ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಮೃತಪಟ್ಟ ಕೊರೊನಾ ಸೋಂಕಿತ P-796ಗೆ ಪ್ಲಾಸ್ಮಾ ಥೆರಪಿ ಮಾಡಲಾಗಿತ್ತು. ಇದು ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಆಗಿದೆ. ಪ್ಲಾಸ್ಮಾ ಥೆರಪಿ ಮಾಡಿದರೂ ಕೊರೊನಾ ಸೋಂಕಿತ ವ್ಯಕ್ತಿ ಬದುಕುಳಿಯಲಿಲ್ಲ. ಹೀಗಾಗಿ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ಫೆಲ್ಯೂರ್ ಆಯ್ತಾ ಎಂಬ ಅನುಮಾನ ಹುಟ್ಟಿದೆ.
ಆಂಧ್ರದ ನೆಲ್ಲೂರಿನ ವ್ಯಕ್ತಿ P-796ತೀವ್ರ ಜ್ವರ ಹಾಗೂ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ಬದುಕುವುದು ಕಷ್ಟ ಎಂದು ಅರಿತ ಮೇಲೆ ವಿಕ್ಟೋರಿಯಾ ಆಸ್ಪತ್ರೆಯ ತಜ್ಞರ ತಂಡ ಪ್ಲಾಸ್ಮಾ ಥೆರಪಿ ಮಾಡಿದ್ದರು. ಥೆರಪಿ ಮಾಡಿದ್ರೂ ಸೋಂಕಿತನಲ್ಲಿ ಯಾವುದೆ ಚೇತರಿಕೆ ಕಂಡಿರಲಿಲ್ಲ. ಹಾಗಾದ್ರೆ ಭರವಸೆ ಮೂಡಿಸಿದ್ದ ಪ್ಲಾಸ್ಮಾ ಥೆರಪಿ ಸಕ್ಸಸ್ ಆಗಲಿಲ್ವಾ ಎಂಬ ಅನುಮಾನ ಕಾಡುತ್ತಿದೆ. ಸದ್ಯ P-796 ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ವಿಕ್ಟೋರಿಯಾ ಮೂಲಗಳು ಮಾಹಿತಿ ನೀಡಿವೆ.