ಮಾಜಿ ಸಚಿವರಿಂದ ಚಿಕ್ಕಬಳ್ಳಾಪುರದಲ್ಲಿ ಗುಹಾಂತರ ದೇವಾಲಯ ನಿರ್ಮಾಣ
ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಚೌಡರೆಡ್ಡಿ, ಹತ್ತಾರು ವರ್ಷಗಳ ಈ ಪ್ರಯತ್ನದಿಂದ ಈ ಗುಹಾಂತರ ದೇವಾಲಯ ನಿರ್ಮಾಣವಾಗಿದೆ. ತಮಿಳುನಾಡು ಮೂಲದ ಕಾರ್ಮಿಕರ ಮೂಲಕ ದೇವಾಲಯ ಕೆತ್ತನೆ ಮಾಡಿಸಿದ್ದಾರೆ.
ಚಿಕ್ಕಬಳ್ಳಾಪುರ: ರಾಜಕಾರಣದಿಂದ ನಿವೃತ್ತಿಯಾದ ಮಾಜಿ ಸಚಿವರೊಬ್ಬರು ಅಧ್ಯಾತ್ಮದತ್ತ ಮುಖಮಾಡಿದ್ದಾರೆ. ಏಕಶಿಲಾ ಬೃಹತ್ ಬಂಡೆಯೊಳಗೆ ಗುಹಾಂತರ ದೇವಾಲಯಗಳನ್ನು ನಿರ್ಮಾಣ ಮಾಡಿದ್ದು, ಎಲ್ಲೋರಾ, ಅಜಂತಾ ಮತ್ತು ಬಾದಾಮಿ ಗುಹಾಂತರ ದೇವಾಲಯಗಳನ್ನು ಹೋಲುವ ದೇವಾಲಯ ನಿರ್ಮಾಣ ಮಾಡಿದ್ದಾರೆ. ಈಗ ಇದು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದ್ದು, ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ರಾಜಧಾನಿ ಬೆಂಗಳೂರಿನಿಂದ 70 ಕಿಲೋ ಮೀಟರ್ ದೂರದಲ್ಲಿ ಇರುವ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೈವಾರದ ಬಳಿ ಇರುವ ಅಂಬಾಜಿದುರ್ಗಾ ಪರ್ವತ ಶ್ರೇಣಿಯಲ್ಲಿ ಏಕಶಿಲಾ ಬೆಟ್ಟವನ್ನು ಕೊರೆದು, ಗುಹಾಂತರ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ಈ ಗುಹಾಂತರ ದೇವಾಲಯ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಚೌಡರೆಡ್ಡಿ, ಹತ್ತಾರು ವರ್ಷಗಳ ಈ ಪ್ರಯತ್ನದಿಂದ ಈ ಗುಹಾಂತರ ದೇವಾಲಯ ನಿರ್ಮಾಣವಾಗಿದೆ. ತಮಿಳುನಾಡು ಮೂಲದ ಕಾರ್ಮಿಕರ ಮೂಲಕ ದೇವಾಲಯ ಕೆತ್ತನೆ ಮಾಡಿಸಿದ್ದಾರೆ.
ಕಲ್ಲಿನ ತುಣುಕುಗಳು, ಮಣ್ಣು, ಸಿಮೆಂಟ್, ಇಟ್ಟಿಗೆ ಯಾವುದನ್ನು ಬಳಸದೆ ಏಕಶಿಲಾ ಬೆಟ್ಟದಲ್ಲಿ ಅವಿರತ ಸಾಹಸ ಮಾಡಲಾಗಿದೆ. ಗುಹೆಯಲ್ಲಿ ಚತುರ್ಮುಖ ಶಿವ, ಪಾರ್ವತಿ, ಗಣೇಶನ ದೇವಾಲಯಗಳನ್ನು ಕೊರೆಯಲಾಗಿದ್ದು, ಪ್ರವಾಸಿಗರು ಹಾಗೂ ಶಿವನ ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ಗುಹೆಯಲ್ಲಿ ನೂರಕ್ಕೂ ಹೆಚ್ಚು ಜನ ಕುಳಿತುಕೊಳ್ಳುವ ಸಭಾ ಮಂಟಪ ಸೇರಿದಂತೆ ಮೂರು ಪ್ರತ್ಯೇಕ ದೇವರ ಗುಡಿಗಳಲ್ಲಿ ಮೂರು ದೇವರ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ರಾಜಕೀಯದಿಂದ ನಿವೃತ್ತಿಯಾದ ನಂತರ ಮಾಜಿ ಸಚಿವ ಚೌಡರೆಡ್ಡಿ, ತಮ್ಮ ಸಂಪೂರ್ಣ ಸಮಯವನ್ನು ಗುಹಾಂತರ ದೇವಾಲಯ ನಿರ್ಮಾಣಕ್ಕೆ ಮೀಸಲಿಟ್ಟಿದ್ದು, ಅಂದುಕೊಂಡಂತೆ ಎಲ್ಲವನ್ನು ಮಾಡಿ ಮುಗಿಸಿದ್ದಾರೆ. ಆದರೆ ಈ ಬೆಟ್ಟ ಸರ್ಕಾರದ್ದಾಗಿರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಸರ್ಕಾರಿ ಗೋಮಾಳ, ಸರ್ಕಾರಿ ಸಂಪನ್ಮೂಲ ಎಂದು ಚೌಡರೆಡ್ಡಿ ಅವರ ಏಕಶಿಲಾ ಗುಹಾಂತರ ದೇವಾಲಯದ ವಿರುದ್ಧ ಖ್ಯಾತೆ ತೆಗೆದಿದ್ದಾರೆ ಎನ್ನುವುದು ವಿಪರ್ಯಾಸ.
ಇದನ್ನೂ ಓದಿ: ಚಿನ್ನದ ನಾಡಿನ ಕಿರೀಟಕ್ಕೆ ಮತ್ತೊಂದು ಗರಿ: ಕೋಲಾರದ ಗುಹೆಯಲ್ಲಿ ಪತ್ತೆಯಾಯ್ತು ಅಪರೂಪದ ಬಾವಲಿ!
ಇದನ್ನೂ ಓದಿ: ಗುಹೆಯಲ್ಲಿ ವಾಸವಿದ್ದ ಕುಟುಂಬಕ್ಕೆ ತಕ್ಷಣ ಮನೆ ನೀಡುವಂತೆ ಸಿಎಂ ಸೂಚನೆ