15 ದಿನಗಳಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಕುಟುಂಬದಲ್ಲಿ ಪುತ್ರ ಸೇರಿದಂತೆ ನಾಲ್ವರು ಕೊರೊನಾಗೆ ಬಲಿ
ದೊಡ್ಡಬಳ್ಳಾಪುರ: ಹದಿನೈದು ದಿನಗಳ ಅಂತರದಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಕುಟುಂಬದ ನಾಲ್ವರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಮೃತರೆಲ್ಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಠಾಣೆಯ PSI ವೆಂಕಟೇಶ್ ಕುಟುಂಬಸ್ಥರು. PSI ವೆಂಕಟೇಶ್ ಹೊರತುಪಡಿಸಿ ಮನೆಯವರಿಗೆ ಸೋಂಕು ತಗುಲಿತ್ತು. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಐಸೋಲೇಷನ್ ಮಾಡಿ, ನಾಲ್ಕೂ ಮಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಮೊದಲಿಗೆ ಎಂಬಿಬಿಎಸ್ ಓದುತ್ತಿದ್ದ PSI ವೆಂಕಟೇಶ್ ಅವರ ಮಗ ಸಾವಿಗೀಡಾಗಿದ್ದಾನೆ. ನಂತರ ವೆಂಕಟೇಶ್ ಅವರ ಭಾವಮೈದುನ, ಅತ್ತೆ, ಮಾವ ಕೊರೊನಾಗೆ ಬಲಿಯಾಗಿದ್ದಾರೆ. ಒಬ್ಬೂಬ್ಬರಾಗಿ 15 ದಿನಗಳಲ್ಲಿ […]

ದೊಡ್ಡಬಳ್ಳಾಪುರ: ಹದಿನೈದು ದಿನಗಳ ಅಂತರದಲ್ಲಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಕುಟುಂಬದ ನಾಲ್ವರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಮೃತರೆಲ್ಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಠಾಣೆಯ PSI ವೆಂಕಟೇಶ್ ಕುಟುಂಬಸ್ಥರು. PSI ವೆಂಕಟೇಶ್ ಹೊರತುಪಡಿಸಿ ಮನೆಯವರಿಗೆ ಸೋಂಕು ತಗುಲಿತ್ತು. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಐಸೋಲೇಷನ್ ಮಾಡಿ, ನಾಲ್ಕೂ ಮಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಮೊದಲಿಗೆ ಎಂಬಿಬಿಎಸ್ ಓದುತ್ತಿದ್ದ PSI ವೆಂಕಟೇಶ್ ಅವರ ಮಗ ಸಾವಿಗೀಡಾಗಿದ್ದಾನೆ. ನಂತರ ವೆಂಕಟೇಶ್ ಅವರ ಭಾವಮೈದುನ, ಅತ್ತೆ, ಮಾವ ಕೊರೊನಾಗೆ ಬಲಿಯಾಗಿದ್ದಾರೆ. ಒಬ್ಬೂಬ್ಬರಾಗಿ 15 ದಿನಗಳಲ್ಲಿ ನಾಲ್ವರೂ ಮೃತಪಟ್ಟಿದ್ದಾರೆ.

ಎಂಬಿಬಿಎಸ್ ಓದುತ್ತಿದ್ದ PSI ವೆಂಕಟೇಶ್ ಅವರ ಮಗ ಕೊರೊನಾಗೆ ಬಲಿ
ಅತ್ಯಾಪ್ತರ ಸರಣಿ ಸಾವುಗಳಿಂದ ಪಿಎಸ್ಐ ವೆಂಕಟೇಶ್ ಮನನೊಂದಿದ್ದಾರೆ. ಮನೆ ಮಂದಿಗೆ ಕೊರೊನಾ ಸೊಂಕಿನ ನಡುವೆಯೂ ವೆಂಕಟೇಶ್ ಕರ್ತವ್ಯದಿಂದ ವಿಮುಖರಾಗದೆ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಠಾಣೆಯಲ್ಲಿ ಸ್ಟೀಮಿಂಗ್, ಹಸಿದವರಿಗೆ ಅನ್ನ ಸೇರಿದಂತೆ ಮಾರುಕಟ್ಟೆಗಳಲ್ಲಿ ಸೇರಿದ್ದ ಜನರಿಗೆ ಕೊರೊನಾ ಜಾಗೃತಿ ಮೂಡಿಸಿದ್ದಾರೆ.
(doddaballapur city station psi venkatesh son and 3 other family members succumbs to coronavirus)
ಚಿತ್ರದುರ್ಗ ಭರಮಸಾಗರ ಠಾಣೆ ಕಾನ್ಸ್ಟೇಬಲ್ ಕೊರೊನಾಗೆ ಬಲಿ: ಚಿತ್ರದುರ್ಗದ ತಾಲೂಕಿನ ಭರಮಸಾಗರ ಪೊಲೀಸ್ ಠಾಣೆ ಪೊಲೀಸ್ ಕಾನ್ಸ್ಟೇಬಲ್ ಸಿ.ಬಸವರಾಜ್(48) ಕೊರೊನಾ ಸೋಂಕಿನಿಂಧ ಕೊನೆಯುಸಿರೆಳೆದಿದ್ದಾರೆ. ನಗರದ ಬಸವೇಶ್ವರ ಮೆಡಿಕಲ್ ಕಾಲೇಜು& ಆಸ್ಪತ್ರೆಯಲ್ಲಿ ಕಳೆದ 8 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಪಿಸಿ ಬಸವರಾಜ ಅವರು ಚಿಕಿತ್ಸೆ ಫಲಿಸದೆ ಇಂದು ಸಾವಿಗೀಡಾಗಿದ್ದಾರೆ.
ಚೀನಾದಿಂದ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ ಯೋಗ ಶಿಕ್ಷಕ ಕೊರೊನಾ ಬಗ್ಗೆ ಹೇಳಿದ್ದೇನು?
Published On - 9:49 am, Thu, 20 May 21