ಅತ್ಯಾಚಾರಿ ಆರೋಪಿ ಹತ್ಯೆ ಕೇಸ್​, ನವಲಗುಂದ PSI ಸಸ್ಪೆಂಡ್​

|

Updated on: Jan 03, 2020 | 2:20 PM

ಧಾರವಾಡ: ಕರ್ತವ್ಯ ನಿರ್ಲಕ್ಷ್ಯದ ಆರೋಪ ಮೇರೆಗೆ ನವಲಗುಂದ ಪಿಎಸ್​ಐ ಜಯಪಾಲ ಪಾಟೀಲ ಅವರನ್ನು ಅಮಾನತುಗೊಳಿಸಿ ಧಾರವಾಡ ಎಸ್​ಪಿ ವರ್ತಿಕಾ ಕಟಿಯಾರ್ ಆದೇಶಿಸಿದ್ದಾರೆ. ಅಪ್ರಾಪ್ತ ಬಾಲಕಿ ಮೇಲೆ ಆರೋಪಿ ಫಕ್ರುದ್ದೀನ್ ನದಾಫ್ ಅತ್ಯಾಚಾರ ಎಸಗಿದ್ದ. ಇದರಿಂದ ರೊಚ್ಚಿಗೆದ್ದ ಜನರು ಆರೋಪಿ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಗಾಯಾಳುವನ್ನು ಪೊಲೀಸರು ತಾಲೂಕಾಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಬಂದಿದ್ದ ಬಾಲಕಿ ಮಾವ ನದಾಫ್​ಗೆ ಚಾಕುವಿನಿಂದ ಇರಿದಿದ್ದ. ನಂತರ ಆರೋಪಿಯನ್ನು ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಲಾಗಿತ್ತು. ಡಿ.30ರಂದು ಚಿಕಿತ್ಸೆ ಫಲಿಸದೆ ನದಾಫ್ ಮೃತಪಟ್ಟಿದ್ದಾನೆ. ಅತ್ಯಾಚಾರಿ ಆರೋಪಿ […]

ಅತ್ಯಾಚಾರಿ ಆರೋಪಿ ಹತ್ಯೆ ಕೇಸ್​, ನವಲಗುಂದ PSI ಸಸ್ಪೆಂಡ್​
Follow us on

ಧಾರವಾಡ: ಕರ್ತವ್ಯ ನಿರ್ಲಕ್ಷ್ಯದ ಆರೋಪ ಮೇರೆಗೆ ನವಲಗುಂದ ಪಿಎಸ್​ಐ ಜಯಪಾಲ ಪಾಟೀಲ ಅವರನ್ನು ಅಮಾನತುಗೊಳಿಸಿ ಧಾರವಾಡ ಎಸ್​ಪಿ ವರ್ತಿಕಾ ಕಟಿಯಾರ್ ಆದೇಶಿಸಿದ್ದಾರೆ.

ಅಪ್ರಾಪ್ತ ಬಾಲಕಿ ಮೇಲೆ ಆರೋಪಿ ಫಕ್ರುದ್ದೀನ್ ನದಾಫ್ ಅತ್ಯಾಚಾರ ಎಸಗಿದ್ದ. ಇದರಿಂದ ರೊಚ್ಚಿಗೆದ್ದ ಜನರು ಆರೋಪಿ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಗಾಯಾಳುವನ್ನು ಪೊಲೀಸರು ತಾಲೂಕಾಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಬಂದಿದ್ದ ಬಾಲಕಿ ಮಾವ ನದಾಫ್​ಗೆ ಚಾಕುವಿನಿಂದ ಇರಿದಿದ್ದ. ನಂತರ ಆರೋಪಿಯನ್ನು ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಲಾಗಿತ್ತು. ಡಿ.30ರಂದು ಚಿಕಿತ್ಸೆ ಫಲಿಸದೆ ನದಾಫ್ ಮೃತಪಟ್ಟಿದ್ದಾನೆ.

ಅತ್ಯಾಚಾರಿ ಆರೋಪಿ ನದಾಫ್ ಸಾವಿಗೆ ಪೊಲೀಸರ ವೈಫಲ್ಯ ಎಂದು ಆರೋಪಿಸಲಾಗಿದೆ. ಹೀಗಾಗಿ ನದಾಫ್​ಗೆ ಪೊಲೀಸರು ರಕ್ಷಣೆ ಕೊಡದ ಆರೋಪದ ಮೇರೆಗೆ ನವಲಗುಂದ ಪಿಎಸ್​ಐ ಜಯಪಾಲ ಪಾಟೀಲ ಅವರನ್ನು ಅಮಾನತು ಮಾಡಲಾಗಿದೆ.