AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಗಾಲಾದ ಗದಗದ ರೈತರು; ವರ್ಷವಿಡೀ ಕಷ್ಟಪಟ್ಟು ಬೆಳೆದ ಏಲಕ್ಕಿ ಬಾಳೆ ಎರಡೇ ನಿಮಿಷದಲ್ಲಿ ಮಣ್ಣುಪಾಲು

ಕೋರ್ಲಹಳ್ಳಿ ಗ್ರಾಮದ ತೋಟಪ್ಪ ಲಿಂಬಿಕಾಯಿ, ಸಣ್ಣಮಲ್ಲಪ್ಪ ಲಿಂಬಿಕಾಯಿ 9 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದಾರೆ. ಅದರಲ್ಲಿ 6 ಎಕರೆ ಏಲಕ್ಕಿ ಬಾಳೆ ಬೆಳೆದಿದ್ದಾರೆ. ಏಲಕ್ಕಿ ಬಾಳೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಜೊತೆಗೆ ಬಂಪರ್ ಬೆಲೆ ಕೂಡ ಇದೆ. ಆದರೆ ಮಳೆ ಇದೆಲ್ಲವನ್ನು ಹಾಳು ಮಾಡಿದೆ.

ಕಂಗಾಲಾದ ಗದಗದ ರೈತರು; ವರ್ಷವಿಡೀ ಕಷ್ಟಪಟ್ಟು ಬೆಳೆದ ಏಲಕ್ಕಿ ಬಾಳೆ ಎರಡೇ ನಿಮಿಷದಲ್ಲಿ ಮಣ್ಣುಪಾಲು
ಗಾಳಿ ಸಹಿತ ಮಳೆಗೆ ನೆಲಕಚ್ಚಿದ ಬಾಳೆ ಮರಗಳು
preethi shettigar
| Edited By: |

Updated on: Apr 21, 2021 | 9:43 PM

Share

ಗದಗ: ಜಿಲ್ಲೆಯ ರೈತರು ಲಕ್ಷ ಲಕ್ಷ ಸಾಲ ಮಾಡಿ ಬಂಗಾರದಂಥ ಏಲಕ್ಕಿ ಬಾಳೆ ಬೆಳೆದಿದ್ದರು. ಆದರೆ ಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ರೈತರ ಬದುಕೇ ಮುರಿದು ಬಿದ್ದಿದೆ. ಮಕ್ಕಳಂತೆ ವರ್ಷವಿಡೀ ಕಷ್ಟಪಟ್ಟು ಬೆಳೆದ ಬಾಳೆ ಎರಡೇ ಎರಡು ನಿಮಿಷದ ಜೋರಾದ ಗಾಳಿಗೆ ಸಂಪೂರ್ಣ ನೆಲಕಚ್ಚಿದೆ. ರೈತರು ತೋಟಗಾರಿಕೆ ಬೆಳೆ ಬೆಳೆದು ಬಂಪರ್ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಮಳೆಗೆ ಬೆಳೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಳೆ ಬೆಳೆದ ರೈತರ ಗೋಳಿನ ಕಥೆ ಇದಾಗಿದ್ದು, ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಹಮ್ಮಿಗಿ ಸುತ್ತಮುತ್ತ ನೂರಾರು ಹೆಕ್ಟರ್ ಪ್ರದೇಶದಲ್ಲಿ ವಿವಿಧ ತಳಿಯ ಬಾಳೆ ಬೆಳೆದಿದ್ದರು. ಅಲ್ಲದೇ ಏಲಕ್ಕಿ ಬಾಳೆಗೆ ಬಂಪರ್ ಬೆಲೆ ಇದೆ. ಹೀಗಾಗಿ ಇನ್ನೊಂದು ವಾರ ಕಳೆದರೆ ಸಾಕು ಬಾಳೆ ಕಟಾವು ಮಾಡಲು ರೈತರು ಸಜ್ಜಾಗಿದ್ದರು. ಆದರೆ ಕೊರ್ಲಹಳ್ಳಿ, ಹಮ್ಮಿಗಿ ಗ್ರಾಮಗಳ ಸುತ್ತಮುತ್ತಲು ಆಳೆತ್ತರದಲ್ಲಿ ಬೆಳೆದ ಬಾಳೆ ಜೋರಾದ ಗಾಳಿಗೆ ಮುರಿದು ಬಿದ್ದಿದೆ. ತೋಟದ ತುಂಬೆಲ್ಲಾ ಹಸಿರು ಹಾಸಿಗೆ ಹಾಸಿದಂತಾಗಿದೆ. ಅದರಲ್ಲೂ ಕೊರ್ಲಹಳ್ಳಿ ಗ್ರಾಮದ ಸಹೋದರರ ಬದುಕು ಮಾತ್ರ ದುಸ್ಥರವಾಗಿದೆ. 9 ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆಯಲ್ಲಿ 6 ಎಕರೆ ಸಂಪೂರ್ಣ ನೆಲಕ್ಕೆ ಉರುಳಿದೆ.

ಕೋರ್ಲಹಳ್ಳಿ ಗ್ರಾಮದ ತೋಟಪ್ಪ ಲಿಂಬಿಕಾಯಿ, ಸಣ್ಣಮಲ್ಲಪ್ಪ ಲಿಂಬಿಕಾಯಿ 9 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದಾರೆ. ಅದರಲ್ಲಿ 6 ಎಕರೆ ಏಲಕ್ಕಿ ಬಾಳೆ ಬೆಳೆದಿದ್ದಾರೆ. ಏಲಕ್ಕಿ ಬಾಳೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಜೊತೆಗೆ ಬಂಪರ್ ಬೆಲೆ ಕೂಡ ಇದೆ. ಇದಕ್ಕೆ ಸುಮಾರು 12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇನ್ನೊಂದು ವಾರದ ಬಳಿಕ ಕಟಾವು ಮಾಡಿ ಮಾರುಕಟ್ಟೆಗೆ ಹೋದ್ರೆ 30-35 ಲಕ್ಷದ ಲಾಭದ ನಿರೀಕ್ಷೆಯಲ್ಲಿ ಇದ್ದೆವು ಆದರೆ ಎಲ್ಲಾ ಹಾಳಾಗಿದೆ. ಸರ್ಕಾರ ನಮ್ಮ ಕಷ್ಟಕ್ಕೆ ನೆರವಾಗಬೇಕು ಎಂದು ಬಾಳೆ ಬೆಳೆದ ರೈತ ಲಿಂಬಿಕಾಯಿ ಮನವಿ ಮಾಡಿದ್ದಾರೆ.

ಕಳೆದ ಎರಡ್ಮೂರು ವರ್ಷ ಕಬ್ಬು ಬೆಳೆದು ಕೈಸುಟ್ಟುಕೊಂಡಿದ್ದ ಲಿಂಬಿಕಾಯಿ ಸಹೋದರರು ತೋಟಗಾರಿಕೆ ಅಧಿಕಾರಿಗಳ ಸಲಹೆ ಮೇರೆಗೆ ಏಲಕ್ಕಿ ಬಾಳೆ ಬೆಳೆದಿದ್ದಾರೆ. ಬದುಕು ಬಂಗಾರವಾಗುತ್ತೆ ನಂಬಿದ್ದರು. ಅದರಂತೆ ರೈತರ ಕಷ್ಟಕ್ಕೆ ಬಂಗಾರಂಥ ಬಾಳೆ ಕೂಡ ಬಂದಿತ್ತು. ಆದ್ರೆ, ಅಕಾಲಿಕ ಮಳೆ, ಗಾಳಿ ಬಾಳೆ ಬೆಳೆದ ರೈತರ ಬದುಕು ಸರ್ವನಾಶ ಮಾಡಿದೆ. ಕೊರೊನಾದ ಬಗ್ಗೆ ಹೆಚ್ಚಿನ ಜಾಗೃತಿವಹಿಸಿರುವ ಸರ್ಕಾರ ರೈತರ ಸಂಕಷ್ಟಕ್ಕೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತೆ ನೋಡಬೇಕಿದೆ.

ಇದನ್ನೂ ಓದಿ: ಗದಗದಲ್ಲಿ ಗಾಳಿ ಸಹಿತ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶ; ರೈತರು ಕಂಗಾಲು

ಅಕಾಲಿಕ ಮಳೆಗೆ ನಲುಗಿದ ಯಾದಗಿರಿ; ವರುಣನ ಅಬ್ಬರಕ್ಕೆ ಶೇಂಗಾ ಬೆಳೆ ನೀರು ಪಾಲು

(Banana crop destroyed by heavy rain in Gadag)

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ