AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಥ್ಲೆಟಿಕ್ಸ್​​ ಕೂಟದಲ್ಲಿ ಕಲಾತಂಡಗಳ ಕಲರವ, ಬಾನಂಗಳವೂ ಕಲರ್​ಫುಲ್..

ದಕ್ಷಿಣ ಕನ್ನಡ: ದೊಡ್ಡ ಮೈದಾನ.. ಆ ಮೈದಾನದಲ್ಲಿ ಎಲ್ಲೇ ಹೋದ್ರು ಕಲರ್​ಫುಲ್.. ಎದುರಲ್ಲಿ ಕಲಾತಂಡಗಳ ವೈಭವ.. ಆಗಾಸದಲ್ಲಿ ಪಟಾಕಿಗಳ ಚಿತ್ತಾರ.. ಇದ್ರ ಜೊತೆಗೆ ಕ್ರೀಡಾಪುಟುಗಳ ಜಿದ್ದು.. ಅಬ್ಬಬ್ಬಾ.. ಇದೆಲ್ಲಾ ಒಂದೇ ಕಡೆ ಇದ್ರೆ ಹೇಗ್ ಹೇಗಿರುತ್ತೆ ಅಲ್ವಾ. ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ: ಅಂದ್ಹಾಗೆ, ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಕ್ರೀಡಾ ಜಗತ್ತು ತೆರೆದುಕೊಂಡಿದೆ. 80 ನೇ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ನಿನ್ನೆ ಕೇಂದ್ರ ಸಚಿವ ಕಿರಣ್​ ರಿಜ್ಜು ಚಾಲನೆ ಕೊಟ್ಟಿದ್ದಾರೆ. ಇನ್ನೂ ನಾಲ್ಕು ದಿನ […]

ಅಥ್ಲೆಟಿಕ್ಸ್​​ ಕೂಟದಲ್ಲಿ ಕಲಾತಂಡಗಳ ಕಲರವ, ಬಾನಂಗಳವೂ ಕಲರ್​ಫುಲ್..
Follow us
ಸಾಧು ಶ್ರೀನಾಥ್​
|

Updated on:Jan 04, 2020 | 10:51 AM

ದಕ್ಷಿಣ ಕನ್ನಡ: ದೊಡ್ಡ ಮೈದಾನ.. ಆ ಮೈದಾನದಲ್ಲಿ ಎಲ್ಲೇ ಹೋದ್ರು ಕಲರ್​ಫುಲ್.. ಎದುರಲ್ಲಿ ಕಲಾತಂಡಗಳ ವೈಭವ.. ಆಗಾಸದಲ್ಲಿ ಪಟಾಕಿಗಳ ಚಿತ್ತಾರ.. ಇದ್ರ ಜೊತೆಗೆ ಕ್ರೀಡಾಪುಟುಗಳ ಜಿದ್ದು.. ಅಬ್ಬಬ್ಬಾ.. ಇದೆಲ್ಲಾ ಒಂದೇ ಕಡೆ ಇದ್ರೆ ಹೇಗ್ ಹೇಗಿರುತ್ತೆ ಅಲ್ವಾ.

ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ: ಅಂದ್ಹಾಗೆ, ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಕ್ರೀಡಾ ಜಗತ್ತು ತೆರೆದುಕೊಂಡಿದೆ. 80 ನೇ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ನಿನ್ನೆ ಕೇಂದ್ರ ಸಚಿವ ಕಿರಣ್​ ರಿಜ್ಜು ಚಾಲನೆ ಕೊಟ್ಟಿದ್ದಾರೆ. ಇನ್ನೂ ನಾಲ್ಕು ದಿನ ಭರ್ಜರಿಯಾಗಿ ಸ್ಪರ್ಧೆಗಳು ನಡೆಯಲಿದೆ. ವಿಶೇಷ ಅಂದ್ರೆ, 150 ಕ್ಕೂ ಹೆಚ್ಚು ಕಲಾತಂಡಗಳಲ್ಲಿ 5 ಸಾವಿರ ಕಲಾವಿದರು ಭಾಗಿಯಾಗಿದ್ರು. ಸಾಂಸ್ಕೃತಿಕ ಮೆರವಣಿಗೆ ಎಲ್ಲರನ್ನು ಆಕರ್ಷಿಸಿತು. ಈ ಮೆರವಣಿಗೆಯಲ್ಲಿ ದೇಶದ ಅತಿದೊಡ್ಡ ಮನುಷ್ಯ, ಬೃಹತ್ ಗಾತ್ರದ ಸುಲ್ತಾನ್ ಹೋರಿ, ಕೊರಗರ ಡೋಲು ಸೇರಿದಂತೆ ವಿವಿಧ ಬಗೆಯ ತಂಡಗಳು ಮಿಂಚಿದ್ವು.

ಇನ್ನು, ಈ ಅಥ್ಲೆಟಿಕ್ಸ್​ಗೆ ದೇಶದ ವಿವಿಧ ರಾಜ್ಯಗಳ 275 ಯೂನಿವರ್ಸಿಟಿಗಳಿಂದ ಕ್ರೀಡಾಪಟುಗಳು ಗಳು ಭಾಗವಹಿಸಿದ್ದಾರೆ. ಏನಿಲ್ಲ ಅಂದ್ರೂ 4,000 ಕ್ರೀಡಾಪಟುಗಳು, 1000 ಕ್ರೀಡಾ ತರಬೇತುದಾರರು, ನೂರಾರು ತೀರ್ಪುಗಾರರಿದ್ದಾರೆ. ಇನ್ನು, ನಿನ್ನೆ ನಡೆದ ರನ್ನಿಂಗ್ ರೇಸ್ ಅಂತೂ ರೋಮಾಂಚನಕಾರಿಯಾಗಿತ್ತು. ಸದ್ಯ ಈ ಕ್ರೀಡಾಕೂಟದಲ್ಲಿ ಕಲಾತಂಡಗಳ ಅದ್ಧೂರಿತನ ಮೇಳೈಸಿದ್ದು, ಕಲಾರಸಿಕರಿಗೆ ಇದು ಸಿಹಿಯೂಟದಂತಾಗಿದೆ. ಈಗ ನಡೆಯುತ್ತಿರುವ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕ್ರೀಡಾಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

Published On - 8:43 am, Sat, 4 January 20

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್