ಅಭಿಮಾನಿಗಳು ನಟರನ್ನು ಅನುಕರಿಸುತ್ತಾರೆ..ಇಂಥ ದೃಶ್ಯಗಳನ್ನು ತೋರಿಸಬಾರದು: ಕೆಜಿಎಫ್-2​ ಟೀಸರ್​ ಬಗ್ಗೆ ಸುಧಾಕರ್​ ಪ್ರತಿಕ್ರಿಯೆ

|

Updated on: Jan 13, 2021 | 12:51 PM

ಇಂದು ರಾಜ್ಯಕ್ಕೆ 20 ಸಾವಿರ ಡೋಸ್ ಕೊವ್ಯಾಕ್ಸಿನ್​ ಲಸಿಕೆ ಬರುತ್ತಿದೆ. ನಾಳೆಯೊಳಗೆ ಎಲ್ಲ ಜಿಲ್ಲೆಗಳಿಗೆ ಲಸಿಕೆ ಹಂಚಿಕೆ ಮಾಡಲಾಗುವುದು. ಕೊವ್ಯಾಕ್ಸಿನ್​, ಕೊವಿಶೀಲ್ಡ್​ ಎರಡೂ ವ್ಯಾಕ್ಸಿನ್​ ಕೊಡುತ್ತೇವೆ. ಯಾವ ಜಿಲ್ಲೆಗಳಿಗೆ ಎಷ್ಟು ಲಸಿಕೆ ಕೊಡಬೇಕು ಎಂಬುದನ್ನು ಕೇಂದ್ರ ಸರ್ಕಾರ ಈಗಾಗಲೇ ಪಟ್ಟಿ ಬಿಡುಗಡೆ ಮಾಡಿದೆ.

ಅಭಿಮಾನಿಗಳು ನಟರನ್ನು ಅನುಕರಿಸುತ್ತಾರೆ..ಇಂಥ ದೃಶ್ಯಗಳನ್ನು ತೋರಿಸಬಾರದು: ಕೆಜಿಎಫ್-2​ ಟೀಸರ್​ ಬಗ್ಗೆ ಸುಧಾಕರ್​ ಪ್ರತಿಕ್ರಿಯೆ
ಡಾ. ಕೆ.ಸುಧಾಕರ್​
Follow us on

ಬೆಂಗಳೂರು: ಕೆಜಿಎಫ್​ ಚಿತ್ರದಲ್ಲಿ ಬಂದೂಕಿನಿಂದ ಯಶ್​ ಸಿಗರೇಟ್​ ಹಚ್ಚಿರುವ ದೃಶ್ಯ ಭರ್ಜರಿ ಫೇಮಸ್ ಆದ ಬೆನ್ನಲ್ಲೇ, ಈ ದೃಶ್ಯವನ್ನು ತೆಗೆಯಿರಿ ಎಂದು ಆರೋಗ್ಯ ಇಲಾಖೆಯಿಂದ ನೋಟಿಸ್ ಕೂಡ ಬಂದಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ನಟರನ್ನು ಸಾವಿರಾರು ಅಭಿಮಾನಿಗಳು ಫಾಲೋ ಮಾಡುತ್ತಾರೆ. ಹಾಗಾಗಿ ಯಶ್​ ಸೇರಿ ಇತರ ನಟರಿಗೂ ಆರೋಗ್ಯ ಇಲಾಖೆಯಿಂದ ಮನವಿ ಮಾಡುತ್ತಿದ್ದೇವೆ. ಇಂಥ ದೃಶ್ಯಗಳನ್ನು ತೋರಿಸಬಾರದು ಎಂದಿದ್ದಾರೆ.

ದೇಶದಲ್ಲಿ ಕ್ಯಾನ್ಸರ್ ಪೀಡಿತರು ಹೆಚ್ಚುತ್ತಿದ್ದಾರೆ. ಹಾಗಾಗಿ ಸಿನಿಮಾಗಳಲ್ಲಿ ಆದಷ್ಟು ಸಿಗರೇಟ್​ ಸೇದುವ ದೃಶ್ಯಗಳನ್ನು ತೋರಿಸಬಾರದು. ಜನರು ನಟನನ್ನು ಅನುಕರಿಸುತ್ತಾರೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವಂತಹ ದೃಶ್ಯಗಳು ಇರಬೇಕು ಹೊರತು, ಇಂಥದ್ದನ್ನೆಲ್ಲ ತೋರಿಸಬಾರದು ಎಂದು ಹೇಳಿದ್ದಾರೆ.

ಮುನಿರತ್ನ ಸಚಿವರಾಗ್ತಾರೆ !
ಈ ಬಾರಿಯ ಸಚಿವ ಸಂಪುಟದಲ್ಲೂ ಮುನಿರತ್ನ ಹೆಸರು ಇಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್​, ಮುನಿರತ್ನ ಹೆಸರು ಪಟ್ಟಿಯಲ್ಲಿ ಇಲ್ಲ ಎಂಬ ವಿಚಾರ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿದ ಮೇಲೆಯೇ ಗೊತ್ತಾಗಿದ್ದು. ಆದರೆ ಖಂಡಿತ ಮುನಿರತ್ನ ಈ ಬಾರಿ ಸಚಿವರಾಗ್ತಾರೆ ಎನ್ನುವ ನಂಬಿಕೆ ಇದೆ. ಸಂಪುಟ ವಿಸ್ತರಣೆ ಎಂದಮೇಲೆ ಗೊಂದಲ ಇದ್ದೇ ಇರುತ್ತದೆ. ಅದು ನಿವಾರಣೆಯಾಗುವವರೆಗೂ ಕಾಯಬೇಕು. ನಾವು 17 ಜನರಷ್ಟೇ ಅಲ್ಲ, ಬಿಜೆಪಿಯ ಎಲ್ಲ ಶಾಸಕರೂ ಒಟ್ಟಿಗೇ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

ನಾಳೆಯೊಳಗೆ ಕೊವಿಡ್​ ಲಸಿಕೆ
ಇಂದು ರಾಜ್ಯಕ್ಕೆ 20 ಸಾವಿರ ಡೋಸ್ ಕೊವ್ಯಾಕ್ಸಿನ್​ ಲಸಿಕೆ ಬರುತ್ತಿದೆ. ನಾಳೆಯೊಳಗೆ ಎಲ್ಲ ಜಿಲ್ಲೆಗಳಿಗೆ ಲಸಿಕೆ ಹಂಚಿಕೆ ಮಾಡಲಾಗುವುದು. ಕೊವ್ಯಾಕ್ಸಿನ್​, ಕೊವಿಶೀಲ್ಡ್​ ಎರಡೂ ವ್ಯಾಕ್ಸಿನ್​ ಕೊಡುತ್ತೇವೆ. ಯಾವ ಜಿಲ್ಲೆಗಳಿಗೆ ಎಷ್ಟು ಲಸಿಕೆ ಕೊಡಬೇಕು ಎಂಬುದನ್ನು ಕೇಂದ್ರ ಸರ್ಕಾರ ಈಗಾಗಲೇ ಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಲಸಿಕೆ ಹಂಚಿಕೆಯಾಗುತ್ತದೆ ಎಂದು ಮಾಹಿತಿ ನೀಡಿದರು.

ಬಂದೂಕಿನಿಂದ ಸಿಗರೇಟ್ ಹಚ್ಚಿದಕ್ಕೆ ರಾಕಿಂಗ್ ಸ್ಟಾರ್ ಯಶ್​ಗೆ ನೋಟಿಸ್.. ಸೀನ್ ಕತ್ತರಿಸುವಂತೆ ಸೂಚನೆ

 

ಪಂಚಮಸಾಲಿ ಸ್ವಾಮೀಜಿ ಗುಡುಗು: ಒಂದು ವರ್ಷದ ನಂತರ ನಿರಾಣಿಗೆ ಸಚಿವ ಸ್ಥಾನದ ಗದ್ದುಗೆ

Published On - 12:39 pm, Wed, 13 January 21