ವಿಸಿ ನಾಲೆ ಕಾರು ದುರಂತ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದ ಮಾಜಿ ಸಚಿವ ಸಿಎಸ್ ಪುಟ್ಟರಾಜು

|

Updated on: Nov 08, 2023 | 11:56 AM

ಅಪಾಯಕಾರಿ ತಿರುವುಗಳಿರುವ ರಸ್ತೆಯ ಭಾಗಗಳಲ್ಲಿ ತಡೆಗೋಡೆ, ಬ್ಯಾರಿಕೇಡ್ ಗಳನ್ನು ನಿರ್ಮಿಸದಿರುವುದು ಮತ್ತು ಸೂಚನಾಫಲಕಗಳನ್ನು ನೆಡದಿರುವುದೇ ಕಾರಣ ಎಂದು ಪುಟ್ಟರಾಜು ಹೇಳಿದರು. ತಾನು ಜಿಲ್ಲಾಧಿಕಾರಿಯೊಂದಿಗೆ ಮಾತಾಡಿರುವುದಾಗಿ ಹೇಳಿದ ಮಾಜಿ ಸಚಿವರು ಮೃತರ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರವಾಗಿ ತಲಾ 10 ಲಕ್ಷ ರೂ. ಪರಿಹಾರ ಧನ ಕೂಡಲೇ ಬಿಡುಗಡೆ ಮಾಡುವಂತೆ ತಿಳಿಸಿರುವುದಾಗಿ ಹೇಳಿದರು.

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬನಘಟ್ಟ (Banaghatta) ಬಳಿ ಕಾರೊಂದು ವಿಸಿ ನಾಲೆಗೆ (VC Nale) ಉರುಳಿ ಐವರು ಜಲಸಮಾಧಿಯಾಗಿರುವ ಘೋರ ದುರಂತ ಕನ್ನಡಿಗರನ್ನು ಬೆಚ್ಚಿ ಬೀಳಿಸಿದೆ. ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮೇಲುಕೋಟೆ ಮಾಜಿ ಶಾಸಕ ಸಿಎಸ್ ಪುಟ್ಟರಾಜು (CS Puttaraju) ದುರಂತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ, ಈ ನಿಟ್ಟಿನಲ್ಲಿ ಅವರು ಮುಂಜಾಗ್ರತೆಯ ಕ್ರಮಗಳನ್ನು ತೆಗೆದಿಕೊಳ್ಳದಿದ್ದರೆ, ಅವರ ವಿರುದ್ಧ ಕೊಲೆ ಪ್ರಕರಣ ದಾಖಲೆ ಮಾಡಬೇಕಾಗುತ್ತದೆ ಎಂದು ಹೇಳಿದರು. ಅಪಘಾತಕ್ಕೆ ವಿಸಿ ನಾಲೆ ಕಾರಣವಲ್ಲ, ಅಪಾಯಕಾರಿ ತಿರುವುಗಳಿರುವ ರಸ್ತೆಯ ಭಾಗಗಳಲ್ಲಿ ತಡೆಗೋಡೆ, ಬ್ಯಾರಿಕೇಡ್ ಗಳನ್ನು ನಿರ್ಮಿಸದಿರುವುದು ಮತ್ತು ಸೂಚನಾಫಲಕಗಳನ್ನು ನೆಡದಿರುವುದೇ ಕಾರಣ ಎಂದು ಪುಟ್ಟರಾಜು ಹೇಳಿದರು. ತಾನು ಜಿಲ್ಲಾಧಿಕಾರಿಯೊಂದಿಗೆ ಮಾತಾಡಿರುವುದಾಗಿ ಹೇಳಿದ ಮಾಜಿ ಸಚಿವರು ಮೃತರ ಕುಟುಂಬಗಳಿಗೆ ತಾತ್ಕಾಲಿಕ ಪರಿಹಾರವಾಗಿ ತಲಾ 10 ಲಕ್ಷ ರೂ. ಪರಿಹಾರ ಧನ ಕೂಡಲೇ ಬಿಡುಗಡೆ ಮಾಡುವಂತೆ ತಿಳಿಸಿರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on