ಬಾಂಬೆಗೆ ಹೋದವರು ಮಾತ್ರ ಯಾಕೆ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​ಗೆ ಹೋದ್ರು? ಸದನದಲ್ಲಿ ಸಿದ್ದರಾಮಯ್ಯ ವ್ಯಂಗ್ಯ

ಬಾಂಬೆಗೆ ಹೋದವರು ಮಾತ್ರ ಯಾಕೆ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​ಗೆ ಹೋದ್ರು? ಸದನದಲ್ಲಿ ಸಿದ್ದರಾಮಯ್ಯ ವ್ಯಂಗ್ಯ
ಸದನದಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟಾಗ ಪೊಲೀಸರು ಮೊದಲು ಎಫ್ ಐಆರ್ ದಾಖಲಿಸಿಕೊಳ್ಳಬೇಕಿತ್ತು. ನಂತರ ನ್ಯಾಯಾಲಯದ ಗಮನಕ್ಕೆ ತರಬೇಕಿತ್ತು. ಆದರೆ ಪೊಲೀಸರು ಆ ರೀತಿ ಮಾಡಲಿಲ್ಲ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ  ಹೇಳಿದರು.

guruganesh bhat

| Edited By: sadhu srinath

Mar 22, 2021 | 4:08 PM

ಬೆಂಗಳೂರು: ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದ ಸಚಿವರಿಗೇ ಸ್ವತಃ ಭಯ ಇರುವಾಗ ಆ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನತೆಗೆ ಹೇಗೆ ರಕ್ಷಣೆ ನೀಡುತ್ತಾರೆ? ಸಚಿವರ ಮನವಿ ಪುರಸ್ಕರಿಸಿ ಕೋರ್ಟ್ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಿತು. ಭಯ, ರಾಗ, ದ್ವೇಷರಹಿತವಾಗಿ ಕೆಲಸ ಮಾಡುವುದಾಗಿ ಮಂತ್ರಿಗಳಾಗಿದ್ದವರಿಗೆ ಭಯ ಏಕೆ? ಮಾರ್ಚ್‌ 5ರಂದು ರಾಜ್ಯದ 6 ಸಚಿವರು ಕೋರ್ಟ್ ಮೊರೆ ಹೋಗಿದ್ದು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬ ಗಾದೆಮಾತನ್ನು ನೆನಪಿಗೆ ತರುತ್ತದೆ ಎಂದು ಸಿದ್ದರಾಮಯ್ಯ ವಿಧಾನಸಭೆಯಲ್ಲಿ ವ್ಯಂಗ್ಯವಾಡಿದರು.

ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟಾಗ ಪೊಲೀಸರು ಮೊದಲು ಎಫ್ ಐಆರ್ ದಾಖಲಿಸಿಕೊಳ್ಳಬೇಕಿತ್ತು. ನಂತರ ನ್ಯಾಯಾಲಯದ ಗಮನಕ್ಕೆ ತರಬೇಕಿತ್ತು. ಆದರೆ ಪೊಲೀಸರು ಆ ರೀತಿ ಮಾಡಲಿಲ್ಲ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

6 ಸಚಿವರ ಅರ್ಜಿ ಕೋರ್ಟ್‌ನಲ್ಲಿದೆ. ಆ ಕುರಿತು ಸದನದಲ್ಲಿ ಇಲ್ಲಿ ಚರ್ಚೆ ಬೇಡ ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ಸಿದ್ದರಾಮಯ್ಯರ ಮಾತಿಗೆ ಉತ್ತರ ನೀಡಿದರು. ಆದರೆ ಕೆ.ಜಿ.ಬೋಪಯ್ಯರ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ,‘ಕೋರ್ಟ್‌ನಲ್ಲಿ ಇರುವಾಗಲೇ ಹಲವು ವಿಚಾರಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ಎಂ.ಕೆ.ಗಣಪತಿ, ಡಿ.ಕೆ.ರವಿ, ಮಹದಾಯಿ ವಿಚಾರಗಳ ಪ್ರಕರಣ ಕೋರ್ಟ್‌ನಲ್ಲಿದ್ದಾಗಲೇ ಸದನದಲ್ಲಿ ಚರ್ಚೆಯಾಗಿತ್ತು ಎಂದು ಹೇಳಿದರು. ಹೀಗಾಗಿ ವಿಧಾನಸಭೆಯಲ್ಲಿ 6 ಸಚಿವರ ಅರ್ಜಿ ಕುರಿತು  ಚರ್ಚೆ ನಡೆಸಲು ಯಾವುದೇ ಗೊಂದಲವಿಲ್ಲ ಎಂದು ಪ್ರತಿಪಾದಿಸಿದರು.

ರಾಜ್ಯದ ಇತಿಹಾಸದಲ್ಲಿ  ಸ್ವಾತಂತ್ರ್ಯ ಬಂದಾಗಿನಿಂದ  ಒಂದೇ ಸಲ 6 ಸಚಿವರುಗಳು ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರಿ ಕೋರ್ಟ್​ಗೆ ಹೋಗಿದ್ದು ಇದೇ ಮೊದಲು. ಬಾಂಬೆಗೆ ಹೋದ ಸಚಿವರು ಮಾತ್ರ ಕೋರ್ಟ್​ಗೆ ಹೊಗಿದ್ಧೇಕೆ, ಗೋಪಾಲಯ್ಯ ಅವರು ಏಕೆ ನ್ಯಾಯಾಲಯಕ್ಕೆ ಹೋಗಿಲ್ಲ ಎಂದು ತಮ್ಮ ವಾದ ಸರಣಿ ಮುಂದುವರಿಸಿದರು.

ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆದಿದೆ. ನಮ್ಮ ವಿರುದ್ದವೂ ಷಡ್ಯಂತ್ರ ನಡೆಯಬಹುದು ಎಂದು ಕೋರ್ಟ್ ಗೆ ಹೋದೆವು ಎಂದಿದ್ದಾರೆ. ಬಾಂಬೆಗೆ ಹೋದವರಿಗೆ ಮಾತ್ರ ಏಕೆ ಹೀಗೆ ಅಂದುಕೊಂಡರು? ಉಳಿದವರಿಗೆ ಏಕೆ ಹೀಗೆ ಅನಿಸಲಿಲ್ಲ ಎಂದು ಸಿದ್ದರಾಮಯ್ಯ ಕೇಳಿದರು.

ಇದನ್ನೂ ಓದಿ: ಆತ 30 ವರ್ಷದಿಂದಲೂ ನನ್ನ ಜೊತೆ ರಾಜಕೀಯದಲ್ಲಿದ್ದ.. ಸ್ನೇಹಿತನ ಸಾವಿಗೆ ಸಿದ್ದರಾಮಯ್ಯ ಕಂಬನಿ

ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್‌ ಬಿಟ್ಟ ಸಿದ್ದರಾಮಯ್ಯ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡ್ತಾರೆ -ನಳಿನ್ ಕುಮಾರ್ ಕಟೀಲ್

Follow us on

Related Stories

Most Read Stories

Click on your DTH Provider to Add TV9 Kannada