ಬೆಂಗಳೂರು: ನಾವು ಕೇವಲ ಒಂದು ಸಿಡಿ ಬಗ್ಗೆ ತನಿಖೆ ಮಾಡುತ್ತಿಲ್ಲ. ಎಲ್ಲ 19 ಸಿಡಿಗಳ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ತನ್ನ ಬಳಿ 19 ಸಿಡಿ ಇದೆ ಎಂದು ಹೇಳಿಕೆ ನೀಡಿದ್ದ ವ್ಯಕ್ತಿಗೆ ನೊಟೀಸ್ ನೀಡಿದ್ದೇವೆ. ಆದರೆ ಆ ವ್ಯಕ್ತಿ ಈವರೆಗೂ ವಿಚಾರಣೆಗೆ ಬಂದಿಲ್ಲ. ನಮಗೆ ಹಲವಾರು ಸಂಘ ಸಂಸ್ಥೆಗಳಿಂದ ದೂರು ಬಂದಿದೆ. ಆ ದೂರುಗಳ ಬಗ್ಗೆಯೂ ನಾವು ತನಿಖೆ ಮಾಡುತ್ತಿದ್ದೇವೆ. ನಾವು ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಸತ್ಯಾಂಶ ಏನಿದೆ ಅದು ಹೊರಗೆ ಬರಬೇಕು ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಎಸ್‌ಐಟಿ ತನಿಖೆಗೆ ನೀಡಿರುವ ಬಗ್ಗೆ ಗೃಹ ಸಚಿವರ ಹೇಳಿಕೆ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ದಿನೇಶ್ ಕಲ್ಲಹಳ್ಳಿ ದೂರು, ಅದರ ಹಿಂದೆ ಇರುವವರು? ಈ ಎಲ್ಲದರ ಬಗ್ಗೆಯೂ ತನಿಖೆ ಮಾಡುವಂತೆ ಸೂಚಿಸಿದ್ದೇನೆ.ಯುವತಿಗೆ ರಕ್ಷಣೆ ನೀಡಬೇಕೆಂದು ಕೂಡ ಸೂಚಿಸಿದ್ದೇನೆ. ರಕ್ಷಣೆ ಕೋರಿದ ಯುವತಿಗಾಗಿ ಹುಡುಕಾಟ ನಡೆಸ್ತಿದ್ದೇವೆ. ಯುವತಿಗೆ ಕೇವಲ ರಕ್ಷಣೆ ನೀಡುವುದಾಗಿ ಮಾತ್ರ ಹೇಳಿಲ್ಲ. ಯುವತಿಗೆ ಧೈರ್ಯ ತುಂಬುವ ಕೆಲಸ ಸಹ ಮಾಡಿದ್ದೇವೆ. ಯುವತಿಗೆ ನೇರವಾಗಿ ಬರುವುದಕ್ಕೆ ಧೈರ್ಯ ಇಲ್ಲದಿದ್ದರೆ ಪೊಲೀಸರೇ ಸ್ಥಳಕ್ಕೆ ಬರುತ್ತಾರೆಂದು ಸಹ ಹೇಳಿದ್ದೇವೆ ಎಂದು ತಿಳಿಸಿದರು.
ಒಮ್ಮೆ ಹೋದ ಮಾನ ಮತ್ತೆ ಬರುವುದಿಲ್ಲ. ಅದಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾಗಿ 6 ಸಚಿವರು ಹೇಳಿದ್ದಾರೆ. ತಮ್ಮ ವಿರುದ್ಧ ಷಡ್ಯಂತ್ರ ನಡೆಯುವುದನ್ನು ತಡೆಯಬೇಕಿದ್ದರೆ ಪೊಲೀಸ್ ಠಾಣೆಗೆ ಏಕೆ ದೂರು ನೀಡಿಲ್ಲವೆಂದು ವಿಧಾನ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಪ್ರಶ್ನೆ ಎತ್ತಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಮಗೆ ಹಲವಾರು ಸಂಘ ಸಂಸ್ಥೆಗಳಿಂದ ದೂರು ಬಂದಿದೆ. ಆ ದೂರುಗಳ ಬಗ್ಗೆಯೂ ನಾವು ತನಿಖೆ ಮಾಡುತ್ತಿದ್ದೇವೆ. ನಾವು ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಸತ್ಯಾಂಶ ಏನಿದೆ ಅದು ಹೊರಗೆ ಬರಬೇಕು. ನಾವು ಕೇವಲ ಒಂದು ಸಿಡಿ ಬಗ್ಗೆ ತನಿಖೆ ಮಾಡುತ್ತಿಲ್ಲ. ಎಲ್ಲ 19 ಸಿಡಿಗಳ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ತನ್ನ ಬಳಿ 19 ಸಿಡಿ ಇದೆ ಎಂದು ಹೇಳಿಕೆ ನೀಡಿದ್ದ ವ್ಯಕ್ತಿಗೆ ನೋಟಿಸ್ ನೀಡಿದ್ದೇವೆ. ಆದರೆ ಆ ವ್ಯಕ್ತಿ ಈವರೆಗೂ ವಿಚಾರಣೆಗೆ ಬಂದಿಲ್ಲ ಎಂದು ವಿವರಿಸಿದರು.
ಸಿದ್ದರಾಮಯ್ಯ- ಶಿವರಾಮ್ ಹೆಬ್ಬಾರ್ ವಾಗ್ವಾದ
ಬಾಂಬೆಗೆ ಹೋದವರು ಮಾತ್ರ ತಮ್ಮ ವಿರುದ್ಧ ಷಡ್ಯಂತ್ರ ನಡೆಯಬಹುದೆಂದು ಅಂದುಕೊಂಡಿದ್ದಾರೆ. ಉಳಿದವರು ಏಕೆ ಷಡ್ಯಂತ್ರ ನಡೆಯುತ್ತೆ ಅಂದುಕೊಂಡಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಸಚಿವ ಶಿವರಾಮ್ ಹೆಬ್ಬಾರ್ ಗರಂ ಆದರು. CD ಯಲ್ಲಿರುವುದು ಫೇಕ್ ಆಗಿದ್ದರೆ ಯಾರು ಹೊಣೆಯಾಗ್ತಾರೆ? ಹೀಗಾಗಿ ನಮ್ಮ ರಕ್ಷಣೆಯನ್ನು ನಾವು ಮಾಡಿಕೊಂಡಿದ್ದೇವೆ. ಎಚ್ ವೈ ಮೇಟಿ ಪ್ರಕರಣದ ತನಿಖೆಯಲ್ಲಿ ಮೇಟಿ ನಿರ್ದೋಷಿ ಎಂದು ಸಾಬೀತಾಯಿತು. ಆದರೆ ಮೇಟಿ ಅವರ ಭವಿಷ್ಯ ಹಾಳಾಯಿರು. ಅವರ ಭವಿಷ್ಯಕ್ಕೆ ಯಾರು ಹೊಣೆ? ಎಂದು ಹೆಬ್ಬಾರ್ ತಿರುಗೇಟು ನೀಡಿದರು.
ಮಾರ್ಚ್ 5ರಂದು ರಾಜ್ಯದ 6 ಸಚಿವರು ಕೋರ್ಟ್ ಮೊರೆ ಹೋಗಿರುವುದು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬ ಗಾದೆಮಾತನ್ನು ನೆನಪಿಗೆ ತರುತ್ತದೆ. ಮಾರ್ಚ್ 6ರಂದು ಸಚಿವರ ಮನವಿ ಪುರಸ್ಕರಿಸಿ ಕೋರ್ಟ್ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡುತ್ತದೆ. ಭಯ, ರಾಗ, ದ್ವೇಷರಹಿತವಾಗಿ ಕೆಲಸ ಮಾಡುವುದಾಗಿ ಮಂತ್ರಿಗಳಾಗಿದ್ದವರಿಗೆ ಭಯ ಏಕೆ? ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದ ಸಚಿವರಿಗೇ ಭಯ ಇರುವಾಗ ಆ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನತೆಗೆ ಹೇಗೆ ರಕ್ಷಣೆ ನೀಡುತ್ತಾರೆ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಇದನ್ನೂ ಓದಿ: ಬಾಂಬೆಗೆ ಹೋದವರು ಮಾತ್ರ ಯಾಕೆ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ಗೆ ಹೋದ್ರು? ಸದನದಲ್ಲಿ ಸಿದ್ದರಾಮಯ್ಯ ವ್ಯಂಗ್ಯ
ಸಿಲಿಕಾನ್ ಸಿಟಿಯಲ್ಲಿ ಅನ್ನದಾತರ ಕಹಳೆ.. ವಿಧಾನಸೌಧ ಮುತ್ತಿಗೆ ಹಾಕದಂತೆ ತಡೆಯಲು ಪೊಲೀಸರ ಹರಸಾಹಸ
Published On - 4:42 pm, Mon, 22 March 21