ಸ್ಮಶಾನ ವಂಚಿತ ಮದಿರೆ ಗ್ರಾಮ: ಶವ ಸಂಸ್ಕಾರಕ್ಕೆ ಗ್ರಾಮಸ್ಥರ ಪರದಾಟ

| Updated By: ಆಯೇಷಾ ಬಾನು

Updated on: Dec 11, 2020 | 11:54 AM

ಬಳ್ಳಾರಿಯ ಕುರುಗೋಡು ತಾಲೂಕಿನ ಮದಿರೆ ಗ್ರಾಮ ಸ್ಮಶಾನ ವಂಚಿತವಾಗಿದೆ. ಮೂರು ಸಾವಿರ ಜನಸಂಖ್ಯೆಯಿರುವ ಗ್ರಾಮದಲ್ಲಿ ಮರಣ ಸಂಭವಿಸಿದರೆ ಶವ ಸಂಸ್ಕಾರ ನಡೆಸಲು ಹಳ್ಳ ದಾಟಬೇಕಾಗಿದೆ. ಹಳ್ಳ ದಾಟುವಾಗ ಅವಘಡಗಳು ನಡೆದ ಉದಾಹರಣೆಗಳೂ ಇವೆ.

ಸ್ಮಶಾನ ವಂಚಿತ ಮದಿರೆ ಗ್ರಾಮ: ಶವ ಸಂಸ್ಕಾರಕ್ಕೆ ಗ್ರಾಮಸ್ಥರ ಪರದಾಟ
Follow us on

ಬಳ್ಳಾರಿ: ಜಿಲ್ಲೆ ಕುರುಗೋಡು ತಾಲೂಕಿನ ಮದಿರೆ ಗ್ರಾಮ ಸ್ಮಶಾನ ವಂಚಿತವಾಗಿದೆ. ಮೂರು ಸಾವಿರ ಜನಸಂಖ್ಯೆಯಿರುವ ಗ್ರಾಮದಲ್ಲಿ ಮರಣ ಸಂಭವಿಸಿದರೆ ಶವ ಸಂಸ್ಕಾರ ನಡೆಸಲು ಹಳ್ಳ ದಾಟಬೇಕಾಗಿದೆ. ಹಳ್ಳ ದಾಟುವಾಗ ಅವಘಡಗಳು ನಡೆದ ಉದಾಹರಣೆಗಳೂ ಇವೆ.

ಮದಿರೆ ಗ್ರಾಮದಲ್ಲಿ ಸ್ಮಶಾನವಿಲ್ಲ. ಊರಲ್ಲಿ ಯಾರಾದ್ರೂ ಸಾವನ್ನಪ್ಪಿದ್ರೆ ಅವರ ಅಂತ್ಯಕ್ರಿಯೆಯನ್ನ ಹಳ್ಳದ ದಂಡೆಯ ಭಾಗದ ಜಾಗದಲ್ಲಿಯೇ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಹಳ್ಳ ತುಂಬಿ ಹರಿದು ಶವ ಸಂಸ್ಕಾರಕ್ಕೆ ತೊಂದರೆ ಉಂಟಾಗುತ್ತಿದೆ. ಜೀವ ಭಯದಿಂದ ಸಾಗಬೇಕಾಗಿದೆ. ಹಳ್ಳದ ದಂಡೆಯ ಪಕ್ಕ ಹೊಲಗಳಿದ್ದು, ಅದರ ಮೂಲಕ ಶವ ಒಯ್ಯಲು ಮಾಲೀಕರು ಅನುಮತಿ ನೀಡಿಲ್ಲ.

ಸ್ಮಶಾನಕ್ಕಾಗಿ ಜಮೀನು ಕಲ್ಪಿಸಿಕೊಡಲು ಗ್ರಾಮಸ್ಥರು ಹಲವು ಬಾರಿ ತಾಲೂಕು, ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದಾರೆ. ಜನಪ್ರತಿನಿಧಿಗಳಿಗಳ ಬಳಿಯೂ ವಿನಂತಿಸಿದ್ದಾರೆ. ಆದರೆ, ಈವರೆಗೆ ಪ್ರಯೋಜನವಾಗಿಲ್ಲ. ಸದ್ಯದ ಗ್ರಾ ಪಂ ಚುನಾವಣೆಯ ಹೊತ್ತಲ್ಲಾದರೂ ಸ್ಮಶಾನ ನಿರ್ಮಾಣವಾಗಬಹುದು ಎಂಬ ನಿರೀಕ್ಷೆ ಗ್ರಾಮಸ್ಥರದ್ದು. – ಬಸವರಾಜ ಹರನಹಳ್ಳಿ

Published On - 9:33 pm, Thu, 10 December 20