ಶ್ರೀರಾಮನಂತೆ ಕಾಡಿಗೆ ಹೋಗುವುದು ಬೇಡ, ಹಿರಿಯರಿಗೆ ಲಸಿಕೆ ಕೊಡಿಸೋಣ: ಯುವಕರಿಗೆ ಆರೋಗ್ಯ ಸಚಿವ ಸುಧಾಕರ್ ಕರೆ

|

Updated on: Apr 21, 2021 | 8:01 PM

8951755722  ನಂಬರ್​ಗೆ  ಕಾಲ್ ಮಾಡಿದರೆ ಆಕ್ಸಿಜನ್ ಎಲ್ಲಿಯೇ ಬೇಕಾದರೂ  ಸರಬರಾಜು ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ವಿವರಿಸಿದರು.

ಶ್ರೀರಾಮನಂತೆ ಕಾಡಿಗೆ ಹೋಗುವುದು ಬೇಡ, ಹಿರಿಯರಿಗೆ ಲಸಿಕೆ ಕೊಡಿಸೋಣ: ಯುವಕರಿಗೆ ಆರೋಗ್ಯ ಸಚಿವ ಸುಧಾಕರ್ ಕರೆ
ಡಾ. ಕೆ.ಸುಧಾಕರ್​
Follow us on

ಬೆಂಗಳೂರು: ರಾಮಾಯಣದ ಶ್ರೀ ರಾಮ ಎಲ್ಲ ಕಾಲಕ್ಕೂ ಆದರ್ಶಪ್ರಾಯನಾದವನು. ನಾವೆಲ್ಲ ಶ್ರೀರಾಮನ ರೀತಿ ಕಾಡಿಗೆ ಹೋಗಬೇಕಿಲ್ಲ. ಆದರೆ ನಮ್ಮನ್ನು ಲಾಲಿಸಿ ಪಾಲಿಸಿದ ತಂದೆ ತಾಯಿ ಅಜ್ಜ ಅಜ್ಜಿಯರಿಗೆ ಕೊವಿಡ್ ಲಸಿಕೆ ಕೊಡಿಸಿದರೆ ನಮ್ಮ ಜವಾಬ್ದಾರಿಯನ್ನು ನಡೆಸಿಕೊಟ್ಟಂತಾಗುತ್ತದೆ. ಇದನ್ನು ಎಲ್ಲ ಯುವಕರೂ ನಡೆಸಿಕೊಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದರು.

ಬೆಂಗಳೂರು ನಗರದಲ್ಲಿ ಯಾವುದೇ ಕಾರಣಕ್ಕೂ ಕೂಡ ಆಕ್ಸಿಜನ್ ಕೊರತೆ ಇಲ್ಲ. ಇಂದು 5000 ಸಿಲಿಂಡರ್ ಪೂರೈಕೆ ಆಗುತ್ತಿದೆ. 40 ಮೆಟ್ರಿಕ್ ಟನ್ ಹೆಚ್ಚುವರಿ ಆಕ್ಸಿಜನ್​ನ್ನು ಜೆಎಸ್​ಡಬ್ಲ್ಯೂ ಸಂಸ್ಥೆ ಕೊಟ್ಟಿದೆ. ಕೈಗಾರಿಕಾ ಆಯುಕ್ತರು ಸಿಎಸ್ಆರ್ ಫಂಡ್ ಮೂಲಕ ಮತ್ತೆ 500 ಸಿಲಿಂಡರ್ ವ್ಯವಸ್ಥೆ ಮಾಡಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ತೆಗೆದುಕೊಳ್ಳಲು ಅರ್ಹರು. ಎಲ್ಲರೂ ತಮ್ಮ ಮನೆಯಲ್ಲಿರುವ ಹಿರಿಯರಿಗೆ ಲಸಿಕೆ ಕೊಡಿಸುವುದು ಮುಖ್ಯ. ಒಟ್ಟಾರೆಯಾಗಿ 12.7 ಕೋಟಿ ಡೋಸ್ ಗಳನ್ನು ಲಸಿಕೆ ವಿತರಿಸಲಾಗಿದೆ. ಲಸಿಕೆ ತೆಗೆದುಕೊಂಡ 99.96 ಶೇಕಡಾ ಜನರಲ್ಲಿ ಸೋಂಕು ಹರಡಿಲ್ಲ. ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಕೂಡ ಅತಿ ಶೀಘ್ರದಲ್ಲಿ ಲಸಿಕೆ ತೆಗೆದುಕೊಳ್ಳಲಿ ಎಂದು ಅವರು ವಿವರಿಸಿದರು.

ಸಾವಿನ ಪ್ರಮಾಣ ಗಾಬರಿಯಾಗುವ ಮಟ್ಟಕ್ಕೆ ಬಂದಿಲ್ಲ. ಮೊದಲ ಅಲೆಗಿಂತ ಈಗಿನ ಕೊರೊನಾ ಅಲೆ ಹೆಚ್ಚು ಭಿನ್ನವಾಗಿದೆ. ಇದರ ಸಂಪೂರ್ಣ ಅಧ್ಯಯನ ಇನ್ನೂ ನಡೆಯಬೇಕಾಗಿದೆ. ಸ್ವಭಾವ ಅರ್ಥ ಮಾಡಿಕೊಳ್ಳುವುದು ನಮಗೂ ಸವಾಲಾಗಿದೆ
ಸಾವಿನ ಪ್ರಮಾಣ ಕಡಿಮೆ ಇರುವುದರಿಂದ ಜನರು ಅನಗತ್ಯವಾಗಿ ಆತಂಕಕ್ಕೆ ಒಳಗಾಗ್ತಿದ್ದಾರೆ. ಸಾವನ್ನು ಪರದೆ ಮೇಲೆ ನೋಡಿ ಪಾಸಿಟಿವ್ ಬಂದ ತಕ್ಷಣ ಸಾವೇ ಆಗತ್ತೆ ಅನ್ನೋ ಆತ‌ಂಕಕ್ಕೆ ಒಳಗಾಗ್ತಿದ್ದಾರೆ. ಶೇಕಡಾ 95ರಷ್ಟು ಮಂದಿಗೆ ಆಸ್ಪತ್ರೆಯ ಅವಶ್ಯಕತೆ ಇಲ್ಲ. ಟೆಲಿ ಕನ್ಸಲ್ಟನ್ಸಿ ಮೂಲಕ ಮನೆಯಲ್ಲಿರುವವರಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ನಾನ್ ಕೊವಿಡ್ ರೋಗಿಗಳನ್ನು  30 ಬೆಡ್ ಗಳಿಗಿಂತ ಕಡಿಮೆ ಇರುವ ನರ್ಸಿಂಗ್ ಹೋಂ ಗಳಿಗೆ ರವಾನೆ ಮಾಡಲಾಗುತ್ತದೆ.
ಯಾವುದೇ ಕಾರಣಕ್ಕೂ ಕೂಡ ಸಣ್ಣ ಸಮಸ್ಯೆ ಕೂಡ ಆಗಬಾರದು ಅಂತ ವ್ಯವಸ್ಥೆ ಮಾಡಲಾಗ್ತಿದೆ. 8951755722  ನಂಬರ್​ಗೆ  ಕಾಲ್ ಮಾಡಿದರೆ ಆಕ್ಸಿಜನ್ ಎಲ್ಲಿಯೇ ಬೇಕಾದರೂ  ಸರಬರಾಜು ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 23,558 ಮಂದಿಗೆ ಸೋಂಕು, ಕೊರೊನಾದಿಂದ 116 ಜನರ ಸಾವು

ನಾಸಿಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ: 22 ಕೊವಿಡ್ ರೋಗಿಗಳ ದುರ್ಮರಣ

(No shortage of medical of oxygen in Bengaluru says Karnataka Health Minister Dr K Sudhakar)