AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World AIDS Vaccine Day 2021: ಹೆಚ್​ಐವಿ ಏಡ್ಸ್​ಗೆ ತಿರುಗದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?

HIV Vaccine: ಆರೋಗ್ಯವಂತ ವ್ಯಕ್ತಿಗಳ ದೇಹದಲ್ಲಿ ಸಿಡಿ4 ಜೀವಕಣಗಳು 500 ರಿಂದ 1500 ಇರುತ್ತದೆ. ಚಿಕಿತ್ಸೆ ಪಡೆಯದಿದ್ದರೆ ಹೆಚ್​ಐವಿ ಸಿಡಿ4 ಜೀವಕಣವನ್ನು ನಾಶಪಡಿಸುತ್ತದೆ. ಏಡ್ಸ್​ ಇರುವವರಲ್ಲಿ ಸಿಡಿ4 ಜೀವಕಣಗಳು 200 ಕ್ಕಿಂತ ಕಡಿಮೆ ಇರುತ್ತದೆ.

World AIDS Vaccine Day 2021: ಹೆಚ್​ಐವಿ ಏಡ್ಸ್​ಗೆ ತಿರುಗದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?
ಪ್ರಾತಿನಿಧಿಕ ಚಿತ್ರ
Follow us
preethi shettigar
|

Updated on:May 18, 2021 | 10:16 AM

ವಿಶ್ವ ಏಡ್ಸ್ ಲಸಿಕೆ ದಿನ ಅಥವಾ ಹೆಚ್​ಐವಿ ಲಸಿಕೆ ಜಾಗೃತಿ ದಿನವನ್ನು ಪ್ರತಿ ವರ್ಷ ಮೇ 18 ರಂದು ಆಚರಿಸಲಾಗುತ್ತದೆ. ಹೆಚ್​ಐವಿ ಸೋಂಕು ಮತ್ತು ಏಡ್ಸ್ ತಡೆಗಟ್ಟುವ ಲಸಿಕೆಯನ್ನು ಅಭಿವೃದ್ಧಿಪಡಿಸುವ ತುರ್ತು ಅಗತ್ಯದ ಕುರಿತು ವಿವಿಧ ಸಂಸ್ಥೆಗಳು ಈ ದಿನದಂದು ಪ್ರಸ್ತಾಪಿಸುತ್ತವೆ. ಸುರಕ್ಷಿತ ಮತ್ತು ಪರಿಣಾಮಕಾರಿ ಏಡ್ಸ್ ಲಸಿಕೆ ಕಂಡುಹಿಡಿಯಲು ಒಟ್ಟಾಗಿ ಕೆಲಸ ಮಾಡುತ್ತಿರುವ ಸಾವಿರಾರು ಸ್ವಯಂಸೇವಕರು, ಸಮುದಾಯ ಸದಸ್ಯರು, ಆರೋಗ್ಯ ವೃತ್ತಿಪರರು, ಬೆಂಬಲಿಗರು ಮತ್ತು ವಿಜ್ಞಾನಿಗಳನ್ನು ಇಂದು ಅಂದರೆ ವಿಶ್ವ ಏಡ್ಸ್ ಲಸಿಕೆ ದಿನದಂದು ಸ್ಮರಿಸಲಾಗುತ್ತದೆ ಮತ್ತು ಅವರಿಗೆ ಧನ್ಯವಾದ ತಿಳಿಸಲಾಗುತ್ತದೆ.

ವಿಶ್ವ ಏಡ್ಸ್ ಲಸಿಕೆ ದಿನ ಎಂಬ ಪರಿಕಲ್ಪನೆಯನ್ನು 1997 ರ ಮೇ 18 ರಂದು ಮೋರ್ಗನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿನ ಆಗಿನ ಅಧ್ಯಕ್ಷ ಕ್ಲಿಂಟನ್ ಮಾಡಿದ ಭಾಷಣದಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಲಾಗಿದೆ.  ಪರಿಣಾಮಕಾರಿ ಹೆಚ್​ಐವಿ ಲಸಿಕೆ ಮಾತ್ರ ಏಡ್ಸ್​ನ ಭಯವನ್ನು ಜಗತ್ತಿನಿಂದ ದೂರ ಮಾಡಲು ಸಾಧ್ಯ ಎಂದು ಕ್ಲಿಂಟನ್ ತನ್ನ ಭಾಷಣದ ಮೂಲಕ ಜಗತ್ತಿಗೆ ಈ ಸಂದರ್ಭದಲ್ಲಿ ಸವಾಲು ಹಾಕಿದ್ದರು.

ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಉದಯೋನ್ಮುಖ ಯುಗದಲ್ಲಿ ಹೊಸ ಗುರಿಗಳನ್ನು ಸೃಷ್ಟಿಸಲು ಮತ್ತು ಮುಂದಿನ ದಶಕದಲ್ಲಿ ಏಡ್ಸ್ ಲಸಿಕೆಯನ್ನು ಅಭಿವೃದ್ಧಿಪಡಿಸಲು ಆ ಮೂಲಕ ಮುನ್ನುಡಿ ಬರೆದರು. ಹೀಗಾಗಿ ಕ್ಲಿಂಟನ್ ಅವರ ಈ ಭಾಷಣದ  ನೆನಪಿಗಾಗಿ ಮೇ 18, 1998 ರಂದು ಮೊದಲ ಬಾರಿಗೆ ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಈ ಆಚರಣೆ ಮುಂದುವರೆದಿದೆ.

ಪ್ರತಿ ವರ್ಷ ವಿಶ್ವದಾದ್ಯಂತ ಕೆಲವು ಸಾಮಾಜಿಕ ಪರಿಕಲ್ಪನೆಯನ್ನು ಹೊತ್ತ ಸಮುದಾಯಗಳು ಏಡ್ಸ್ ಲಸಿಕೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೆಚ್​ಐವಿ ತಡೆಗಟ್ಟುವಿಕೆಯ ಬಗ್ಗೆ ಅರಿವು ಮೂಡಿಸಲು ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸುತ್ತವೆ.

ಏಡ್ಸ್​ಗೆ  ಕಾರಣಗಳು:

  • ಹೆಚ್ಐವಿ ಯಿಂದ ಏಡ್ಸ್ ಉಂಟಾಗುತ್ತದೆ. ಒಬ್ಬ ವ್ಯಕ್ತಿಯು ಹೆಚ್​ಐವಿ ಸೋಂಕಿಗೆ ಒಳಗಾಗದಿದ್ದರೆ ಏಡ್ಸ್ ಬರಲು ಸಾಧ್ಯವಿಲ್ಲ.
  • ಹೆಚ್ಐವಿಯು ಬಿಳಿ ರಕ್ತ ಕಣಗಳ ಒಂದು ಭಾಗವಾದ ಸಿಡಿ4 ಜೀವಕಣಗಳ ಮೇಲೆ ದಾಳಿ ಮಾಡುತ್ತದೆ. ಸಿಡಿ 4 ಮಾನವನ ದೇಹದಲ್ಲಿನ ರಕ್ಷಣಾ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
  • ಆರೋಗ್ಯವಂತ ವ್ಯಕ್ತಿಗಳ ದೇಹದಲ್ಲಿ ಸಿಡಿ4 ಜೀವಕಣಗಳು 500 ರಿಂದ 1500 ಇರುತ್ತದೆ. ಚಿಕಿತ್ಸೆ ಪಡೆಯದಿದ್ದರೆ ಹೆಚ್​ಐವಿ ಸಿಡಿ4 ಜೀವಕಣವನ್ನು ನಾಶಪಡಿಸುತ್ತದೆ. ಏಡ್ಸ್​ ಇರುವವರಲ್ಲಿ ಸಿಡಿ4 ಜೀವಕಣಗಳು 200 ಕ್ಕಿಂತ ಕಡಿಮೆ ಇರುತ್ತದೆ.

ಏಡ್ಸ್​ಗೆ ಚಿಕಿತ್ಸೆಗಳು:

  • ಹೆಚ್​ಐವಿ ಇರುವುದು ಗೊತ್ತಾದ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಬೇಕು. ಸೋಂಕಿನ ಪ್ರಮಾಣ ಎಷ್ಟೇ ಇದ್ದರು ಕೂಡ ಕಡೆಗಣಿಸದೆ ಅತಿ ಶೀಘ್ರದಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ.
  • ಹೆಚ್​ಐವಿಗೆ ಇರುವ ಮುಖ್ಯ ಚಿಕಿತ್ಸೆ ಆಂಟಿರೆಟ್ರೋವೈರಲ್ ಥೆರಪಿ, ಇದು ದೈನಂದಿನ ಔಷಧಿಗಳ ಸಂಯೋಜನೆಯಾಗಿದ್ದು, ಇದು ಸೋಂಕು ಹೆಚ್ಚಾಗುವುದನ್ನು ತಡೆಯುತ್ತದೆ.
  • ಆಂಟಿರೆಟ್ರೋವೈರಲ್ ಥೆರಪಿ ಸಿಡಿ4 ಜೀವಕಣಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಈ ರೋಗದ ವಿರುದ್ಧ ಹೊರಾಡಲು ಬೇಕಾಗುವಷ್ಟು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
  • ಆಂಟಿರೆಟ್ರೋವೈರಲ್ ಚಿಕಿತ್ಸೆಯು ಹೆಚ್​ಐವಿ ಏಡ್ಸ್​ಗೆ ಹೋಗದಂತೆ ತಡೆಯಲು ಸಹಾಯ ಮಾಡುತ್ತದೆ.
  • ಇತರರಿಗೆ ಹೆಚ್​ಐವಿ ಹರಡುವ ಅಪಾಯವನ್ನು ಕಡಿಮೆ ಮಾಡಲು ಸಹ ಆಂಟಿರೆಟ್ರೋವೈರಲ್ ಥೆರಪಿ ಸಹಾಯ ಮಾಡುತ್ತದೆ.
  • ಈ ಚಿಕಿತ್ಸೆಯು ಪರಿಣಾಮಕಾರಿಯಾದಾಗ ಸೋಂಕಿನ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತದೆ. ವ್ಯಕ್ತಿಯು ಇನ್ನೂ ಕೂಡ ಹೆಚ್​ಐವಿ ಹೊಂದಿರುತ್ತಾನೆ ಆದರೆ ಪರೀಕ್ಷಾ ಫಲಿತಾಂಶದಲ್ಲಿ ಸೋಂಕು ಗೋಚರಿಸುವುದಿಲ್ಲ.

ಒಟ್ಟಾರೆ ಹೆಚ್​ಐವಿ ಸೋಂಕು ಒಮ್ಮೆ ದೇಹದಲ್ಲಿ ಸೇರಿದರೆ ಅದು ಹಾಗೆ ಇರುತ್ತದೆ. ಆದರೆ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ, ಸೋಂಕಿನ ಪರಿಣಾಮ ಹೆಚ್ಚಾಗುತ್ತದೆ ಮತ್ತು ಹೆಚ್​ಐವಿ ಪುನಃ ಸಿಡಿ4 ಜೀವಕಣಗಳ ಮೇಲೆ ಆಕ್ರಮಣವನ್ನು ಪ್ರಾರಂಭಿಸಿ ದೇಹವನ್ನು ಕುಗ್ಗಿಸುತ್ತದೆ.

ಇದನ್ನೂ ಓದಿ: World AIDS Vaccine Day 2021: ಹೆಚ್​ಐವಿ ಸೋಂಕು ನಿವಾರಣೆಯ ಲಸಿಕೆ ನೀರಿಕ್ಷೆಗೆ ಈ ವರ್ಷ ಉತ್ತರ ಸಿಗುತ್ತದೆಯೇ?

Published On - 10:06 am, Tue, 18 May 21

ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ