ಬೆಳಗಾವಿ ಮತ ಎಣಿಕಾ ಕೇಂದ್ರದಲ್ಲೇ ಪೊಲೀಸ್​ ಅಧಿಕಾರಿಗೆ ಧಮ್ಕಿ ಹಾಕಿದ ವಿಜೇತ ಅಭ್ಯರ್ಥಿ ಕಾಂಗ್ರೆಸ್​ನ ಪ್ರಕಾಶ್ ಹುಕ್ಕೇರಿ
ಪ್ರಕಾಶ ಹುಕ್ಕೇರಿ
Image Credit source: Deccan Chronicle

ಬೆಳಗಾವಿ ಮತ ಎಣಿಕಾ ಕೇಂದ್ರದಲ್ಲೇ ಪೊಲೀಸ್​ ಅಧಿಕಾರಿಗೆ ಧಮ್ಕಿ ಹಾಕಿದ ವಿಜೇತ ಅಭ್ಯರ್ಥಿ ಕಾಂಗ್ರೆಸ್​ನ ಪ್ರಕಾಶ್ ಹುಕ್ಕೇರಿ

| Updated By: ವಿವೇಕ ಬಿರಾದಾರ

Updated on: Jun 15, 2022 | 10:55 PM

ವಾಯುವ್ಯ ಶಿಕ್ಷಕ ಕ್ಷೇತ್ರದ ವಿಜೇತ ಪ್ರಕಾಶ್ ಹುಕ್ಕೇರಿ ಬೆಳಗಾವಿ ಮತ ಎಣಿಕಾ ಕೇಂದ್ರ ಜ್ಯೋತಿ ಕಾಲೇಜ್​​ಗೆ ಪ್ರಮಾಣ ಪತ್ರ ಪಡೆಯಲು ಆಗಮಿಸಿದ್ದಾಗ  ಎಸಿಪಿ ಸದಾಶಿವ ಕಟ್ಟಿಮನಿಗೆ ಬಾಯಿಯಲ್ಲಿನ ಹಲ್ಲು ಮುರಿತೇನಿ ಎಂದು ಅವಾಜ್ ಹಾಕಿದ್ದಾರೆ.

ಬೆಳಗಾವಿ: ವಾಯವ್ಯ ಶಿಕ್ಷಕ ಕ್ಷೇತ್ರದ ವಿಜೇತ ಪ್ರಕಾಶ್ ಹುಕ್ಕೇರಿ (Prakash Hukkeri) ಬೆಳಗಾವಿ (Belagavi) ಮತ ಎಣಿಕಾ ಕೇಂದ್ರ ಜ್ಯೋತಿ ಕಾಲೇಜ್​​ಗೆ ಪ್ರಮಾಣ ಪತ್ರ ಪಡೆಯಲು ಆಗಮಿಸಿದ್ದಾಗ  ಎಸಿಪಿ ಸದಾಶಿವ ಕಟ್ಟಿಮನಿಗೆ ಬಾಯಿಯಲ್ಲಿನ ಹಲ್ಲು ಮುರಿತೇನಿ ಎಂದು ಅವಾಜ್ ಹಾಕಿದ್ದಾರೆ.  ಹುಕ್ಕೇರಿ ಜತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (satish jarkiholi), ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸಿದ್ದರು. ಮತ ಎಣಿಕೆ ಕೇಂದ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​​ನನ್ನು (Laxmi hebbalkar) ಪೊಲೀಸರು ತಡೆದಿದ್ದಾರೆ. ಈ ವೇಳೆ ಹೆಬ್ಬಾಳ್ಕರ್ ಅವರನ್ನ ಕರೆಯಲು ಪ್ರಕಾಶ್ ಹುಕ್ಕೇರಿ ಹೊರ ಬಂದಿದ್ದಾರೆ.

ಆಗ ನಮ್ಮದೇನಿಲ್ಲಾ ಅಂತಾ ಪ್ರಕಾಶ್‌ ಹುಕ್ಕೇರಿಗೆ ಸಮಜಾಯಿಷಿ ಕೊಡಲು ಬಂದ ಎಸಿಪಿ ಕಟ್ಟಿಮನಿ ಅವರಿಗೆ ನಿಮ್ಮ ಬಾಯಿಯಲ್ಲಿನ ಹಲ್ಲು ಮುರಿದೇವು ಅಂತಾ ಅವಾಜ್ ಹಾಕಿ ಹೆಬ್ಬಾಳ್ಕರ್ ಅವರನ್ನ ಪ್ರಕಾಶ್ ಹುಕ್ಕೇರಿ ಒಳ ಕರೆದುಕೊಂಡು ಹೋಗಿದ್ದಾರೆ. ನಮ್ಮನ್ನ ಎನಂತಾ ತಿಳಿದುಕೊಂಡಿದೀರಿ ನೀವು ಅಂತಾ ಹೆಬ್ಬಾಳ್ಕರ್ ಕೂಡ ಪೊಲೀಸರಿಗೆ ಅವಾಜ್‌ ಆಗಿದ್ದಾರೆ.

ಪರಿಷತ್​ನ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಜಯಗಳಿಸಿದ್ದಕ್ಕೆ ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಮಾತನಾಡಿ ಕೆಲಸ‌ ಮಾಡಲು ವಯಸ್ಸು ಮುಖ್ಯವಲ್ಲ, ಅನುಭವ ಆಧಾರ ಮುಖ್ಯವಾಗಿದೆ. ಅದನ್ನು ಚುನಾವಣೆಯಲ್ಲಿ ಪ್ರಕಾಶ್ ಹುಕ್ಕೇರಿ ‌ಸಾಬೀತು‌ಪಡಿಸಿದ್ದಾರೆ. ಯಾರು ಮಾತನಾಡಿದ್ದಾರೆ ಅವರಿಗೆ ಪ್ರಕಾಶ್ ಹುಕ್ಕೇರಿ ಉತ್ತರ ಕೊಟ್ಟಿದ್ದಾರೆ. ಶಿಕ್ಷಕ ಪದವೀಧರರ ಮೊದಲ ಬಾರಿಗೆ ಕಾಂಗ್ರೆಸ್ ಒಲವು ತೋರಿದ್ದಾರೆ. ನಾಲ್ಕು ಕ್ಷೇತ್ರದಲ್ಲಿ ಎರಡು ಗೆದಿದ್ದೇವೆ. ಈ ಚುನಾವಣೆ ನಮಗೆ ಎಕ್‌ಸ್ಟ್ರಾ ಬೋನಸ್ ಇದ್ದಂಗೆ.  ಕಾರ್ಯಕರ್ತರ ಸಪೋರ್ಟ್‌ದಿಂದ ಗೆಲವು ಸುಲಭವಾಗಿದೆ. ಗೆಲುವಿನಿಂದ ಕಾಂಗ್ರೆಸ್​​ಗೆ ಒಂದು ಶಕ್ತಿ ಕೊಡುವ ಪ್ರಯತ್ನ ಆಗಿದೆ. ಕಳೆದ ಏಳೆಂಟು ಚುನಾವಣೆಯಲ್ಲೂ ಜನರು ನಮ್ಮ‌ ಪರವಾಗಿದ್ದಾರೆ ಎಂದರು.

Published on: Jun 15, 2022 10:51 PM