ಎನ್​ಐಎ ದಾಳಿ: ಐಸಿಸ್ ಸಂಪರ್ಕ ಹೊಂದಿದ್ದ ಐವರ ಬಂಧನ

ಹೊಸ ಐಸಿಸ್ ಮಾಡ್ಯೂಲ್ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಎನ್​ಐಎ, ದಾಳಿ ನಡೆಸಿ ಹಲವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಎನ್​ಐಎ ದಾಳಿ: ಐಸಿಸ್ ಸಂಪರ್ಕ ಹೊಂದಿದ್ದ ಐವರ ಬಂಧನ
ಸಾಂಕೇತಿಕ ಚಿತ್ರ
Edited By:

Updated on: Mar 15, 2021 | 11:17 AM

ಬೆಂಗಳೂರು: ಯುವಕರನ್ನು ಐಸಿಸ್ ಉಗ್ರ ಸಂಘಟನೆಗೆ ಸೇರಿಸಲು ತರಬೇತಿ ನೀಡಲಾಗುತ್ತಿದೆ ಎನ್ನುವ ಆರೋಪದ ಮೇಲೆ ದೆಹಲಿ, ಕೇರಳ, ಕರ್ನಾಟಕ ಸೇರಿ 7 ಕಡೆ ಎನ್​ಐಎ ದಾಳಿ ನಡೆಸಿದೆ. ಕೇರಳದ ನಾಲ್ಕು ಕಡೆ ಹಾಗೂ ಬೆಂಗಳೂರಿನ ಎರಡು ಸ್ಥಳಗಳಲ್ಲಿ ಸೇರಿದಂತೆ ನವದೆಹಲಿಯಲ್ಲೂ ಒಂದು ಕಡೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು ದಾಲಿಯಲ್ಲಿ ಐವರನ್ನು ಬಂಧಿಸಿದ್ದಾಗಿ ಎನ್ಐಎ ಮೂಲಗಳು ಖಚಿತಪಡಿಸಿವೆ.

ಹೊಸ ಐಸಿಸ್ ಮಾಡ್ಯೂಲ್ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಎನ್​ಐಎ, ದಾಳಿ ನಡೆಸಿ ಹಲವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸದ್ಯ ಭಾರತದಲ್ಲಿ ದಾಳಿ ನಡೆಸಲು ಪ್ಲಾನ್​ ಮಾಡಲಾಗಿತ್ತು ಎನ್ನುವ ಮಾಹಿತಿ ಹೊರ ಬಂದಿದ್ದು, ಪಾಕಿಸ್ತಾನಿ ಐಸಿಸ್ ಹ್ಯಾಂಡ್ಲರ್​ಗಳ ಜೊತೆ ಸಂಪರ್ಕ ಹೊಂದಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಕೇಸ್: ಪೊಲೀಸ್ ಅಧಿಕಾರಿಯನ್ನೇ ಅರೆಸ್ಟ್ ಮಾಡಿದ ಎನ್‌ಐಎ

ಇದನ್ನೂ ಓದಿ: ಐಇಡಿ, ಪಿಸ್ತೂಲ್ ಸಮೇತ ದೆಹಲಿಯಲ್ಲಿ ಐಸಿಸ್ ಉಗ್ರನ ಬಂಧನ