ಬೆಂಗಳೂರು: ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ IT-BT ಉದ್ಯಮಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಲಾಗಿತ್ತು. ಆದರೆ ಈಗ ವರ್ಕ್ ಫ್ರಮ್ ಹೋಂ ರದ್ದು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಡಿಸಿಎಂ ಅಶ್ವತ್ಥ್ ನಾರಾಯಣರಿಗೆ ಸಂಸದ ಪಿ.ಸಿ.ಮೋಹನ್ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಈ ಬಗ್ಗೆ ಅಬಕಾರಿ ಇಲಾಖೆ ಸಚಿವ ನಾಗೇಶ್‌ರಿಂದಲೂ ಒತ್ತಾಯ ಕೇಳಿ ಬಂದಿತ್ತು.
ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗುತ್ತಿದ್ದಂತೆ ಎಲ್ಲವೂ ಬಂದ್ ಆಗಿತ್ತು. ಶಾಲೆ-ಕಾಲೇಜುಗಳ ಬಾಗಿಲು ಮುಚ್ಚಿದ್ದವು. ರಾಜ್ಯದಲ್ಲಿ ಕಠಿಣ ಕ್ರಮಗಳು ಜಾರಿಯಾಗಿದ್ದವು. ಲಾಕ್ಡೌನ್ ಹೇರಲಾಗುತ್ತು. ಹಾಗೇ ನಿಮಗೆಲ್ಲಾ ತಿಳಿದಂತೆ ಸರ್ಕಾರ ಉದ್ಯಮಿಗಳು ಮನೆಯಲ್ಲೇ ಕೂತು ಕೆಲಸ ಮಾಡಲಿ ಎಂದು ವರ್ಕ್ ಫ್ರಮ್ ಹೋಮ್ ಘೋಷಿಸಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಬಿಗಿದಿದ್ದ ಗಂಟಲು ಸರಳಾದಂತಾಗಿದೆ.
ಆರ್ಥಿಕತೆ ಹಂತ ಹಂತವಾಗಿ ಮೇಲೇಳುತ್ತಿದೆ. ವಿದ್ಯಾರ್ಥಿಗಳು ಶಾಲೆ-ಕಾಲೇಜಿನತ್ತ ಮುಖ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಸುಧಾರಣೆಯಾದರೂ IT-BT ಉದ್ಯಮಿಗಳಿಗೆ ವರ್ಕ್ ಫ್ರಮ್ ಹೋಮ್ ಮಾತ್ರ ಕ್ಯಾನ್ಸಲ್ ಆಗಿಲ್ಲ. ಕೊರೊನಾ ಬಂದಾಗಿನಿಂದಲೂ ಮನೆಯಲ್ಲೇ ಕೆಲಸ ಮಾಡ್ತಿದ್ದಾರೆ. ಸದ್ಯ ಇದರಿಂದ ಸರ್ಕಾರಕ್ಕೆ ನಷ್ಟ ಉಂಟಾಗುತ್ತಿದೆಯಂತೆ. ಹೀಗಾಗಿ ವರ್ಕ್ ಫ್ರಮ್ ಹೋಂ ರದ್ದು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಶಾಲಾ ಕಾಲೇಜು ಶುರು ಆದ್ಮೇಲೆ ಐಟಿ ಬಿಟಿ ಕಂಪನಿಗಳು ಯಾಕೆ ಆರಂಭ ಆಗ್ತಿಲ್ಲ?
ಶಾಲಾ ಕಾಲೇಜು ಶುರು ಆದ್ಮೇಲೆ ಐಟಿ ಬಿಟಿ ಕಂಪನಿಗಳು ಯಾಕೆ ಆರಂಭ ಆಗ್ತಿಲ್ಲ ಅಂತ ಸಂಸದ ಪಿಸಿ ಮೋಹನ್ ಪ್ರಶ್ನಿಸಿದ್ದಾರೆ. ವರ್ಕ್ ಫ್ರಮ್ ಹೋಮ್‌ನಿಂದ ಅಬಕಾರಿ ಇಲಾಖೆಗೆ ಭಾರಿ ನಷ್ಟವಾಗಿದೆ. ಬಾರ್ & ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಕ್ಯಾಬ್ ಚಾಲಕರು, ಸಣ್ಣ ಪುಟ್ಟ ಅಂಗಡಿಗಳು ನಷ್ಟದಲ್ಲಿವೆ. ಹೀಗಾಗಿ ವರ್ಕ್ ಫ್ರಮ್ ಹೋಮ್ ರದ್ದು ಮಾಡಿದರೆ ನಷ್ಟದಲ್ಲಿರುವವರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ.
‘Work from Home ಪದ್ಧತಿ ಕೊರೊನಾ ಮಹಾಮಾರಿ ಮುಗಿದ ಬಳಿಕವೂ ಮುಂದುವರಿಯಲಿದೆ, ಆದ್ರೇ?’