ನರ್ಸ್ ಕೊರತೆ ಆತಂಕದಲ್ಲಿ ಕೋವಿಡ್ ಆಸ್ಪತ್ರೆ; ಕೈಯಲ್ಲಿ ಅಪಾಯಿಟ್ಮೆಂಟ್​ ಆರ್ಡರ್ ಹಿಡಿದು​ ಕುಳಿತಿದೆ ಆಡಳಿತ ಮಂಡಳಿ

|

Updated on: May 06, 2021 | 10:27 AM

Nursing shortage: ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯು 20 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಹೇಳುತ್ತಿದೆ. ಅಷ್ಟೇ ಅಲ್ಲ.. ಕೆಲಸ ಬೇಕು ಎಂದು ಬಂದ ದಿನವೇ, ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ಪ್ರತಿಯನ್ನೂ ಕೈಯಲ್ಲಿ ಹಿಡಿದು ಕುಳಿತಿದೆ. ಉಹು: ಆದರೂ ಯುವಜನತೆ ಇದರತ್ತ ದೃಷ್ಟಿಹಾಯಿಸಿಲ್ಲ.

ನರ್ಸ್ ಕೊರತೆ ಆತಂಕದಲ್ಲಿ ಕೋವಿಡ್ ಆಸ್ಪತ್ರೆ; ಕೈಯಲ್ಲಿ ಅಪಾಯಿಟ್ಮೆಂಟ್​ ಆರ್ಡರ್ ಹಿಡಿದು​ ಕುಳಿತಿದೆ ಆಡಳಿತ ಮಂಡಳಿ
ಸಾಂದರ್ಭಿಕ ಚಿತ್ರ
Follow us on

ಚಿಕ್ಕಮಗಳೂರು: ಕೊರೊನಾ ಮಹಾಮಾರಿ ಹೀಗೂ ಕಾಡುತ್ತಿದೆ. ಒಂದೆಡೆ ವೈದ್ಯಕೀಯ ಉಪಕರಣ/ ಸಾಧನಗಳು ಇಲ್ಲದೆ ಜನ ಕಂಗಾಲಾಗಿದ್ದರೆ, ಮತ್ತೊಂದೆಡೆ ವೈದ್ಯಕೀಯ ಸೇವೆಗೆ ಜನ ಸಿಗುತ್ತಿಲ್ಲ. ವೈದ್ಯಕೀಯ ಸಿಬ್ಬಂದಿ ಬೇಕಾಗಿದ್ದಾರೆ. ಒಳ್ಳೆಯ ಸಂಬಳ ಕೊಡುತ್ತೇವೆ ಅಂದ್ರೂ ಕೊರೊನಾ ಭೀತಿಯಿಂದಾಗಿ ಯುವಜನತೆ ಮುಂದೆಬರುತ್ತಿಲ್ಲ. ಸದ್ಯಕ್ಕೆ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಕೊರತೆ ಎದುರಾಗಿದೆ.

ನರ್ಸ್​ಗಳು ಬೇಕಾಗಿದ್ದಾರೆ ಎಂದರೂ ಬರುತ್ತಿಲ್ಲ: 80 ಮಂದಿ ನರ್ಸ್​ಗಳು ತುರ್ತಾಗಿ ಬೇಕಾಗಿದ್ದಾರೆ ಎಂದು ಜಾಹಿರಾತು ನೀಡಿದರೂ ಯಾರೂ ಮುಂದೆ ಬರುತ್ತಿಲ್ಲ. ಕೇವಲ 17 ಮಂದಿ ಮಾತ್ರ ಅರ್ಜಿ ಹಾಕಿದ್ದಾರೆ. ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯು 20 ಸಾವಿರ ರೂಪಾಯಿ ಸಂಬಳ ನೀಡುವುದಾಗಿ ಹೇಳುತ್ತಿದೆ.

ಅಷ್ಟೇ ಅಲ್ಲ.. ಕೆಲಸ ಬೇಕು ಎಂದು ಬಂದ ದಿನವೇ, ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ಪ್ರತಿಯನ್ನೂ ಕೈಯಲ್ಲಿ ಹಿಡಿದು ಕುಳಿತಿದೆ. ಉಹು: ಆದರೂ ಯುವಜನತೆ ಇದರತ್ತ ದೃಷ್ಟಿಹಾಯಿಸಿಲ್ಲ. ಆದರೆ ಜಿಲ್ಲಾ ಕೋವಿಡ್ ಆಸ್ಪತ್ರೆಯಂತೂ ನರ್ಸ್ ಕೊರತೆಯಿಂದ ಆತಂಕ ಎದುರಿಸುತ್ತಿದೆ.

(Nursing shortage covid hospital in chikkamaglur faces shortage of nurses)

Also Read

ಕೊರೊನಾ ಮಾರಿ ಅಟ್ಟಹಾಸ: ಎನ್​ಎಸ್​ಜಿ ಕಮಾಂಡೋ ಕೋವಿಡ್​ಗೆ ಬಲಿ, ಅವರಿಗೂ ಸಿಗಲಿಲ್ಲ ವೆಂಟಿಲೇಟರ್​ ಆಂಬುಲೆನ್ಸ್​