‘ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸ್ತಿಲ್ಲ.. ಆದ್ರೆ ಅವರು ಪ್ರತಿಭಟನೆ ಮಾಡಿದ್ರೆ ರಾಷ್ಟ್ರದ್ರೋಹಿಗಳೆಂದು ಬಿಂಬಿಸುತ್ತೀರಾ’

|

Updated on: Dec 20, 2020 | 1:09 PM

ಕಾರ್ಮಿಕರ ಸಮಸ್ಯೆಗಳಿಗೆ ಮಂತ್ರಿಗಳು ಸ್ಪಂದಿಸ್ತಿಲ್ಲ. ಈ ನಡುವೆ, ಪ್ರತಿಭಟನೆ ಉಗ್ರ ಸ್ವರೂಪಕ್ಕೆ ತಿರುಗಿದ ತಕ್ಷಣ ರೈತರು ಮತ್ತು ಕಾರ್ಮಿಕರನ್ನು ಕಳ್ಳರು, ದಾಂಧಲೆಕೋರರು, ದರೋಡೆಕೋರರು ಹಾಗೂ ರಾಷ್ಟ್ರದ್ರೋಹಿಗಳೆಂದು ಸಹ ಬಿಂಬಿಸಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

‘ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸ್ತಿಲ್ಲ.. ಆದ್ರೆ ಅವರು ಪ್ರತಿಭಟನೆ ಮಾಡಿದ್ರೆ ರಾಷ್ಟ್ರದ್ರೋಹಿಗಳೆಂದು ಬಿಂಬಿಸುತ್ತೀರಾ’
ಸಿದ್ದರಾಮಯ್ಯ(ಎಡ); ಪ್ರಧಾನಿ ಮೋದಿ ಸಿಎಂ ಯಡಿಯೂರಪ್ಪ (ಬಲ)
Follow us on

ಬೆಂಗಳೂರು: ರಾಜ್ಯದಲ್ಲಿ ರೈತರು ಮತ್ತು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎರಡೂ ವರ್ಗದವರ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸಿಎಂ ಬಿಎಸ್‌ವೈಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಬಿಡದಿಯ ಟೊಯೋಟಾ ಕಂಪನಿ ಕಾರ್ಮಿಕರು, ಕೋಲಾರದ ವಿಸ್ಟ್ರಾನ್ ಕಂಪನಿ ಕಾರ್ಮಿಕರು, ಅರವಿಂದ್ ಫ್ಯಾಷನ್‌ನ ಕಾರ್ಮಿಕರು ಕಳೆದ ಕೆಲವು ತಿಂಗಳಿಂದ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಕೆಲವರು ಈಗಲೂ ನಡೆಸುತ್ತಿದ್ದಾರೆ.

ಆದರೆ ಕಾರ್ಮಿಕರ ಸಮಸ್ಯೆಗಳಿಗೆ ಮಂತ್ರಿಗಳು ಸ್ಪಂದಿಸ್ತಿಲ್ಲ. ಈ ನಡುವೆ, ಪ್ರತಿಭಟನೆ ಉಗ್ರ ಸ್ವರೂಪಕ್ಕೆ ತಿರುಗಿದ ತಕ್ಷಣ ರೈತರು ಮತ್ತು ಕಾರ್ಮಿಕರನ್ನು ಕಳ್ಳರು, ದಾಂಧಲೆಕೋರರು, ದರೋಡೆಕೋರರು ಹಾಗೂ ರಾಷ್ಟ್ರದ್ರೋಹಿಗಳೆಂದು ಸಹ ಬಿಂಬಿಸಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

‘ಕಾರ್ಮಿಕ ವಿರೋಧಿ ನೀತಿಗಳೇ ಅಶಾಂತಿಗೆ ಮೂಲ ಕಾರಣ’
ಸರ್ಕಾರದವರು ಗೂಂಡಾಗಿರಿ ನಡೆಸ್ತಿದ್ದಾರೆಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ ಸಂಬಳ, ಹಕ್ಕುಗಳ ಬಗ್ಗೆ ಗೌರವಿಸುತ್ತಿಲ್ಲ. ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿಗಳಾಗಲಿ ಗೌರವಿಸುತ್ತಿಲ್ಲ. ಕಾರ್ಮಿಕ ವಿರೋಧಿ ನೀತಿಗಳೇ ಅಶಾಂತಿಗೆ ಮೂಲ ಕಾರಣ ಎಂದು ಸಿದ್ದರಾಮಯ್ಯ ಬರೆದಿದ್ದಾರೆ.

ದುಡಿಯುವ ವರ್ಗಗಳ ಸಮಸ್ಯೆ ಬಗೆಹರಿಸುವುದ್ದಕ್ಕೆ ಮುತ್ಸದ್ಧಿತನ, ಪ್ರಬುದ್ಧತೆ, ಮಾನವೀಯತೆಯ ಅಗತ್ಯವಿದೆ. ಹೀಗಾಗಿ ಸೌಹಾರ್ದತೆಯಿಂದ ಸಮಸ್ಯೆಗಳನ್ನ ಬಗೆಹರಿಸಿ ಎಂದು ಸಿಎಂ BSYಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಇನ್ನು, ಈ ಕುರಿತು ಮಾಜಿ ಸಿಎಂ H.D.ಕುಮಾರಸ್ವಾಮಿ ಸಹ ಟ್ವೀಟ್​ ಮಾಡಿದ್ದು ಬಿಡದಿ ಟೊಯೋಟಾ ಕಿರ್ಲೋಸ್ಕರ್‌ ಕಾರ್ಮಿಕರ ಮುಷ್ಕರಕ್ಕೆ 2 ತಿಂಗಳಾಗುತ್ತಿದೆಯಾದರೂ, ಪರಿಹಾರ ಕಾಣಿಸುತ್ತಿಲ್ಲ. ಕಾರ್ಮಿಕರು-ಸಂಸ್ಥೆಯ ಮುಖ್ಯಸ್ಥರ ನಡುವಿನ ವ್ಯವಸ್ಥಾಪಕರ ಭಿನ್ನಾಭಿಪ್ರಾಯಗಳು, ಪ್ರತಿಷ್ಠೆ, ಸರ್ಕಾರದ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿರಬಹುದು. ರಾಜ್ಯದ ಔದ್ಯಮಿಕ ಪ್ರಗತಿ ದೃಷ್ಟಿಯಿಂದ ಈ ಸಮಸ್ಯೆಗೆ ಅಂತ್ಯ ಹಾಡುವುದು ಈಗಿನ ಅಗತ್ಯ ಎಂದು ಹೇಳಿದ್ದಾರೆ.

ಜೊತೆಗೆ, ಕೋಲಾರದ ‘ವಿಸ್ಟ್ರಾನ್‌’ ಘಟನೆಗೆ ಸಂಸ್ಥೆಯ ವ್ಯವಸ್ಥಾಪನೆಯಲ್ಲಿ ಆಗಿದ್ದ ಲೋಪವೇ ಕಾರಣ ಎಂದೂ, ಕಾರ್ಮಿಕರು, ನೌಕರರನ್ನು ಘನತೆಯಿಂದ ಕಾಣುವುದಾಗಿಯೂ ಆಪಲ್‌ ಸಂಸ್ಥೆ ಹೇಳಿದೆ. ವಿಸ್ಟ್ರಾನ್‌ ಕಂಪನಿಯೂ ತನ್ನ ಉಪಾಧ್ಯಕ್ಷನನ್ನು ಇದೇ ಉದ್ದೇಶಕ್ಕೆ ಕಿತ್ತು ಹಾಕಿದೆ. ಟೊಯೋಟಾ ಕೂಡ ತನ್ನ ಆಂತರಿಕ ವಿಚಾರಗಳ ಬಗ್ಗೆ ಒಮ್ಮೆ ಪಾರಾಮರ್ಶೆ ಮಾಡಬೇಕು ಎಂದು ಹೇಳಿದ್ದಾರೆ.

 

ವಿಸ್ಟ್ರಾನ್ ಕಾರ್ಮಿಕರು ದೂರು ನೀಡದೆ ದಿಢೀರ್ ಹಾನಿ ಮಾಡ್ತಾರೆ ಅಂದ್ರೆ.. ಇದರ ಹಿಂದೆ ಷಡ್ಯಂತ್ರ ಇದೆ -C.T.ರವಿ

40ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಿರ್ಲೋಸ್ಕರ್​ ಕಾರ್ಮಿಕರ ಮುಷ್ಕರ: DC ಕಚೇರಿ ಮುತ್ತಿಗೆಗೆ ಯತ್ನ

ವಿಸ್ಟ್ರಾನ್ ಕಂಪನಿ ದಾಂಧಲೆ ಪ್ರಕರಣ: ಕಂಪನಿಯ ಉಪಾಧ್ಯಕ್ಷ ವಿನ್ಸೆಂಟ್​​ ಲೀ ತಲೆದಂಡ

Published On - 11:40 am, Sun, 20 December 20