ಬೇಟೆಗಾರರ ಅಟ್ಟಹಾಸಕ್ಕೆ 110 ಹುಲಿಗಳು ಬಲಿ!

ಬೇಟೆಗಾರರ ಅಟ್ಟಹಾಸಕ್ಕೆ 110 ಹುಲಿಗಳು ಬಲಿ!

ವನ್ಯಜೀವಿಗಳ ಸಾವಿನ ಬಗ್ಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. 2019ರಲ್ಲಿ ದೇಶಾದ್ಯಂತ 110 ಹುಲಿಗಳು ಬೇಟೆಗಾರರ ಅಟ್ಟಹಾಸಕ್ಕೆ ಬಲಿಯಾಗಿವೆ. 491ಚಿರತೆಗಳು ಮೃತಪಟ್ಟಿವೆ ಅಂತಾ ವನ್ಯಜೀವಿ ಸಂರಕ್ಷಣಾ ಸೊಸೈಟಿ ಆಫ್ ಇಂಡಿಯಾ ವರದಿಯಲ್ಲಿ ಹೇಳಿದೆ.

ನಿರ್ಮಾಣ ಹಂತದ ಕಟ್ಟಡ ಕುಸಿತ:
ದೆಹಲಿಯ ತ್ರಿಲೋಕ್​ಪುರಿ ಏರಿಯಾದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ. ಕಟ್ಟಡದ ಅವಶೇಷಗಳಡಿ 8 ಜನ ಸಿಲುಕಿಕೊಂಡಿದ್ರು. ಸ್ಥಳಕ್ಕಾಗಮಿಸಿದ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿದ್ವು. ಅವಶೇಷಗಳಡಿ ಸಿಲುಕಿದ್ದವರನ್ನೆಲ್ಲಾ ರಕ್ಷಿಸಿ ಹೊರ ತಂದ್ರು.

‘ಸುಪ್ರೀಂಕೋರ್ಟ್​ ಮೆಟ್ರೋ ನಿಲ್ದಾಣ’
ದೆಹಲಿ ಮೆಟ್ರೋ ನಿಲ್ದಾಣವೊಂದಕ್ಕೆ ಸುಪ್ರೀಂಕೋರ್ಟ್​ ಹೆಸರಿಡಲು ಸರ್ಕಾರ ನಿರ್ಧರಿಸಿದೆ. ಪ್ರಗತಿ ಮೆಟ್ರೋ ನಿಲ್ದಾಣಕ್ಕೆ ಸುಪ್ರೀಂಕೋರ್ಟ್​ ಮೆಟ್ರೋ ನಿಲ್ದಾಣ ಅಂತಾ ಮರುನಾಮಕರಣ ಮಾಡೋದಾಗಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಒಂದು ತಿಂಗಳಲ್ಲೇ ಎಲ್ಲಾ ಪ್ರಕ್ರಿಯೆ ಮಾಡಿ ಮುಗಿಸೋದಾಗಿಯೂ ಹೇಳಿದ್ದಾರೆ.

ಡಿಜಿಟಲ್ ಪಾವತಿ ಉತ್ತೇಜಿಸದಿದ್ದರೆ ದಂಡ:
ವಾರ್ಷಿಕವಾಗಿ 50 ಕೋಟಿ ಅಥವಾ ಅದಕ್ಕಿಂತ ಹೆಚ್ಚು ವಹಿವಾಟು ನಡೆಸುವ ಕಂಪನಿಗಳು ತಮ್ಮಲ್ಲಿ ಡಿಜಿಟಲ್‌ ಪಾವತಿ ಸೌಲಭ್ಯಗಳನ್ನ ಜನವರಿ 31ರೊಳಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ದಿನವೊಂದಕ್ಕೆ ಆ ಕಂಪನಿಯ ಮೇಲೆ ಐದು ಸಾವಿರ ದಂಡ ವಿಧಿಸಲಾಗುತ್ತೆ ಅಂತ ಕೇಂದ್ರ ಸರ್ಕಾರ ಹೇಳಿದೆ.

Click on your DTH Provider to Add TV9 Kannada