ಬೆಂಗಳೂರು: ಕೊರೊನಾ ಶಂಕಿತರನ್ನು ಕ್ವಾರಂಟೈನ್ಗೆ ಶಿಫ್ಟ್ ಮಾಡಲು ಬಂದಿದ್ದ ಅಧಿಕಾರಿಗಳ ವಿರುದ್ಧ ಪಾದರಾಯನಪುರದಲ್ಲಿ ಕೆಲ ಗೂಂಡಾಗಳು ಹಲ್ಲೆ ನಡೆಸಿ ಗಲಾಟೆ ಮಾಡಿದ್ದರು. ಸುದೀರ್ಘ ತನಿಖೆಗೆಗಾಗಿ ಈ ಪ್ರಕರಣವನ್ನ ಸಿಸಿಬಿ ಪೊಲೀಸರಿಗೆ ವರ್ಗಾಯಿಸಲಾಗಿದೆ. ಕಾನೂನು ಸುವ್ಯವಸ್ಥೆ ಕರ್ತವ್ಯಕ್ಕೆ ಪಶ್ಚಿಮ ವಿಭಾಗ ಪೊಲೀಸರ ಅಗತ್ಯ ಹಿನ್ನೆಲೆಯಲ್ಲಿ ಸಿಸಿಬಿಗೆ ವರ್ಗಾಯಿಸಲಾಗಿದೆ.
ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 12 ಇನ್ಸ್ಪೆಕ್ಟರ್ಸ್, ಮೂವರು ಎಸಿಪಿಗಳಿಂದ ತನಿಖೆ ನಡೆಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದಾರೆ. ಎರಡು ಗಂಟೆಗಳ ಹಿಂದೆ ಕೇಸ್ ಟೇಕ್ ಓವರ್ ಮಾಡಿದ ಸಿಸಿಬಿ ತಂಡ ಸದ್ಯ ಬಂಧಿತರ ಮೊಬೈಲ್ ಕರೆಗಳ ಮಾಹಿತಿ ಕಲೆ ಹಾಕಿ ಆರೋಪಿಗಳ ವಿಚಾರಣೆ ನಡೆಸುತ್ತಿದೆ.
Published On - 2:47 pm, Mon, 20 April 20