನರಿಗೆ ಕೋವಿಡ್​-19 ನೆಗೆಟಿವ್ ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.

ಉಪ ವೈದ್ಯಕೀಯ ಅಧಿಕಾರಿ ಡಾ. ಪರಾಗ್ ಚುನಾರಾ ಅವರು ನೀಡಿದ ದೂರಿನ ಆಧಾರದ ಮೇಲೆ, ಜೋಶಿ ಮತ್ತು ಇತರ ಅಪರಿಚಿತ ಆರೋಪಿಗಳ ವಿರುದ್ಧ ಗಾಂಧಿಗ್ರಾಮ್ ಪೊಲೀಸ್ ಠಾಣೆಯಲ್ಲಿ ಐಪಿಸಿ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಗುಜರಾತ್ ವೈದ್ಯಕೀಯ ವೈದ್ಯರ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸದೆ ಪ್ರಮಾಣಪತ್ರ ನೀಡುತ್ತಿದ್ದ ಆರೋಪಿ ಜೋಶಿ ಅನಧಿಕೃತ ಸ್ವ್ಯಾಬ್ ಮಾದರಿ ಸಂಗ್ರಹ ಕೇಂದ್ರವನ್ನು ನಡೆಸುತ್ತಿದ್ದು, ಜನರ ಬಳಿ ಅವರ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸದೆ ಅವರಿಗೆ ಕೋವಿಡ್​-19 ನೆಗೆಟಿವ್ ಪ್ರಮಾಣಪತ್ರಗಳನ್ನು ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ ಬೇರೊಬ್ಬರ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸುವುದರ ಜೊತೆಗೆ ಯಾರಿಗೆ ಕೋವಿಡ್​-19 ನೆಗೆಟಿವ್ ಪ್ರಮಾಣಪತ್ರ ಅವಶ್ಯಕವಾಗಿರುತ್ತದೊ ಅಂತಹವರ ದಾಖಲೆಗಳನ್ನು ಮಾದರಿ ಜೊತೆಗೆ ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತಿದ್ದನಂತೆ.

ಯಾವುದೇ ಪರವಾನಗಿ ಇರಲಿಲ್ಲ.. ನಂತರ ಪ್ರಯೋಗಾಲಯದ ಸಿಬ್ಬಂದಿಗಳು ಯಾರ ಹೆಸರಲ್ಲಿ ಮಾದರಿ ಪರೀಕ್ಷೆಗೆ ಬಂದಿತ್ತೋ, ಆ ವ್ಯಕ್ತಿಯ ಹೆಸರಿನಲ್ಲಿ ವರದಿಯನ್ನು ನೀಡುತ್ತಿದ್ದರಂತೆ. ಇನ್ನೊಂದು ವಿಚಾರವೆಂದರೆ ಈ ಆರೋಪಿಗಳಿಗೆ ಮಾದರಿ ಸಂಗ್ರಹ ಕೇಂದ್ರವನ್ನು ನಡೆಸಲು ಯಾವುದೇ ಪರವಾನಗಿ ಇರಲಿಲ್ಲ. ಆದ್ದರಿಂದ ಗುಜರಾತ್ ವೈದ್ಯಕೀಯ ವೈದ್ಯರ ಕಾಯ್ದೆಯಡಿ ಕೂಡ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಈ ವರ್ಷದಲ್ಲೇ ಅತ್ಯಂತ ಹೆಚ್ಚು ಕೊರೊನಾ ಕೇಸ್​​ಗಳು ಇಂದು ದಾಖಲು; ಮಹಾರಾಷ್ಟ್ರದ ಹಲವು ನಗರಗಳು ಮತ್ತೆ ಲಾಕ್​