ಹುಲಿಯೇ ಹೆಬ್ಬಾವನ್ನು ಬೇಟೆಯಾಡಿತು! ಅಪರೂಪದ ದೃಶ್ಯಾವಳಿ ವಿಡಿಯೋದಲ್ಲಿ ದಾಖಲಾಯಿತು..
ನಮ್ಮ ರಾಜ್ಯದಲ್ಲಿ ಇರುವ ಅಭಯಾರಣ್ಯವೊಂದರಲ್ಲಿ ಈ ಘಟನೆ ನಡೆದಿರುವುದು ಇನ್ನೂ ಸೋಜಿಗವಾಗಿದೆ. ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಹೆಬ್ಬಾವನ್ನು ಬೇಟೆಯಾಡುವ ಹುಲಿಯ ದೃಶ್ಯಗಳು ಸಫಾರಿ ವೇಳೆ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿವೆ.
ಮೈಸೂರು: ಹುಲಿಯೊಂದು ದಟ್ಟಾರಣ್ಯದಲ್ಲಿ ಹೆಬ್ಬಾವನ್ನು ಬೇಟೆಯಾಡಿದೆ. ಮತ್ತು ಆ ಅತ್ಯಪರೂಪದ ದೃಶ್ಯಾವಳಿ ವಿಡಿಯೋದಲ್ಲಿ ದಾಖಲಾಗಿದೆ! ನಮ್ಮ ರಾಜ್ಯದಲ್ಲಿ ಇರುವ ಅಭಯಾರಣ್ಯವೊಂದರಲ್ಲಿ ಈ ಘಟನೆ ನಡೆದಿರುವುದು ಇನ್ನೂ ಸೋಜಿಗವಾಗಿದೆ. ಏಕೆಂದರೆ ಇತ್ತೀಚೆಗಷ್ಟೇ ಪಕ್ಕದಲ್ಲಿ ಹಾವು ಮಲಗಿರುವುದನ್ನು ನೋಡಿ ಹುಲಿ ಹೆದರಿಕೊಂಡಿದ್ದ ವಿಡಿಯೋ ದೃಶ್ಯ ವೈರಲ್ಲಾಗಿತ್ತು. ಈ ಹಿನ್ನೆಲೆಯಲ್ಲಿ ಹೆಬ್ಬಾವನ್ನೆ ಹುಲಿ ಬೇಟೆಯಾಡಿರುವುದು ಸೋಜಿಗವೇ ಸರಿ!
ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆಂದು ಹೋದವರಿಗೆ ಇದು ಅನುಭವಕ್ಕೆ ಬಂದಿದೆ. ಸಫಾರಿ ಮಾಡುತ್ತಿದ್ದ ಪ್ರವಾಸಿಗರು ಈ ಅಪರೂಪದ ದೃಶ್ಯವನ್ನು ತಮ್ಮ ವಿಡಿಯೋ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅಪರೂಪದಲ್ಲೆ ಅಪರೂಪ ಎನಿಸುವ ಈ ವಿಡಿಯೋ ಸಹಜವಾಗಿಯೇ ವೈರಲ್ ಆಗಿದೆ. ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಹೆಬ್ಬಾವನ್ನು ಬೇಟೆಯಾಡುವ ಹುಲಿಯ ದೃಶ್ಯಗಳು ಸಫಾರಿ ವೇಳೆ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: ಬೇಟೆಗಾರರ ಅಟ್ಟಹಾಸಕ್ಕೆ 110 ಹುಲಿಗಳು ಬಲಿ!
Published On - 11:54 am, Mon, 15 March 21