ಹೊಸ ವರ್ಷದಂದೇ ದೇವಾಲಯದ ಹುಂಡಿ ಹೊತ್ತೊಯ್ದ ಖದೀಮರು

ಹೊಸ ವರ್ಷದಂದೇ ದೇವಾಲಯದ ಹುಂಡಿ ಹೊತ್ತೊಯ್ದ ಖದೀಮರು

ರಾಮನಗರ: ದೇವಾಲಯಕ್ಕೆ ನುಗ್ಗಿ ಹುಂಡಿಯನ್ನೇ ಕಳ್ಳರು ಹೊತ್ತೊಯ್ದಿರುವ ಘಟನೆ ರಾಮನಗರ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮರಳಸಿದ್ದೇಶ್ವರ ದೇವಾಲಯದಲ್ಲಿ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜನವರಿ 1ರ ಮಧ್ಯರಾತ್ರಿ ದೇವಾಲಯಕ್ಕೆ ಏಣಿ ಹಾಕಿ ಖದೀಮರು ತಮ್ಮ ಕರಾಮತ್ತು ತೋರಿಸಿದ್ದಾರೆ. ಹುಂಡಿ ಜೊತೆಗೆ ದೇವಾಲಯದಲ್ಲಿದ್ದ ಬೆಳ್ಳಿ ತಟ್ಟೆ ಮತ್ತಿತರ ವಸ್ತುಗಳನ್ನು ಖದೀಮರು ಲಪಟಾಯಿಸಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click on your DTH Provider to Add TV9 Kannada