Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Strike: ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಇಂದಿನಿಂದ 2 ದಿನ ಮುಷ್ಕರ

ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಇಂದು ಮತ್ತು ನಾಳೆ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರಿಂದ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿಂದು ಧರಣಿ ನಡೆಸಲಿದ್ದು ಸಾವಿರಾರು ಬ್ಯಾಂಕ್ ನೌಕರರು ಭಾಗಿಯಾಗಲಿದ್ದಾರೆ.

Bank Strike: ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಇಂದಿನಿಂದ 2 ದಿನ ಮುಷ್ಕರ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Mar 15, 2021 | 9:11 AM

ಬೆಂಗಳೂರು: ಇಂದಿನಿಂದ ಎರಡು ದಿನ ಸಾರ್ವಜನಿಕರಿಗೆ ತಟ್ಟಲಿದೆ ಬ್ಯಾಂಕ್ ಬಂದ್ ಬಿಸಿ. ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಇಂದು ಮತ್ತು ನಾಳೆ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರಿಂದ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿಂದು ಧರಣಿ ನಡೆಸಲಿದ್ದು ಸಾವಿರಾರು ಬ್ಯಾಂಕ್ ನೌಕರರು ಭಾಗಿಯಾಗಲಿದ್ದಾರೆ. ಬ್ಯಾಂಕ್‌ ಸಿಬ್ಬಂದಿ ಮುಷ್ಕರದಿಂದ ಗ್ರಾಹಕರಿಗೆ ಸಮಸ್ಯೆಯಾಗುವ ಸಾಧ್ಯತೆಗಳಿವೆ.

ಕೇಂದ್ರ ಸರ್ಕಾರ ಈ ಬಾರಿ ಬಜೆಟ್​ನಲ್ಲಿ 2ಬ್ಯಾಂಕ್ ಖಾಸಗೀಕರಣ ಮಾಡೋದಾಗಿ ಹೇಳಿತ್ತು. ಬಳಿಕ 4 ಬ್ಯಾಂಕ್ ಖಾಸಗೀಕರಣಕ್ಕೆ ಕೇಂದ್ರ ಯತ್ನಿಸುತ್ತಿದೆ. ಇದರಿಂದ ಸಾರ್ವಜನಿಕರ ಹಣ ಖಾಸಗಿಯವರ ಕೈಸೇರಲಿದೆ. ಜನರ ಹಣಕ್ಕೆ (ಠೇವಣಿಗೆ) ಯಾವುದೇ ಭದ್ರತೆ ಇರೋದಿಲ್ಲ. ಈಗಾಗಲೇ ಹಲವು ಖಾಸಗಿ ಬ್ಯಾಂಕ್​ಗಳು ಅಕ್ರಮ ಎಸಗಿವೆ. ಬ್ಯಾಂಕ್ ಖಾಸಗೀಕರಣದಿಂದ ವಿದೇಶಿ ಬಂಡವಾಳದಾರರು ಹಾಗೂ ಉದ್ಯಮಪತಿಗಳ ಕೈಗೆ ಬ್ಯಾಂಕ್ ಹೋಗಲಿದೆ. ಇದು ದೇಶದ ಭವಿಷ್ಯದ ಆರ್ಥಿಕತೆಗೆ ಮುಳುವಾಗಲಿದೆ. ದೇಶದ ಆರ್ಥಿಕತೆ ಖಾಸಗಿ ಕ್ಷೇತ್ರದ ಹಿಡಿತಕ್ಕೆ ಸಿಲುಕಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬ್ಯಾಂಕ್ ಖಾಸಗೀಕರಣದ ತೀರ್ಮಾನ ನಿಲ್ಲಿಸಬೇಕೆಂದು ಆಗ್ರಹಿಸಿ ಎರಡು ದಿನದ ಮುಷ್ಕರಕ್ಕೆ ಬ್ಯಾಂಕ್‌ ಯೂನಿಯನ್​ಗಳ ಸಂಯುಕ್ತ ವೇದಿಕೆ ಕರೆಕೊಟ್ಟಿದೆ.

ಬ್ಯಾಂಕ್ ನೌಕರರು ಮುಷ್ಕರ ನಡೆಸಲು ಕಾರಣವೇನು? ಕಳೆದ ಫೆಬ್ರವರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದರು. ದೇಶದಲ್ಲಿ 1.75 ಲಕ್ಷ ಕೋಟಿ ರೂ. ಗಳಿಸುವ ಸರ್ಕಾರದ ಹೂಡಿಕೆಯ ಭಾಗವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು. ಕೇಂದ್ರವು ಕಳೆದ ವರ್ಷ 10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ನಾಲ್ಕು ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸಿತ್ತು. 2017ರಲ್ಲಿ 27 ಇದ್ದ ಸಾರ್ವಜನಿಕರ ಬ್ಯಾಂಕ್​ಗಳ ಸಂಖ್ಯೆಯು ಮಾರ್ಚ್ ವೇಳೆಗೆ 12 ಕ್ಕೆ ಇಳಿಸಿತು.

ಇದನ್ನೂ ಓದಿ: Bank Strike: ಇಂದೇ ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ, 4 ದಿನ ಸಾಲು ಸಾಲು ರಜೆ.. ಮಾರ್ಚ್ 15 ಮತ್ತು 16 ಬ್ಯಾಂಕ್ ನೌಕರರ ಮುಷ್ಕರ