ಮೈಸೂರು: ಕೊರೊನಾ ಲಾಕ್‌ಡೌನ್ ನಡುವೆ ಮೈಸೂರಿನಲ್ಲಿ ಹುಲಿ ಕಾಟ ಶುರುವಾಗಿದೆ. ಕಳೆದ ಎರಡು ವಾರಗಳಿಂದ ಕಾಡಂಚಿನ ಗ್ರಾಮದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿದೆ ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಹುಣಸೂರು ತಾಲ್ಲೂಕಿನ ಕಚುವಿನಹಳ್ಳಿ, ದೊಡ್ಡಹೆಜ್ಜೂರು, ದಾಸನಪುರ, ಹನಗೋಡು, ನೇಗತ್ತೂರು ಗ್ರಾಮಗಳಲ್ಲಿ ಹುಲಿಯ ಆತಂಕ ಹೆಚ್ಚಾಗಿದೆ. ಹೀಗಾಗಿ ಗ್ರಾಮದ ಜನರ ಆತಂಕ ದೂರ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಪತ್ತೆಗೆ ಸಾಕಾನೆಗಳಿಂದ ಕೂಂಬಿಂಗ್ ನಡೆಸಿದರು. ಆದರೆ ಕೂಂಬಿಂಗ್ ವೇಳೆಯೂ ಹುಲಿ ಪತ್ತೆಯಾಗಿಲ್ಲ. ಅಲ್ಲಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ.
ಮೊದಲ ಬಾರಿಗೆ ಮೇ 3 ರಂದು ನೇಗತ್ತೂರಿನಲ್ಲಿ ಹಸುವಿನ ಮೇಲೆ ದಾಳಿ ನಡೆಸಿತ್ತು.
ಮೇ 6ರಂದು ಕಚುವಿನಹಳ್ಳಿ ಸಿದ್ದೇಗೌಡರ ಜಾನುವಾರುವಿನ ಮೇಲೆ ದಾಳಿ
ಮೇ 8ರಂದು ದಾಸನಪುರದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ
ಮೇ 10 ರಂದು ದೊಡ್ಡಹೆಜ್ಜೂರಿನಲ್ಲಿ ಮೇಕೆ ಮೇಲೆ ದಾಳಿ
ಮೇ 12 ರಲ್ಲಿ ಲಕ್ಕ ಪಟ್ಟಣ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿತ್ತು
ಮೇ 14ರಂದು ಶೆಟ್ಟಳ್ಳಿ ಲಕ್ ಪಟ್ಟಣ ಗಿರಿಜನರ ಬಾಳೆ ತೋಟ ಹಾಗೂ ಜಮೀನಿನಲ್ಲಿ ಕಾಣಿಸಿಕೊಂಡಿತ್ತು
ಮೇ 18ರಂದು ವೀರ ತಮ್ಮನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು
ಬಲರಾಮ, ಕೃಷ್ಣ, ಗಣೇಶ ಗೋಪಾಲಸ್ವಾಮಿ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಆದರೆ ಇದುವರೆಗೂ ಹುಲಿ ಸಿಕಿಲ್ಲ. ಗ್ರಾಮದ ಜನರಲ್ಲಿ ಕೊರೊನಾ ಭಯಕಿಂತಲೂ ಹುಲಿ ಭಯ ಹೆಚ್ಚಾಗಿದೆ. ಆದಷ್ಟು ಬೇಗ ಹಂತಕ ಹುಲಿಯನ್ನು ಸೆರೆ ಹಿಡಿದು ಜನರ ಭಯ ದೂರ ಮಾಡಬೇಕಿದೆ.
ಇದನ್ನೂ ಓದಿ: ಆನೇಕಲ್ ಬಳಿ ಕರಡಿ ಪ್ರತ್ಯಕ್ಷ, ಹುಬ್ಬಳ್ಳಿಯಲ್ಲಿ ಹುಲಿ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Published On - 9:01 am, Thu, 20 May 21