ಮೈಸೂರಿನಲ್ಲಿ ಮಹಿಳೆಯರ ಮಾಂಗಲ್ಯ ಸರ ದೋಚುತ್ತಿದ್ದ ಇಬ್ಬರ ಬಂಧನ
ಬಂಧಿತ ಆರೋಪಿ ಚಂದನ್ ಜೊತೆ ಮಹೇಶ್ ಎಂಬುವವನು ಕಳ್ಳತನಕ್ಕೆ ಕೈ ಹಾಕಿದ್ದನಂತೆ. ಆದರೆ ಮಹೇಶ್ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ. ಈ ಪ್ರಕರಣ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಬಂಧಿತರಿಂದ ಸುಮಾರು 90 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು: ಮಹಿಳೆಯರ ಚಿನ್ನಾಭರಣವನ್ನು ದೋಚುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, ಬಂಧಿತ ವ್ಯಕ್ತಿಗಳಿಂದ 90 ಗ್ರಾಂ ಚಿನ್ನಾಭರಣವನ್ನು ವಶಕ್ಕ ಪಡೆದಿದ್ದಾರೆ.
ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ನೌಕರನಾಗಿರುವ ಚಂದನ್ ಎಂಬಾತ ಮಹಿಳೆಯ ಮಾಂಗಲ್ಯ ಸರವನ್ನು ಕಳವು ಮಾಡುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ. ಕಳುವು ಮಾಡಿದ್ದ ಚಿನ್ನವನ್ನು ಗಿರವಿ ಇಡಲು ಸುಧಾರಾಣಿ ಎಂಬ ಮಹಿಳೆ ಚಂದನ್ಗೆ ಸಹಕರಿಸುತ್ತಿದ್ದಳಂತೆ. 21 ವರ್ಷದ ಚಂದನ್ ನಂಜನಗೂಡು, ಹುಲ್ಲಹಳ್ಳಿ ಹಾಗೂ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವು ಮಾಡುತ್ತಿದ್ದ. ನಂಜನಗೂಡು ಗ್ರಾಮಾಂತರ ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳಾದ ಚಂದನ್ ಮತ್ತು ಸುಧಾರಾಣಿಯ ಕೃತ್ಯ ಬಯಲಿಗೆ ಬಂದಿದ್ದು, ಸದ್ಯ ಬಂಧಿಸಿದ್ದಾರೆ.
ಬಂಧಿತ ಆರೋಪಿ ಚಂದನ್ ಜೊತೆ ಮಹೇಶ್ ಎಂಬುವವನು ಕಳ್ಳತನಕ್ಕೆ ಕೈ ಹಾಕಿದ್ದನಂತೆ. ಆದರೆ ಮಹೇಶ್ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ. ಈ ಪ್ರಕರಣ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಬಂಧಿತರಿಂದ ಸುಮಾರು 90 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ
ಕೈಗೆ ಚಾಕು ಇರಿದು ಮಾಂಗಲ್ಯ ಸರ ಕದ್ದ ಖದೀಮರು, ಎಲ್ಲಿ?
ಒಳ ಉಡುಪಿನಲ್ಲಿ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಅರೆಸ್ಟ್