ಸಿಲಿಕಾನ್ ಸಿಟಿಯಲ್ಲಿ ಅನ್ನದಾತರ ಕಹಳೆ.. ವಿಧಾನಸೌಧ ಮುತ್ತಿಗೆ ಹಾಕದಂತೆ ತಡೆಯಲು ಪೊಲೀಸರ ಹರಸಾಹಸ
ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗೆ ರೈತ ಮುಖಂಡ ದಿವಂಗತ ಕೆ.ಎಸ್ ಪುಟ್ಟಣಯ್ಯ ಪತ್ನಿ ಸುನೀತಾ ಹಸಿರು ಬಾವುಟ ತೋರಿಸುವ ಚಾಲನೆ ನೀಡಿದ್ದಾರೆ.
ಬೆಂಗಳೂರು: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗೆ ರೈತ ಮುಖಂಡ ದಿವಂಗತ ಕೆ.ಎಸ್ ಪುಟ್ಟಣಯ್ಯ ಪತ್ನಿ ಸುನೀತಾ ಹಸಿರು ಬಾವುಟ ತೋರಿಸುವ ಚಾಲನೆ ನೀಡಿದ್ದಾರೆ. ರ‍್ಯಾಲಿಯುದ್ದಕ್ಕೂ ಪೊಲೀಸ್ ಸರ್ಪಗಾವಲಾಗಿ ನಿಂತಿದ್ದಾರೆ. ಫ್ರೀಡಂ ಪಾರ್ಕ್ವರೆಗೆ ಮಾತ್ರ ರ‍್ಯಾಲಿಗೆ ಅವಕಾಶ ನೀಡಲಾಗಿದೆ.
ರೈತರ ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ಹಾಗೂ ರೆಸ್ ಕೋರ್ಸ್ ರಸ್ತೆ ಸಂಪೂರ್ಣ ಬಂದ್ ಆಗಿದೆ. ಹಾಗಾಗಿ ಕಾಂತ್ರಿವೀರ ಸಂಗೋಳ್ಳಿ ರಾಯಣ್ಣ ಬಲ ಭಾಗದ ರಸ್ತೆಯಲ್ಲಿ ಇರುವ ಸಂಚಾರ ಮಾರ್ಗವಾಗಿ ವಾಹನ ಸಂಚರಿಸಲು ಪೊಲೀಸರು ಅನುಕೂಲ ಮಾಡಿಕೊಟ್ಟಿದ್ದಾರೆ.
ವಿಧಾನಸೌಧ ಚಲೋಗೆ ಮುಂದಾಗಿರುವ ರೈತ ಹೋರಾಟಗಾರರನ್ನು ವಿಧಾನಸೌಧ ಮಾರ್ಗ ಪ್ರವೇಶಿಸದಂತೆ ತಡೆಯಲು ಉತ್ತರ ವಿಭಾಗ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ವಿಧಾನಸೌಧ ಮುತ್ತಿಗೆ ಹಾಕಲು ತೆರಳುತ್ತಿದ್ದ ರೈತರನ್ನು ಫ್ರೀಡಂಪಾರ್ಕ್ ಬಳಿ ತಡೆ ಹಿಡಿಯಲಾಗಿದೆ. ಹೀಗಾಗಿ ರಸ್ತೆ ಮಧ್ಯದಲ್ಲೇ ಕುಳಿತು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಹಾಗೂ ಪೊಲೀಸರ ನಡುವೆ ಗಲಾಟೆ ಮಾತಿನ ಚಕಮಕಿ ಏರ್ಪಟ್ಟಿದೆ. ರೈತರನ್ನು ಫ್ರೀಡಂಪಾರ್ಕ್‌ನತ್ತ ಕಳುಹಿಸಲು ಪೊಲೀಸರು ಹರಸಾಹಸಪಡುವ ಸ್ಥಿತಿ ಎದುರಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಸಿಎಂ ಬಿಎಸ್ವೈ ಬಂದು ಮನವಿ ಸ್ವೀಕರಿಸಬೇಕು. ಮಾರ್ಚ್ 26ರಂದು ಭಾರತ್ ಬಂದ್‌ಗೆ ಕರೆ ಕೊಟ್ಟಿದೆ. ಇಂದು ಬಹಿರಂಗ ಸಭೆಯಲ್ಲಿ ಹಲವು ನಿರ್ಣಯ ತೆಗೆದುಕೊಳ್ತೇವೆ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿಂದು ಮೊಳಗಲಿದೆ ಅನ್ನದಾತರ ಕಹಳೆ.. ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ವಿಧಾನಸೌಧ ಚಲೋ
ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಮಹಿಳೆಯರ ಬೆಂಬಲ; ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯ
Published On - 1:57 pm, Mon, 22 March 21