ಹಾವೇರಿ: ಅಗಲಿದ ಗೆಳೆಯನ ನೆನಪಿನಲ್ಲಿ ಗೆಳೆಯರು ಮಾಡಿದ ಮಹತ್ಕಾರ್ಯ ಎಂಥದ್ದು ಗೊತ್ತಾ?
ಹಾವೇರಿ ತಾಲೂಕಿನ ಮರೋಳ ಗ್ರಾಮದ ಮಾರುತಿ ಶಿವಪ್ಪ ಹೆಗ್ಗಪ್ಪನವರು ಕಳೆದ ವರ್ಷದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರು. ಮಾರುತಿ ಮೃತಪಟ್ಟು ಈಗ ಬರೋಬ್ಬರಿ ಒಂದು ವರ್ಷವೇ ಕಳೆಯಿತು. ಹೀಗಾಗಿ ಮೃತ ಮಾರುತಿಯ ಗೆಳೆಯರು ಹಾಗೂ ಗ್ರಾಮಸ್ಥರು ಗೆಳೆಯನ ನೆನಪಿಗಾಗಿ ರಕ್ತದಾನದಂತಹ ಜೀವದಾನ ಹಬ್ಬ ಮಾಡುವ ವಿಚಾರ ಮಾಡಿದರು.

ಹಾವೇರಿ: ಮಾರುತಿ ಎಂದರೆ ಮರೋಳ ಗ್ರಾಮದ ಜನರಿಗೆಲ್ಲಾ ತೀರ ಅಚ್ಚುಮೆಚ್ಚು. ಗ್ರಾಮದಲ್ಲಿ ಮಾರುತಿ ಅವರ ಗೆಳೆಯರ ದೊಡ್ಡ ಪಡೆಯೇ ಇದೆ. ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಅವರು ಕರ್ತವ್ಯದಲ್ಲಿದ್ದಾಗಲೇ ವಿದ್ಯುತ್ ತಂತಿ ಸ್ಪರ್ಷಿಸಿ ಮೃತಪಟ್ಟಿದ್ದರು. ಈಗ ಮಾರುತಿ ಅವರು ಮೃತಪಟ್ಟು ಬರೋಬ್ಬರಿ ಒಂದು ವರ್ಷ ಕಳೆಯಿತು. ಅಗಲಿದ ಗೆಳೆಯನ ನೆನಪಿಗಾಗಿ ಮಾರುತಿ ಗೆಳೆಯರು ಹಾಗೂ ಗ್ರಾಮದ ಜನರು ಒಂದು ಒಳ್ಳೆಯ ಕೆಲಸ ಮಾಡುವ ಮೂಲಕ ಆತನನ್ನು ಸ್ಮರಿಸಿದರು.
ಹಾವೇರಿ ತಾಲೂಕಿನ ಮರೋಳ ಗ್ರಾಮದ ಮಾರುತಿ ಶಿವಪ್ಪ ಹೆಗ್ಗಪ್ಪನವರು ಕಳೆದ ವರ್ಷದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದರು. ಮಾರುತಿ ಮೃತಪಟ್ಟು ಈಗ ಬರೋಬ್ಬರಿ ಒಂದು ವರ್ಷವೇ ಕಳೆಯಿತು. ಹೀಗಾಗಿ ಮೃತ ಮಾರುತಿಯ ಗೆಳೆಯರು ಹಾಗೂ ಗ್ರಾಮಸ್ಥರು ಗೆಳೆಯನ ನೆನಪಿಗಾಗಿ ರಕ್ತದಾನದಂತಹ ಸಮಾಜಕ್ಕೆ ಉಪಯೋಗ ಆಗಬಲ್ಲ ಕಾರ್ಯಕ್ರಮ ಸಂಘಟಿಸುವ ವಿಚಾರ ಮಾಡಿದರು. ಗ್ರಾಮದ ಸರ್ಕಾರಿ ಪ್ರೌಢಶಾಲೆ, ಸ್ನೇಹಜೀವಿ ಗೆಳೆಯರ ಬಳಗ, ಜಿಲ್ಲಾ ರಕ್ತನಿಧಿ ಕೇಂದ್ರ ಮತ್ತು ಅಕ್ಕಿಆಲೂರಿನ ಸ್ನೇಹ ಮೈತ್ರಿ ಬ್ಲಡ್ ಆರ್ಮಿಯವರು ಸೇರಿಕೊಂಡು ರಕ್ತದಾನ ಶಿಬಿರ ಆಯೋಜಿಸಿದ್ದಾರೆ.
ಗೆಳೆಯನ ಫೋಟೋಗೆ ಪೂಜೆ ಸಲ್ಲಿಸಿ ರಕ್ತದಾನ ಒಂದು ವರ್ಷದ ಹಿಂದೆ ಮೃತಪಟ್ಟ ಮಾರುತಿಯ ಫೋಟೋವನ್ನಿಟ್ಟು ಆತನ ಗೆಳೆಯರು ಹಾಗೂ ಗ್ರಾಮಸ್ಥರು ಪೋಟೋಗೆ ಪೂಜೆ ಸಲ್ಲಿಸಿದರು. ನಂತರ ಸಸಿಗೆ ನೀರುಣಿಸುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು. ಮೂವತ್ತೈದನೇ ಬಾರಿ ರಕ್ತದಾನ ಮಾಡಿದ ಹಾವೇರಿಯ ವಿಜಯಕುಮಾರ ಎಂಬುವರು ರಕ್ತದಾನ ಮಾಡುವ ಮೂಲಕ ಜೀವದಾನ ಹಬ್ಬಕ್ಕೆ ಚಾಲನೆ ನೀಡಿದರು.
ರಕ್ತದಾನ ಮಾಡಿದ ಅರವತ್ತೊಂದು ಜನರು ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಗೆಳೆಯ ಮಾರುತಿ ಅವರ ನೆನಪಿಗಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾರುತಿ ಅವರ ಗೆಳೆಯರು ಸೇರಿದಂತೆ ಒಟ್ಟು ಅರವತ್ತೊಂದು ಜನರು ರಕ್ತದಾನ ಮಾಡಿದರು. ಗೆಳೆಯನ ನೆನಪಿನಲ್ಲಿ 43 ಜನರು ಮೊದಲ ಬಾರಿಗೆ ರಕ್ತದಾನ ಮಾಡುವ ಮೂಲಕ ರಕ್ತದಾನ ಮಾಡಿದರು. ರಕ್ತದಾನ ಶಿಬಿರದ ಪ್ರಯುಕ್ತ ರಕ್ತದ ಗುಂಪು ಪರೀಕ್ಷೆಯನ್ನು ಉಚಿತವಾಗಿ ಮಾಡಲಾಯಿತು. ಕೇವಲ ಪುರುಷರು ಮಾತ್ರವಲ್ಲದೆ ಹಲವು ಮಹಿಳೆಯರು ಕೂಡ ರಕ್ತದಾನ ಮಾಡಿ ಅಗಲಿದ ಮಾರುತಿ ಅವರ ಗುಣಗಾನ ಮಾಡಿದರು.

ಸುಮಾರು 61 ಜನರು ರಕ್ತದಾನ ಮಾಡಿದರು

ಕೇವಲ ಪುರುಷರಲ್ಲದೇ ಮಹಿಳೆಯರು ಕೂಡಾ ರಕ್ತದಾನ ಮಾಡಿದರು

ಮಾರುತಿ ಶಿವಪ್ಪ ಹೆಗ್ಗಪ್ಪನವರ ಪುಣ್ಯಸ್ಮರಣೆ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಲಾಗಿತ್ತು
ಈಗಿನ ಜೀವನ ಶೈಲಿಯಲ್ಲಿ ಯುವಕ, ಯುವತಿಯರು ಫಾಸ್ಟ್ ಫುಡ್ ಆಹಾರಕ್ಕೆ ಅವಲಂಬಿತರಾಗಿದ್ದು, ಇದರಿಂದ ಆರೋಗ್ಯ ಕೆಡುತ್ತದೆ. ಕೊಲೆಸ್ಟ್ರಾಲ್ ಶೇಖರಣೆಯಿಂದ ದೂರವಾಗಲು ನಿಯಮಿತ ರಕ್ತದಾನ ಮಾಡುವ ಅನಿವಾರ್ಯತೆ ಇದೆ. ರಕ್ತದಾನದ ಬಗೆಗಿನ ಮೂಢನಂಬಿಕೆಗಳು ದೂರವಾಗಲು ಈ ಗ್ರಾಮೀಣ ಮಟ್ಟದ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿಯಾದ ಡಾ.ಬಸವರಾಜ ತಳವಾರ ಹೇಳಿದರು.
ಮೂಢನಂಬಿಕೆಗಳು ದೂರವಾಗಬೇಕು. ರಕ್ತದಾನ ಮಾಡಿ ರಕ್ತ ಸಂಬಂಧಿಗಳಾಗೋಣ. ಅಗಲಿದ ಗೆಳೆಯನ ನೆನಪಿನಲ್ಲಿ ಗ್ರಾಮದ ಯುವಕರು ಮಾಡಿದ ಕಾರ್ಯ ಬೇರೆಯವರಿಗೆ ಮಾದರಿ ಆಗಲಿ ಎಂದು ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಮುಖ್ಯಸ್ಥರಾದ ಕರಬಸಪ್ಪ ಗೊಂದಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ
ಮಾಜಿ ಸಚಿವರಿಂದ ಚಿಕ್ಕಬಳ್ಳಾಪುರದಲ್ಲಿ ಗುಹಾಂತರ ದೇವಾಲಯ ನಿರ್ಮಾಣ
ರಮೇಶ್ ಜಾರಕಿಹೊಳಿ CD ಪ್ರಕರಣ: ವಿಡಿಯೋದಲ್ಲಿದ್ದ ವಾಯ್ಸ್ ಸ್ಯಾಂಪಲ್ FSLಗೆ ಶಿಫ್ಟ್



