ಆರು ತಿಂಗಳ ತನಕ 2ಎ ಮೀಸಲಾತಿ ಹೋರಾಟ ಸ್ಥಗಿತಗೊಳಿಸಿ: ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಿಗೆ ಯತ್ನಾಳ್​ ಮನವಿ

ಮೀಸಲಾತಿ ವಿಚಾರವಾಗಿ ಆರೇಳು ತಿಂಗಳಲ್ಲಿ ಹಿಂದುಳಿದ ವರ್ಗದ ಆಯೋಗದ ವರದಿ, ಸಮಿತಿ ವರದಿ ಕೊಡಲು ಹೇಳುತ್ತೇವೆ, ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ ಹಿನ್ನೆಲೆಯಲ್ಲಿ ಆರು ತಿಂಗಳ ಕಾಲ ಹೋರಾಟವನ್ನು ಸ್ಥಗಿತಗೊಳಿಸಬೇಕೆಂದು ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ.

  • Publish Date - 11:41 am, Mon, 15 March 21
ಆರು ತಿಂಗಳ ತನಕ 2ಎ ಮೀಸಲಾತಿ ಹೋರಾಟ ಸ್ಥಗಿತಗೊಳಿಸಿ: ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಿಗೆ ಯತ್ನಾಳ್​ ಮನವಿ
ಬಸನಗೌಡ ಪಾಟೀಲ್​ ಯತ್ನಾಳ್​ ಮತ್ತು ಬಿ.ಎಸ್​.ಯಡಿಯೂರಪ್ಪ


ಬೆಂಗಳೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಒದಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಮುದಾಯದ ಸ್ವಾಮೀಜಿಗಳು ಆರು ತಿಂಗಳ ಕಾಲ ಹೋರಾಟವನ್ನು ಸ್ಥಗಿತಗೊಳಿಸಬೇಕೆಂದು ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲಿ ಮಾತನಾಡುತ್ತಾ ಮನವಿ ಮಾಡಿದ್ದಾರೆ. ಸದನ ಆರಂಭವಾಗುತ್ತಿದ್ದಂತೆಯೇ ಪ್ರಶ್ನೋತ್ತರ ಅವಧಿಯ ನಡುವೆಯೂ ಪಂಚಮಸಾಲಿ ಸಮುದಾಯದ ವಿಚಾರವನ್ನು ಪ್ರಸ್ತಾಪಿಸಿದ ಬಸನಗೌಡ ಪಾಟೀಲ್​ ಯತ್ನಾಳ್​ ಮುಖ್ಯಮಂತ್ರಿಗಳಿಂದ ಉತ್ತರ ಅಪೇಕ್ಷಿಸಿದರು. ಈ ವೇಳೆ ಪ್ರತ್ಯುತ್ತರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮೀಸಲಾತಿ ವಿಚಾರವಾಗಿ ಆರೇಳು ತಿಂಗಳಲ್ಲಿ ಹಿಂದುಳಿದ ವರ್ಗದ ಆಯೋಗದ ವರದಿ, ಸಮಿತಿ ವರದಿ ಕೊಡಲು ಹೇಳುತ್ತೇವೆ, ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸ್ವಾಮೀಜಿಗಳು ಧರಣಿ ವಾಪಸ್ ಪಡೆಯಬೇಕು ಎಂದು ಕೇಳಿಕೊಂಡರು.

ಮುಖ್ಯಮಂತ್ರಿಗಳು ಭರವಸೆ ನೀಡಿದ ನಂತರ ಆರಂಭದಲ್ಲಿ ಅದನ್ನು ಒಪ್ಪಿಕೊಳ್ಳದ ಬಸನಗೌಡ ಪಾಟೀಲ್​ ಯತ್ನಾಳ್, ಆರು ತಿಂಗಳ ಒಳಗೆ ಕ್ರಮ ಕೈಗೊಳ್ಳುವ ಭರವಸೆ ಅಷ್ಟೇ ನಾವು ಕೇಳುತ್ತಿದ್ದೇವೆ. ಅಷ್ಟರಲ್ಲಿ ಹಿಂದುಳಿದ ವರ್ಗದ ಆಯೋಗದ ವರದಿ ತರಿಸಿ ಕ್ರಮ ಕೈಗೊಳ್ಳಲೇಬೇಕು ಒಂದು ಒತ್ತಾಯಿಸಿದರು. ನಂತರ ಮತ್ತೆ ಭರವಸೆಯ ಮಾತುಗಳನ್ನಾಡಿದ ಯಡಿಯೂರಪ್ಪ, ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದಾಗ ಅದರಿಂದ ಸಮಾಧಾನಗೊಂಡ ಬಸನಗೌಡ ಪಾಟೀಲ್​ ಯತ್ನಾಳ್​ ಮುಖ್ಯಮಂತ್ರಿಗಳಿಗೆ ಸದನದಲ್ಲಿ ಅಭಿನಂದನೆ ಸಲ್ಲಿಸಿ, ಹೋರಾಟ 6ತಿಂಗಳ ತನಕ ಮೊಟಕುಗೊಳಿಸೋಣ. ನಂತರ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:
ಪಂಚಮಸಾಲಿ ಮೀಸಲಾತಿ ನೀಡಲು ಪೂರಕ ದಾಖಲೆ ಸಲ್ಲಿಸಬೇಕು: ಹಿಂದುಳಿದ ವರ್ಗಗಳ ಆಯೋಗದಿಂದ ಸ್ವಾಮೀಜಿಗೆ ನೋಟಿಸ್ 

ಇನ್ನೂ ಹಲವರ ಸಿಡಿಗಳಿವೆ, ಎಸ್​ಐಟಿ ಬದಲು ಸಿಬಿಐ ತನಿಖೆ ಒಳ್ಳೇದು: ಬಸನಗೌಡ ಪಾಟೀಲ್ ಯತ್ನಾಳ್

Read Full Article

Click on your DTH Provider to Add TV9 Kannada