ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನಕ್ಕೆ ಓಡೋಡಿ ಬರುತ್ತಿದ್ದಾರೆ ಭೈರತಿ, ಆದ್ರೆ..

|

Updated on: Dec 10, 2019 | 3:16 PM

ಬೆಂಗಳೂರು: ಸಚಿವ ಸ್ಥಾನ ಆಕಾಂಕ್ಷಿಯಾಗಿಯೇ ಈ ಹಿಂದೆ ತಮ್ಮ ಶಾಸಕ ಸ್ಥಾನಕ್ಕೆ ಓಡೋಡಿ ಬಂದು ರಾಜೀನಾಮೆ ನೀಡಿದ್ದ, ಬಳಿಕ ನಡೆದ ಬೈ ಎಲೆಕ್ಷನ್​ನಲ್ಲಿ ಶಾಸಕರಾಗಿ ಮರು ಆಯ್ಕೆಯಾದ ಕೆ ಆರ್​ ಪುರದ ಭೈರತಿ ಬಸವರಾಜ್ ಅದಾಗಲೇ ಸಚಿವ ಸ್ಥಾನ ಕಾಯಂ ಮಾಡಿಕೊಂಡಿದ್ದಾರೆ. ಸಿಎಂ ಬಿಎಸ್‌ವೈ ಈಗಾಗ್ಲೇ ಸಚಿವ ಸ್ಥಾನ ಖಾತ್ರಿ ಮಾಡಿದ್ದಾರೆ. ಈ ಸಂಬಂಧ ಯಡಿಯೂರಪ್ಪರನ್ನ ಭೇಟಿಯಾಗಿ ಮಾತಾಡುತ್ತೇನೆ. ಬೆಂಗಳೂರು ನಗರಾಭಿವೃದ್ಧಿ ಕೊಡುವಂತೆ ಕೇಳಿದ್ದೇನೆ. ಆ ಖಾತೆ ಕೊಟ್ರೆ ನಿಭಾಯಿಸುತ್ತೇನೆ. ಇದನ್ನು ಹೊರತುಪಡಿಸಿ ಇನ್ನೂ ಕೆಲ ಖಾತೆಗಳನ್ನು […]

ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನಕ್ಕೆ ಓಡೋಡಿ ಬರುತ್ತಿದ್ದಾರೆ ಭೈರತಿ, ಆದ್ರೆ..
Follow us on

ಬೆಂಗಳೂರು: ಸಚಿವ ಸ್ಥಾನ ಆಕಾಂಕ್ಷಿಯಾಗಿಯೇ ಈ ಹಿಂದೆ ತಮ್ಮ ಶಾಸಕ ಸ್ಥಾನಕ್ಕೆ ಓಡೋಡಿ ಬಂದು ರಾಜೀನಾಮೆ ನೀಡಿದ್ದ, ಬಳಿಕ ನಡೆದ ಬೈ ಎಲೆಕ್ಷನ್​ನಲ್ಲಿ ಶಾಸಕರಾಗಿ ಮರು ಆಯ್ಕೆಯಾದ ಕೆ ಆರ್​ ಪುರದ ಭೈರತಿ ಬಸವರಾಜ್ ಅದಾಗಲೇ ಸಚಿವ ಸ್ಥಾನ ಕಾಯಂ ಮಾಡಿಕೊಂಡಿದ್ದಾರೆ.

ಸಿಎಂ ಬಿಎಸ್‌ವೈ ಈಗಾಗ್ಲೇ ಸಚಿವ ಸ್ಥಾನ ಖಾತ್ರಿ ಮಾಡಿದ್ದಾರೆ. ಈ ಸಂಬಂಧ ಯಡಿಯೂರಪ್ಪರನ್ನ ಭೇಟಿಯಾಗಿ ಮಾತಾಡುತ್ತೇನೆ. ಬೆಂಗಳೂರು ನಗರಾಭಿವೃದ್ಧಿ ಕೊಡುವಂತೆ ಕೇಳಿದ್ದೇನೆ. ಆ ಖಾತೆ ಕೊಟ್ರೆ ನಿಭಾಯಿಸುತ್ತೇನೆ. ಇದನ್ನು ಹೊರತುಪಡಿಸಿ ಇನ್ನೂ ಕೆಲ ಖಾತೆಗಳನ್ನು ಕೇಳಿದ್ದೇನೆ. ಸಿಎಂ ಬಿಎಸ್‌ವೈ ಏನು ನಿರ್ಧಾರ ಮಾಡ್ತಾರೋ ನೋಡಬೇಕು ಎಂದು ಬೆಂಗಳೂರಿನಲ್ಲಿ ನೂತನ ಶಾಸಕ ಭೈರತಿ ಬಸವರಾಜ್ ಹೇಳಿದ್ದಾರೆ.

ಅವರಿಬ್ಬರೂ ಗೆದ್ದಿದ್ದರೆ ನನಗೆ ನೈತಿಕ ಬಲ ಸಿಗುತ್ತಿತ್ತು:
ಕೊಟ್ಟ ಮಾತು ಉಳಿಸಿಕೊಳ್ಳೋದಾಗಿ ಸಿಎಂ ಬಿಎಸ್‌ವೈ ನನಗೆ ಹೇಳಿದ್ದಾರೆ. ನಂಬಿಕೆ ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ, ವಿಶ್ವಾಸ ನನಗೂ ಇದೆ. ಪಕ್ಕದ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಅವರು ಅನುಭವಿಸಿದ ಸೋಲು ನನಗೆ ನೋವು ತಂದಿದೆ. ವಿಶ್ವನಾಥ್ ಮತ್ತು ಎಂಟಿಬಿ ಗೆದ್ದಿದ್ದರೆ ನನಗೆ ನೈತಿಕ ಬಲ ಸಿಗುತ್ತಿತ್ತು ಎಂದು ಶಾಸಕ ಭೈರತಿ ಹೇಳಿದ್ದಾರೆ.

ವಲಸಿಗರಿಗೆ ಮಣೆ?
ಭೈರತಿ ಬಸವರಾಜ್, ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವರಾಗುವ ಬಯಕೆ ವ್ಯಕ್ತಪಡಿಸಿರುವುದು ವಿಶೇಷವಾಗಿದೆ. ಆದ್ರೆ ಈ ಖಾತೆಯನ್ನು ಯಾರಿಗೂ ನೀಡದಂತೆ ಬೆಂಗಳೂರಿನ ಶಾಸಕರು ಈ ಹಿಂದೆ ಸಿಎಂ ಮೇಲೆ ಒತ್ತಡ ಹೇರಿದ್ದರು. ಹಾಗಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಎಂ ಬಳಿಯೇ ಇತ್ತು. ಇದರಿಂದ ಬೆಂಗಳೂರು ನಗರಾಭಿವೃದ್ಧಿ ಖಾತೆ ಆಕಾಂಕ್ಷಿ ಆಗಿರುವ ಭೈರತಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಸಿಎಂ ಬಿಎಸ್‌ವೈ ಬೆಂಗಳೂರಿನ ಹಾಲಿ ಯಾವುದೇ ಸಚಿವರಿಗೂ ಬೆಂಗಳೂರು ನಗರಾಭಿವೃದ್ಧಿ ಖಾತೆ ಹಂಚಿಕೆ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಇದೀಗ, ವಲಸಿಗ ಶಾಸಕ ಭೈರತಿ ಬಸವರಾಜ್ ಗೆ ಬೆಂಗಳೂರು ನಗರಾಭಿವೃದ್ಧಿಯಂತಹ ಮಹತ್ವದ ಖಾತೆ ಕೊಟ್ಟಲ್ಲಿ ಬೆಂಗಳೂರಿನ ಬಿಜೆಪಿ ಶಾಸಕರು ಮುನಿಸಿಕೊಳ್ಳುವ ಸಾಧ್ಯತೆಯಿದೆ. ಗಮನಾರ್ಹವೆಂದ್ರೆ ಕಂದಾಯ ಸಚಿವ ಆರ್. ಅಶೋಕ್ ಸಹ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಹಿಂದೆಯೇ ಕಣ್ಣಿಟ್ಟಿದ್ದರು.

Published On - 1:54 pm, Tue, 10 December 19