AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈವರೆಗೆ ಕೊರೊನಾದಿಂದ ರಾಜ್ಯದಲ್ಲಿ ಸತ್ತವರ ಸಂಖ್ಯೆ ಎಷ್ಟು?

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 18 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 408 ಕ್ಕೆ ಏರಿಕೆಯಾಗಿದೆ. ಈಗಾಗಲೇ ಸೋಂಕಿತರಾದವರ ಜೊತೆ ಸಂಪರ್ಕದಲ್ಲಿದ್ದವರಿಗೆ ಈ ಸೋಂಕು ಹತ್ತಿದೆ. ಈವರೆಗೆ ಕೊರೊನಾದಿಂದ ರಾಜ್ಯದಲ್ಲಿ 16 ಮಂದಿ ಸಾವಿಗೀಡಾಗಿದ್ದಾರೆ. ವಿಜಯಪುರ ಜಿಲ್ಲೆಯೊಂದರಲ್ಲೇ ಇಂದು 11 ಪ್ರಕರಣ ಪತ್ತೆಯಾಗಿದ್ದು, ಕಲಬುರಗಿ 5, ಗದಗ 1, ಬೀದರ್​ನಲ್ಲಿ 1 ಪ್ರಕರಣ ಪತ್ತೆಯಾಗಿದೆ. ವಿಜಯಪುರದಲ್ಲಿ ಇಂದು ಪತ್ತೆಯಾಗಿರುವ ಪ್ರಕರಣಗಳು ಎರಡು ಕುಟುಂಬದಿಂದಲೇ ಸೋಂಕಿತಗೊಂಡಿರುವುದಾಗಿದೆ. 391ನೇ ಸೋಂಕಿತ ಕಲಬುರಗಿಯ 17 […]

ಈವರೆಗೆ ಕೊರೊನಾದಿಂದ ರಾಜ್ಯದಲ್ಲಿ ಸತ್ತವರ ಸಂಖ್ಯೆ ಎಷ್ಟು?
ಸಾಧು ಶ್ರೀನಾಥ್​
|

Updated on:Apr 20, 2020 | 5:43 PM

Share

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 18 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 408 ಕ್ಕೆ ಏರಿಕೆಯಾಗಿದೆ. ಈಗಾಗಲೇ ಸೋಂಕಿತರಾದವರ ಜೊತೆ ಸಂಪರ್ಕದಲ್ಲಿದ್ದವರಿಗೆ ಈ ಸೋಂಕು ಹತ್ತಿದೆ. ಈವರೆಗೆ ಕೊರೊನಾದಿಂದ ರಾಜ್ಯದಲ್ಲಿ 16 ಮಂದಿ ಸಾವಿಗೀಡಾಗಿದ್ದಾರೆ.

ವಿಜಯಪುರ ಜಿಲ್ಲೆಯೊಂದರಲ್ಲೇ ಇಂದು 11 ಪ್ರಕರಣ ಪತ್ತೆಯಾಗಿದ್ದು, ಕಲಬುರಗಿ 5, ಗದಗ 1, ಬೀದರ್​ನಲ್ಲಿ 1 ಪ್ರಕರಣ ಪತ್ತೆಯಾಗಿದೆ. ವಿಜಯಪುರದಲ್ಲಿ ಇಂದು ಪತ್ತೆಯಾಗಿರುವ ಪ್ರಕರಣಗಳು ಎರಡು ಕುಟುಂಬದಿಂದಲೇ ಸೋಂಕಿತಗೊಂಡಿರುವುದಾಗಿದೆ.

391ನೇ ಸೋಂಕಿತ ಕಲಬುರಗಿಯ 17 ವರ್ಷದ ಬಾಲಕ. 175ನೇ ಸೋಂಕಿತರ ಸಂಪರ್ಕದಲ್ಲಿದ್ದ ಬಾಲಕನಿಗೆ ಸೋಂಕು. 175ನೇ ಸೋಂಕಿತನ ಟ್ರಾವೆಲ್ ಹಿಸ್ಟರಿ ಇನ್ನೂ ಪತ್ತೆಯಾಗಿಲ್ಲ. 205ನೇ ರೋಗಿಯಿಂದ ಮೂವರಿಗೆ ಕೊರೊನಾ ಸೋಂಕು. 392ನೇ ಸೋಂಕಿತ ಕಲಬುರಗಿಯ 13 ವರ್ಷದ ಬಾಲಕ. 393ನೇ ಸೋಂಕಿತೆ ಕಲಬುರಗಿಯ 30 ವರ್ಷದ ಮಹಿಳೆ. ಇಬ್ಬರಿಗೂ 205ನೇ ರೋಗಿಯಿಂದ ಕೊರೊನಾ ಸೋಂಕು. 205ನೇ ಸೋಂಕಿತ ದೆಹಲಿಯಿಂದ ಬಂದವರ ಜತೆ ಸಂಪರ್ಕ.

394ನೇ ಸೋಂಕಿತ ಕಲಬುರಗಿಯ 50 ವರ್ಷದ ಪುರುಷ. 177ನೇ ಸೋಂಕಿತನ ಸಂಪರ್ಕದಲ್ಲಿದ್ದ ಪುರುಷನಿಗೆ ಸೋಂಕು. 177ನೇ ಸೋಂಕಿತ ಯಾರೂ ಸಂಪರ್ಕವೂ ಹೊಂದಿರಲಿಲ್ಲ. 395ನೇ ಸೋಂಕಿತ ಕಲಬುರಗಿಯ 19 ವರ್ಷದ ಯುವಕ ಈತನಿಗೂ 205ನೇ ರೋಗಿಯಿಂದ ಕೊರೊನಾ ಸೋಂಕು. 205ನೇ ಸೋಂಕಿತ ದೆಹಲಿಯಿಂದ ಬಂದವನ ಸಂಪರ್ಕ. ದೆಹಲಿಯಿಂದ ಬಂದಿದ್ದ ವ್ಯಕ್ತಿ ಸಂಪರ್ಕದಲ್ಲಿದ್ದ 205ನೇ ಸೋಂಕಿತ. ಆದರೆ ದೆಹಲಿಯಿಂದ ಬಂದ ವ್ಯಕ್ತಿಗೆ ಕೊರೊನಾ ನೆಗೆಟಿವ್

396ನೇ ಸೋಂಕಿತ 24 ವರ್ಷದ ಗದಗ ಜಿಲ್ಲೆಯ ವ್ಯಕ್ತಿ. 370ನೇ ಸೋಂಕಿತರಿಂದ ದ್ವಿತೀಯ ಸಂಪರ್ಕ. 397ನೇ ಸೋಂಕಿತೆ 7 ವರ್ಷದ ವಿಜಯಪುರದ ಬಾಲಕಿ. 221ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು. 398ನೇ ಸೋಂಕಿತ 36 ವರ್ಷದ ವಿಜಯಪುರದ ವ್ಯಕ್ತಿ. 221ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು. 399ನೇ ಸೋಂಕಿತೆ 27 ವರ್ಷದ ವಿಜಯಪುರದ ಯುವತಿ. 221ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು. 400ನೇ ಸೋಂಕಿತೆ 25 ವರ್ಷದ ವಿಜಯಪುರದ ಯುವತಿ. 221ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು. 401ನೇ ಸೋಂಕಿತೆ 21 ವರ್ಷದ ವಿಜಯಪುರದ ಯುವತಿ.

362ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು. 402ನೇ ಸೋಂಕಿತ 28 ವರ್ಷದ ವಿಜಯಪುರದ ವ್ಯಕ್ತಿ. 362ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು. 403ನೇ ಸೋಂಕಿತೆ 47 ವರ್ಷದ ವಿಜಯಪುರದ ಮಹಿಳೆ. 362ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು. 404ನೇ ಸೋಂಕಿತ 10 ವರ್ಷದ ವಿಜಯಪುರದ ಬಾಲಕ. 221ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು. 405ನೇ ಸೋಂಕಿತೆ 34 ವರ್ಷದ ವಿಜಯಪುರದ ಮಹಿಳೆ.

228ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು. 406ನೇ ಸೋಂಕಿತೆ 38 ವರ್ಷದ ವಿಜಯಪುರದ ಮಹಿಳೆ. 221ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು. 407ನೇ ಸೋಂಕಿತ 14 ವರ್ಷದ ವಿಜಯಪುರದ ಬಾಲಕ. 221ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು. 408ನೇ ಸೋಂಕಿತ 27 ವರ್ಷದ ಬೀದರ್​ ಜಿಲ್ಲೆಯ ಪುರುಷ. 117ನೇ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು.

Published On - 5:34 pm, Mon, 20 April 20

ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?