
ಮಾದಕ ಪದಾರ್ಥ ಜಾಲದ ವಿರುದ್ಧ ತನಿಖೆಯನ್ನು ಚುರುಕುಗೊಳಿಸಿರುವ ಎನ್ಸಿಬಿ ಅಧಿಕಾರಿಗಳು ಮಲಯಾಳಂ ನಟನೊಬ್ಬನ ಜೊತೆ ಸಂಪರ್ಕವಿಟ್ಟುಕೊಂಡಿರುವ ಮೊಹಮ್ಮದ್ ಅನೂಪ್ ಹೆಸರಿನ 38 ವರ್ಷದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ತನಿಖೆ ವೇಳೆ ಮಲಯಾಳಂ ನಟ ಬಿನೀಶ್ ಕೊಡಿಯೇರಿಯ ಹೆಸರನ್ನು ಅನೂಪ್ ಬಹಿರಂಗಗೊಳಿಸಿದ್ದಾನೆ. ಅವನ ಹೇಳಿಕೆ ಮತ್ತು ಎನ್ಸಿಬಿ ಮೂಲಗಳ ಪ್ರಕಾರ ಬಿನೀಶ್, ಅನೂಪ್ ಒಡೆತನದ ರೆಸ್ಟೋರಂಟ್ ಒಂದಕ್ಕೆ ಧನಸಹಾಯ ಮಾಡಿದ್ದನಂತೆ.
2013 ರಿಂದ ಬೆಂಗಳೂರಿನಲ್ಲಿ ನೆಲೆಸಿರುವುದಾಗಿ ಹೇಳಿರುವ ಆನೂಪ್ 2015ರಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ಆರಂಭಿಸಿದೆನೆಂದು ಎನ್ಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಸದರಿ ಹೋಟೆಲನ್ನು ಪ್ರಾರಂಭಿಸಲು ಅವನಿಗೆ ಬಿನೀಶ್ ಹಣ ನೀಡಿದ್ದ.
ಅನೂಪ್ ಆಫ್ರಿಕನ್ ಪ್ರಜೆಗಳಿಂದ MDMA ಮಾತ್ರೆಗಳನ್ನು ಖರೀದಿಸಿ ಬೇರೆಯವರಿಗೆ ಮಾರುತ್ತಿದ್ದನೆಂದು ವಿಚಾರಣೆ ವೇಳೆ ಗೊತ್ತಾಗಿದೆ.
ಏತನ್ಮಧ್ಯೆ, ಸಿಸಿಬಿ ಆಧಿಕಾರಿಗಳು ಖ್ಯಾತ ಬಹುಭಾಷೆ ತಾರೆಯೊಬ್ಬಳ ಸ್ನೇಹಿತನನ್ನು ಬಂಧಿಸಿದ್ದು ಅವನ ವಿಚಾರಣೆ ನಡೆಸಿದ್ದಾರೆ. ಅವನ ಹೆಸರು ರವಿಶಂಕರ್ ಎಂದು ತಿಳಿದುಬಂದಿದ್ದು ಅವನು ನೀಡಿದ ಮಾಹಿತಿ ಮೇರೆಗೆ ಆ ನಟಿಗೂ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆಯೆಂದು ಸಿಸಿಬಿ ಮೂಲಗಳು ತಿಳಿಸಿವೆ.