ಶಿವಮೊಗ್ಗ ರಂಗಾಯದಲ್ಲಿ ಕಲಾಕೃತಿಗಳ ಅನಾವರಣ: ಸಿಮೆಂಟ್ನಲ್ಲಿ ನಿರ್ಮಾಣವಾದ ಕಲೆಗೆ ಮನಸೋತ ಸ್ಥಳೀಯರು
ಭವನಕ್ಕೆ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಬರುವ ಎಲ್ಲಾ ಕುಟುಂಬದ ಸದಸ್ಯರಿಗಾಗಿ ಇಲ್ಲೊಂದು ಪಾರ್ಕ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಈ ಕಲಾಕೃತಿಗಳ ಜೊತೆ ಸುತ್ತುಮತ್ತಲು ಹಚ್ಚ ಹಸಿರಿನ ತಾಣವನ್ನಾಗಿ ಮಾಡುವ ಯೋಜನೆಯನ್ನು ರಂಗಾಯಣದ ಅಧಿಕಾರಿಗಳು ಹಾಕಿಕೊಂಡಿದ್ದಾರೆ.
ಶಿವಮೊಗ್ಗ: ಜಿಲ್ಲೆಯ ಸುವರ್ಣ ಸಾಂಸ್ಕೃತಿಕ ಭವನಕ್ಕೆ ಈಗ ಹೊಸ ಕಳೆ ಬಂದಿದ್ದು, ನಗರದ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದ ಈ ಭವನಕ್ಕೆ ಬರುವ ಕಲಾವಿದರು ಮತ್ತು ಕಲಾರಸಿಕರಿಗೆ ಈಗ ಹೊಸ ಅನುಭವ ಆಗುತ್ತಿದೆ. ಈ ಹಿಂದೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಂಗಭೂಮಿಯ ಕಲೆಗಳ ಪ್ರದರ್ಶನಕ್ಕೆ ಮಾತ್ರ ಸಿಮೀತವಾಗಿತ್ತು. ಆದರೆ ಈಗ ಅಲ್ಲಿಯ ಚಿತ್ರಣವೇ ಸಂಪೂರ್ಣ ಬದಲಾಗಿದೆ.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಎಲ್ಲ ಸಾಂಸ್ಕೃತಿ ಮತ್ತು ರಂಗ ಚಟುವಟಿಕೆಗಳು ನಗರದ ಸುವರ್ಣ ಸಾಂಸ್ಕೃತಿ ಭವನದಲ್ಲಿ ನಡೆಯುತ್ತಿವೆ. ಈ ಭವನದ ಆವಣದಲ್ಲಿ ವಿಶಾಲವಾದ ಜಾಗಿವಿದೆ. ಆದರೆ ಇಲ್ಲಿಯವರೆಗೂ ಸುವರ್ಣ ಸಾಂಸ್ಕೃತಿ ಭವನದ ಅಧಿಕಾರಿಗಳು ಅದನ್ನು ಸದ್ಭಳಿಕೆ ಮಾಡಿಕೊಂಡಿರಲಿಲ್ಲ. ಕೇವಲ ಕೆಲವೊಂದು ನಾಟಕ, ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಮಾತ್ರ ಈ ಭವನ ಸಿಮೀತವಾಗಿತ್ತು. ಆದರೆ ಈಗ ಮಾತ್ರ ಈ ಭವನದಲ್ಲಿ ಎಲ್ಲರಿಗೆ ಖುಷಿಕೊಡುವಂತಹ ಕಲಾಕೃತಿಗಳ ಗ್ಯಾಲರಿ ಸಿದ್ಧಪಡಿಸಲಾಗಿದೆ.
ಈ ಹಿಂದೆ ಭವನಕ್ಕೆ ಹೋಗಿ ನಾಟಕ ನೋಡಿ ಪ್ರೇಕ್ಷಕರು ಕಲಾರಸಿಕರು ವಾಪಸ್ ಆಗುತ್ತಿದ್ದರು. ಆದರೆ ಈಗ ರಂಗಭೂಮಿ ಮತ್ತು ನಾಡಿನ ವಿವಿಧ ಕಲೆಗಳು ಇಲ್ಲಿ ಸಿಮೆಂಟ್ ಕಲಾಕೃತಿಯಾಗಿ ಸಿದ್ಧಪಡಿಸಲಾಗಿದೆ. ಕುಟುಂಬದ ಸಮೇತವಾಗಿ ಈ ಭವನಕ್ಕೆ ಸೆಳೆಯುವಂತೆ ಈ ಕಲಾಕೃತಿಗಳನ್ನು ಸದ್ಯ ಸಿದ್ಧಪಡಿಸಲಾಗಿದೆ. ಸುವರ್ಣ ಸಾಂಸ್ಕೃತಿ ಭವನದಲ್ಲಿ ರಂಗಾಯಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಸದಾ ಇಲ್ಲಿ ವಿವಿಧ ರಂಗಭೂಮಿ ಚಟುವಟಿಕೆಗಳನ್ನು ನಡೆಸುವ ಮೂಲಕ ಪ್ರೇಕ್ಷಕರಿಗೆ ಸೆಳೆಯುವ ಪ್ರಯತ್ನದಲ್ಲಿದ್ದಾರೆ.
ಈ ನಡುವೆ ಈ ಕಲಾಕೃತಿಗಳು ಅಲ್ಲಿ ಅನಾವರಣಗೊಳಿಸಿದ್ದು, ಸದ್ಯ ಪ್ರೇಕ್ಷಕರಿಗೆ ಮತ್ತು ಕಲಾವಿದರಿಗೆ ಎಲ್ಲಿಲ್ಲದ ಸಂತಸವಾಗಿದೆ. ಪ್ರತಿಯೊಂದು ರಂಗಭೂಮಿಗೆ ಸಂಬಂಧಿಸಿದ ಒಂದಲ್ಲ ಒಂದು ಚಟುವಟಿಕೆಗಳನ್ನು ತಮ್ಮ ಕಲೆಯಲ್ಲಿ ಕಲಾವಿದರು ಅದ್ಭುತವಾಗಿ ತೋರಿಸಿದ್ದಾರೆ. ಕನ್ನಡ ರಂಗಭೂಮಿಯ ಹೆಸರಾಂತ ನಾಟಕಗಳ ದೃಶ್ಯಗಳು, ಜಾನಪದ ಸೊಗಡು ಪ್ರತಿಬಿಂಬಿಸುವ ಕಲಾಕೃತಿಗಳೂ, ಭೂತದ ಕೋಲ, ಯಕ್ಷಗಾನ, ಭರತನಾಟ್ಯ, ಕೂಚುಪುಡಿಯಂತರ ನೃತ್ಯ ಸೇರಿದಂತೆ 20ಕ್ಕೂ ಅಧಿಕ ಸಿಮೆಂಟ್ನಲ್ಲಿ ಕಲಾಕೃತಿಗಳನ್ನು ನಿರ್ಮಿಸಲಾಗಿದೆ.
ಕನ್ನೇಶ್ವರ ರಾಮ ಸಿನಿಮಾ ದೃಶ್ಯ ಹೋಲುವ ಕಳ್ಳ, ಪೊಲೀಸ್, ಮಹಿಳೆ, ಊರಗೌಡ ಹಾಗೂ ಕೃಷಿ ಕಾರ್ಮಿಕರ ಶಿಲ್ಪಗಳಿವೆ. ಯಕ್ಷಗಾನದ ಮೂರು ಶಿಲ್ಪಗಳು ಭವನದ ಮುಂಭಾಗದಲ್ಲೇ ಬರುವ ಎಲ್ಲ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಹೀಗೆ ನಾಡಿನ ಕಲೆ, ಸಂಸ್ಕೃತಿಗೆ ಪ್ರತೀಕವಾದ ಕಲಾ ಪ್ರತಿಮೆಗಳು ಸಿದ್ದಗೊಂಡಿವೆ. ಬೆಂಗಳೂರಿನ ಚಿತ್ರಕಲಾ ಅಕಾಡೆಮಿ 15 ಮಂದಿ ಹಿರಿಯ ಶಿಲ್ಪಿಗಳು ಮತ್ತು 15 ಸಹಾಯಕ ಶಿಲ್ಪಿಗಳು ಸೇರಿಕೊಂಡು ಈ ಕಲಾಕೃತಿಗಳನ್ನು ಸಿಮೆಂಟ್ನಲ್ಲಿ ಅರಳಿಸುವ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ.
ಭವನಕ್ಕೆ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಬರುವ ಎಲ್ಲಾ ಕುಟುಂಬದ ಸದಸ್ಯರಿಗಾಗಿ ಇಲ್ಲೊಂದು ಪಾರ್ಕ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಈ ಕಲಾಕೃತಿಗಳ ಜೊತೆ ಸುತ್ತುಮತ್ತಲು ಹಚ್ಚ ಹಸಿರಿನ ತಾಣವನ್ನಾಗಿ ಮಾಡುವ ಯೋಜನೆಯನ್ನು ರಂಗಾಯಣದ ಅಧಿಕಾರಿಗಳು ಹಾಕಿಕೊಂಡಿದ್ದಾರೆ. ಈ ಮೂಲಕ ಕುಟುಂಬದ ಸದಸ್ಯರು ಮತ್ತು ಕಲಾವಿದರು ಇಲ್ಲಿಯ ವಾತಾವರಣವನ್ನು ಅನುಭವಿಸಬಹುದು. ಇನ್ನು ಈ ಕಲಾಕೃತಿಗಳ ಜೊತೆ ಪಾರ್ಕ್ ಕೂಡ ಅಭಿವೃದ್ಧಿಯಾಗುತ್ತಿದೆ ಎಂದು ರಂಗಾಯಣದ ನಿರ್ದೇಶಕರಾದ ಸಂದೇಶ್ ಜವಳಿ ಹೇಳಿದ್ದಾರೆ.
ಹೀಗೆ ಯಾವುದೇ ದುಂದು ವೆಚ್ಚವಿಲ್ಲದೇ ಶಿಲ್ಪ ಕಲಾ ಶಿಬಿರದ ಮೂಲಕ ಸಾಂಸ್ಕೃತಿಕ ಭವನಕ್ಕೆ ಕಲೆ, ರಂಗಭೂಮಿಯ ಸಿಮೆಂಟ್ ಕಲಾಕೃತಿಗಳ ವಿಶೇಚ ವಿನ್ಯಾಸ ಮಾಡಲಾಗಿದೆ.. ಶಿಲ್ಪ ಕಲಾವಿದರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇಂತಹ ಶಿಲ್ಪ ಕಲಾ ಶಿಬಿರಗಳು ಮಲೆನಾಡನಲ್ಲಿ ನಡೆಯುತ್ತಿವೆ. ಸಿಮೆಂಟ್ನಲ್ಲಿ ಅರಳಿರುವ ಕಲಾಕೃತಿಗಳು ಶಿವಮೊಗ್ಗದ ಜನರಿಗೆ ಹೊಸ ಅನುಭವನ್ನು ನೀಡುತ್ತಿವೆ. ಸದ್ಯ ಇಲ್ಲಿಗೆ ಬಂದು ಈ ಕಲಾಕೃತಿಗಳನ್ನು ನೋಡಿದವರೆಲ್ಲರೂ ನಿಬ್ಬೆರಗಾಗುತ್ತಿದ್ದಾರೆ.
ಇದನ್ನೂ ಓದಿ: Roberrt Collection: ಅಬ್ಬಬ್ಬಾ…! ರಾಬರ್ಟ್ 3ನೇ ದಿನದ ಕಲೆಕ್ಷನ್ ಇಷ್ಟೊಂದಾ? 50 ಕೋಟಿಗೆ ಕೆಲವೇ ನಂಬರ್ ಬಾಕಿ!