ಗದಗ: ಕೊರೊನಾ 2ನೇ ಅಲೆಯ ಭೀಕರತೆಗೆ ಜನ ತತ್ತರಿಸಿದ್ದಾರೆ. ಇದರ ನಡುವೆ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಆಕ್ಸಿಜನ್ ಅಭಾವ, ಬೆಡ್ ಕೊರತೆಗಳು ರಾಜ್ಯದಲ್ಲಿ ಕಂಡು ಬಂದಿದೆ. ಗದಗ ಜಿಲ್ಲೆಯಲ್ಲೂ ಬೆಡ್ಗಾಗಿ ಹಾಹಾಕಾರ ಶುರುವಾಗಿದೆ. ಈಗ ಗದಗ ನಗರದ ಜಿಮ್ಸ್ ಆಸ್ಪತ್ರೆಯ 450 ಬೆಡ್‌ಗಳು ಕೂಡ ಫುಲ್ ಆಗಿವೆ ಈ ಬಗ್ಗೆ ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಭೂಸರೆಡ್ಡಿ ಮಾಹಿತಿ ತಿಳಿಸಿದ್ದಾರೆ.
ಜಿಮ್ಸ್ ಆಸ್ಪತ್ರೆಯಲ್ಲಿದ್ದ 58 ವೆಂಟಿಲೇಟರ್ ಬೆಡ್‌ಗಳು ಹಾಗೂ ಉಳಿದ ಆಕ್ಸಿಜನ್ ಬೆಡ್‌ಗಳು ಭರ್ತಿಯಾಗಿವೆ. ಹೊಸ ಸೋಂಕಿತರು ಬಂದ್ರೆ ಆಕ್ಸಿಜನ್ ಬೆಡ್‌ಗಳು ಇಲ್ಲ. ಹೀಗಾಗಿ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸದ್ಯಕ್ಕೆ ಗದಗ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಅಗತ್ಯ ಇರುವಷ್ಟು ಮೆಡಿಕಲ್ ಆಕ್ಸಿಜನ್ ಪೂರೈಕೆಯಾಗುತ್ತಿದೆ. ನಿತ್ಯವೂ 13 KL ಅಗತ್ಯವಿದೆ ಅಂತ ಅದಕ್ಕೆ ತಕ್ಕಂತೆ ಪೂರೈಕೆ ಇದೆ ಎಂದು ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಭೂಸರೆಡ್ಡಿ ಹೇಳಿದ್ರು.
ಪ್ರಸಕ್ತ ಜಿಲ್ಲೆಯಲ್ಲಿ ನಿತ್ಯವೂ 300 ಕ್ಕೂ ಅಧಿಕ ಕೇಸ್ ಪತ್ತೆಯಾಗುತ್ತಿದೆ. ಹೊಸ ಸೋಂಕಿತರು ಬಂದ್ರೆ ಆಕ್ಸಿಜನ್ ಬೆಡ್ಗಳೂ ಇಲ್ಲ. ಗುಣಮುಖರಾಗಿ ಬಿಡುಗಡೆಯಾದ್ರೆ ಮಾತ್ರ ಬೆಡ್.. ಇಲ್ಲಾಂದ್ರೆ ಸೋಂಕಿತರು ಪರದಾಡುವಂತಾಗುತ್ತೆ. ಸದ್ಯ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದ್ದು ಇದರಿಂದ ಕೊಂಚ ಅನುಕೂಲವಾಗಲಿದೆ.
ಇದನ್ನೂ ಓದಿ: ಹೊಟ್ಟೆ ನೋವಿನಿಂದ ಬಳಲುತ್ತಿರುವ ರೋಗಿಗೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ; 4 ದಿನದಿಂದ ತುಮಕೂರಿನ ವ್ಯಕ್ತಿ ಪರದಾಟ