ಇವರೇ ನಮ್ಮ ‘ಶಕ್ತಿ’ಮಾನ್​ಗಳು! ದಿನಕ್ಕೆ 25 ಟ್ರ್ಯಾಕ್ಟರ್ ಕಬ್ಬು ಲೋಡ್ ಮಾಡ್ತಾರೆ..

ಇವರೇ ನಮ್ಮ ‘ಶಕ್ತಿ’ಮಾನ್​ಗಳು!  ದಿನಕ್ಕೆ 25 ಟ್ರ್ಯಾಕ್ಟರ್ ಕಬ್ಬು ಲೋಡ್ ಮಾಡ್ತಾರೆ..

ಬಾಗಲಕೋಟೆ: ಹಳ್ಳಿ ಹೈದರ ತಾಕತ್ ಮುಂದೆ ಯಾರು ಸಾಟಿ ಇಲ್ಲ. ಆರು ಜನರಿಂದ 25 ಟ್ರ್ಯಾಕ್ಟರ್ ಕಬ್ಬು ಲೋಡ್ ಮಾಡಿ ಹುಬ್ಬೇರಿಸುವಂತೆ ಮಾಡಿದ್ದಾರೆ. ಒಂದು ದಿನಕ್ಕೆ 4 ಟ್ರ್ಯಾಕ್ಟರ್ ಕಬ್ಬು ಲೋಡ್ ಮಾಡೋಕೆ ಹರಸಾಹಸ ಪಡಬೇಕಾಗುತ್ತದೆ.

ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದ 20 ರೈತರು 10 ದಿನ ಮಾಡುವ ಕೆಲಸವನ್ನು ಒಂದೇ ದಿನದಲ್ಲಿ ಮಾಡಿ ಮುಗಿಸಿದ್ದಾರೆ. ಗ್ರಾಮದ 20 ಕಾರ್ಮಿಕರು ಸೇರಿ ಒಂದೇ ದಿನಕ್ಕೆ ಬರೊಬ್ಬರಿ 20 ಟ್ರ್ಯಾಕ್ಟರ್ ಕಬ್ಬನ್ನು ಕಾಟಾವು ಮಾಡಿ, ಲೋಡ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.Click on your DTH Provider to Add TV9 Kannada