ಆಮಿಶ ಒಡ್ಡಲಾಗಿತ್ತೋ ಅಥವಾ ಒತ್ತಡ ಹೇರಲಾಗಿತ್ತೋ ಅಂತ ಜಗದೀಶ್ ಶೆಟ್ಟರ್ ಅವರೇ ಹೇಳಬೇಕು: ಎಂಬಿ ಪಾಟೀಲ್, ಸಚಿವ

ಆಮಿಶ ಒಡ್ಡಲಾಗಿತ್ತೋ ಅಥವಾ ಒತ್ತಡ ಹೇರಲಾಗಿತ್ತೋ ಅಂತ ಜಗದೀಶ್ ಶೆಟ್ಟರ್ ಅವರೇ ಹೇಳಬೇಕು: ಎಂಬಿ ಪಾಟೀಲ್, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 26, 2024 | 5:52 PM

ಜಗತ್ತು ನಂಬಿಕೆ ವಿಶ್ವಾಸದ ಮೇಲೆ ನಡೆಯುತ್ತಾದರೂ ಇಂಥ ಪ್ರಸಂಗಗಳು ನಡೆಯುತ್ತಿರುತ್ತವೆ ಎಂದು ಪಾಟೀಲ್ ಹೇಳಿದರು.ಲಕ್ಷ್ಮಣ ಸವದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ, ಅವರು ಹಿರಿಯ ನಾಯಕ ಮತ್ತು ಉಪ ಮುಖ್ಯಮಂತ್ರಿಯಾಗಿದ್ದವರು ಲಘುವಾಗಿ ಮಾತಾಡುವುದು ತಪ್ಪಾಗುತ್ತದೆ, ಅವರು ಕಾಂಗ್ರೆಸ್ ಬಿಡೋದಿಲ್ಲ ಎಂದರು.

ವಿಜಯಪುರ: ಬಿಜೆಪಿಗೆ ಜಗದೀಶ್ ಶೆಟ್ಟರ್ (Jagadish Shettar) ವಾಪಸ್ಸು ಹೋಗಿದ್ದು ಅವರ ಘನತೆಗೆ ಶೋಭೆ ತರುವಂಥದಲ್ಲ, ತಮ್ಮ ನಿರ್ಧಾರದಿಂದ ಅವರು ತಮ್ಮ ವರ್ಚಸ್ಸಿಗೆ (reputation) ಕುಂದು ತಂದುಕೊಂಡಿದ್ದಾರೆಯೇ ಹೊರತು ಕಾಂಗ್ರೆಸ್ ಪಕ್ಷಕ್ಕಾಗಲೀ ಸಮಾಜಕ್ಕಾಗಲೀ ಯಾವುದೇ ಹಾನಿಯಿಲ್ಲ ಎಂದು ಬೃಹತ್ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ (MB Patil) ಹೇಳಿದರು. ನಗರದಲ್ಲಿ ಟಿವಿ9 ಕನ್ನಡ ವಾಹಿನಿಯ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ಶೆಟ್ಟರ್ ಅವರಿಗೆ ಅನ್ಯಾಯವಾಗಿದೆ ಅಂತ ಶಾಮನೂರು ಶಿವಶಂಕರಪ್ಪ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ರಂದೀಪ್ ಸುರ್ಜೆವಾಲ ಮತ್ತು ತಾನು ಸೇರಿ ಕಾಂಗ್ರೆಸ್ ಕರೆತಂದಿದ್ದೆವು, ಅದರೆ ತಮಗ್ಯಾರಿಗೂ ವಾಸನೆ ಕೂಡ ಹತ್ತದಂತೆ ಅವರು ಬಿಜೆಪಿಗೆ ಪಲಾಯನಗೈದಿದ್ದಾರೆ ಎಂದು ಪಾಟೀಲ್ ಹೇಳಿದರು.

ಶೆಟ್ಟರ್ ಅವರಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಆಮಿಶವೊಡ್ಡಲಾಗಿದೆಯೋ ಒತ್ತಡ ಹೇರಲಾಗಿತ್ತೋ ಅಂತ ಅವರೇ ಹೇಳಬೇಕು ಎಂದ ಪಾಟೀಲ್, ಜಗತ್ತು ನಂಬಿಕೆ ವಿಶ್ವಾಸದ ಮೇಲೆ ನಡೆಯುತ್ತಾದರೂ ಇಂಥ ಪ್ರಸಂಗಗಳು ನಡೆಯುತ್ತಿರುತ್ತವೆ ಎಂದರು. ಲಕ್ಷ್ಮಣ ಸವದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ, ಅವರು ಹಿರಿಯ ನಾಯಕ ಮತ್ತು ಉಪ ಮುಖ್ಯಮಂತ್ರಿಯಾಗಿದ್ದವರು ಅವರ ಬಗ್ಗೆ ಲಘುವಾಗಿ ಮಾತಾಡುವುದು ತಪ್ಪಾಗುತ್ತದೆ, ಅವರು ಕಾಂಗ್ರೆಸ್ ಬಿಡೋದಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ