ಆಕ್ಸಿಜನ್ ಕಾನ್ಸನ್ಟ್ರೇಟರ್ ಜಾಹೀರಾತು ನೋಡಿ ಮೋಸ ಹೋದ ಕುಟುಂಬಸ್ಥರು; ಹಣ, ವ್ಯಕ್ತಿ ಕಳೆದುಕೊಂಡು ಕಣ್ಣೀರು
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕೊರೊನಾ ಸೋಂಕಿತರೊಬ್ಬರಿಗೆ ಆಕ್ಸಿಜನ್ ಅವಶ್ಯಕತೆ ಇತ್ತು. ಹೀಗಾಗಿ ಆಕ್ಸಿಜನ್ ಕಾನ್ಸನ್ಟ್ರೇಟರ್ ಸಿಗುತ್ತದೆ ಎನ್ನುವ ಜಾಹೀರಾತು ನೋಡಿ ಸೋಂಕಿತ ಕುಟುಂಬಸ್ಥರು ಮೋಸ ಹೋಗಿದ್ದಾರೆ.

ನೆಲಮಂಗಲ: ಕೊರೊನಾ ಸೋಂಕಿನ ಭೀಕರತೆಯ ಲಾಭ ಪಡೆದುಕೊಳ್ಳಲು ಮುಂದಾಗಿರುವ ಕೆಲ ಮಂದಿ ಅಮಾಯಕ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ. ಆಕ್ಸಿಜನ್ ಕಾನ್ಸನ್ಟ್ರೇಟರ್ ಕೊಡುತ್ತೇವೆ ಎಂದು ಆನ್ಲೈನ್ ವಂಚನೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕೊರೊನಾ ಸೋಂಕಿತರೊಬ್ಬರಿಗೆ ಆಕ್ಸಿಜನ್ ಅವಶ್ಯಕತೆ ಇತ್ತು. ಹೀಗಾಗಿ ಆಕ್ಸಿಜನ್ ಕಾನ್ಸನ್ಟ್ರೇಟರ್ ಸಿಗುತ್ತದೆ ಎನ್ನುವ ಜಾಹೀರಾತು ನೋಡಿ ಸೋಂಕಿತ ಕುಟುಂಬಸ್ಥರು ಮೋಸ ಹೋಗಿದ್ದಾರೆ. ವಾಟ್ಸ್‌ಆಪ್ ಮೂಲಕ ಬಂದ ಜಾಹೀರಾತು ಸಂದೇಶದಲ್ಲಿನ ನಂಬರ್‌ಗೆ ಕಾಲ್ ಮಾಡಿದ್ದಾರೆ. ಕರೆ ಮಾಡಿ ಕಾನ್ಸನ್ಟ್ರೇಟರ್ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಆಗ ಪ್ರತಿಕ್ರಿಯಿಸಿದ ವ್ಯಕ್ತಿ ಕಳುಹಿಸುತ್ತೇವೆ ಫೋನ್‌ಪೇ ಮೂಲಕ ಹಣ ಕಳುಹಿಸಿ ಎಂದು ಹೇಳಿದ್ದಾರೆ. ಇದನ್ನು ನಂಬಿದ ಸೋಂಕಿತ ವ್ಯಕ್ತಿಯ ಕುಟುಂಬಸ್ಥರು ಫೋನ್‌ಪೇ ಮೂಲಕ ಹಂತ ಹಂತವಾಗಿ 13 ಸಾವಿರ ಹಣ ಸಂದಾಯ ಮಾಡಿದ್ದಾರೆ.
ಬಳಿಕ ಮತ್ತಷ್ಟು ಹಣ ನೀಡಿ ಎಂದು ಒತ್ತಾಯಿಸಿದ್ದಾರೆ. ಕೊನೆಗೆ ಫೋನ್ ರಿಸೀವ್ ಮಾಡದೆ ಸುಮ್ಮನಾಗಿದ್ದಾರೆ. ಬಳಿಕ ನಿರ್ಲಕ್ಷ್ಯವಹಿಸಿದರೆ ಸೋಂಕಿತನ ಪ್ರಾಣಕ್ಕೆ ಅಪಾಯ ಎಂದು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ನೀಡಿದರು ಸೋಂಕಿತ ವ್ಯಕ್ತಿ ಬದುಕಲಿಲ್ಲ. ಸದ್ಯ ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ರೀತಿ ಸೋಂಕಿತ ವ್ಯಕ್ತಿಯ ಕುಟುಂಬಸ್ಥರು ಫೋನ್‌ಪೇ ಮೂಲಕ 13 ಸಾವಿರ ಹಣವನ್ನು ಕಳೆದುಕೊಂಡಿದ್ದಾರೆ.
ಕೊರೊನಾ ಸಮಯವನ್ನು ದುರುಪಯೋಗ ಮಾಡಿಕೊಂಡು ಕೆಲವರು ಹಣ ಕೀಳುವ ಕೆಲಸಕ್ಕೆ ಮುಂದಾಗಿದ್ದಾರೆ. ಇತ್ತ ಹಣವೂ ಇಲ್ಲ, ವ್ಯಕ್ತಿಯೂ ಇಲ್ಲ ಎಂಬ ಸ್ಥಿತಿಯಲ್ಲಿ ಕುಟುಂಬಸ್ಥರು ವಂಚನೆಗೆ ಒಳಗಾಗಿ ಕಣ್ಣೀರಿಡುತ್ತಿದ್ದಾರೆ.

ಫೋನ್‌ಪೇ ಮೂಲಕ ವಂಚನೆ
ಇದನ್ನೂ ಓದಿ: World AIDS Vaccine Day 2021: ಹೆಚ್ಐವಿ ಏಡ್ಸ್ಗೆ ತಿರುಗದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?