Health Insurance: ಕೊರೊನಾ ನಂತರ ಹೆಚ್ಚುತ್ತಿದೆ ಆರೋಗ್ಯ ವಿಮೆ ಬೇಡಿಕೆ; ಈಗ ಆಗಬಹುದು ಪ್ರೀಮಿಯಂ ದರದ ಏರಿಕೆ

ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕ್ಲೇಮ್ ಪ್ರಮಾಣ ಜಾಸ್ತಿಯಾಗಿದೆ. ವಿವಿಧ ಕಂಪೆನಿಗಳು ಪ್ರೀಮಿಯಂ ಪಾವತಿಯಲ್ಲಿ ಶೇ 30ರ ತನಕ ಹೆಚ್ಚು ಮಾಡಿವೆ. ಹೊಸದಾಗಿ ಪಾಲಿಸಿ ಖರೀದಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ.

Health Insurance: ಕೊರೊನಾ ನಂತರ ಹೆಚ್ಚುತ್ತಿದೆ ಆರೋಗ್ಯ ವಿಮೆ ಬೇಡಿಕೆ; ಈಗ ಆಗಬಹುದು ಪ್ರೀಮಿಯಂ ದರದ ಏರಿಕೆ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: May 18, 2021 | 10:52 PM

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ಆರೋಗ್ಯ ವಿಮೆಯ (Health Insurance) ಮಹತ್ವವನ್ನು ಅರ್ಥ ಮಾಡಿಕೊಂಡಿದ್ದಾರೆ. ಒಂದು ವೇಳೆ ಅನಾರೋಗ್ಯವಾದಲ್ಲಿ ಅಗತ್ಯ ಚಿಕಿತ್ಸೆ ಆಸ್ಪತ್ರೆಯಲ್ಲಿ ಪಡೆಯುವುದಕ್ಕೆ ಈ ಆರೋಗ್ಯ ವಿಮೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಹಾಯ ಮಾಡುತ್ತದೆ. ಕೊರೊನಾದ ಎರಡನೇ ಅಲೆಯ ಪರಿಣಾಮವನ್ನು ನೋಡುವುದಾದರೆ, ಜನರು ಈಗ ಆರೋಗ್ಯ ವಿಮೆಯನ್ನು ಪಡೆಯಲು ಎದುರು ನೋಡುತ್ತಿದ್ದಾರೆ. ಆದರೆ ಕೋವಿಡ್‌ನಿಂದಾಗಿ ಹೆಚ್ಚುತ್ತಿರುವ ಕ್ಲೇಮ್​ಗಳ ಕಾರಣಕ್ಕೆ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಕೊರೊನಾದಿಂದ ಚೇತರಿಸಿಕೊಂಡು ಮತ್ತು ವಿಮೆ ತೆಗೆದುಕೊಳ್ಳಲು ಬಯಸುವವರಿಗೆ ಆರೋಗ್ಯ ವಿಮೆ ಮತ್ತು ಟರ್ಮ್ ಇನ್ಷೂರೆನ್ಸ್ ಪಡೆಯುವುದು ಮತ್ತೂ ಕಷ್ಟಕರವಾಗಿದೆ.

ವರದಿಯೊಂದರ ಪ್ರಕಾರ, ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪಾವತಿಸಲು ಆರೋಗ್ಯ ವಿಮಾ ಕಂಪೆನಿಗಳಿಗೆ 14,561 ಕೋಟಿ ರೂಪಾಯಿಗಳ 9.9 ಲಕ್ಷ ಕ್ಲೇಮ್​ಗಳನ್ನು ಸಲ್ಲಿಸಲಾಗಿದೆ. ಆದರೆ ಈ ವರ್ಷ ಮೇ 14ರ ವೇಳೆಗೆ ಕ್ಲೇಮ್​ಗಳ ಪ್ರಮಾಣ 22,955 ಕೋಟಿ ರೂಪಾಯಿಗೆ ಏರಿದೆ. ಅಂದರೆ, ಕೋವಿಡ್ ಕ್ಲೇಮ್ ಕೇವಲ 44 ದಿನಗಳಲ್ಲಿ 8,385 ಕೋಟಿ ರೂಪಾಯಿ ಏರಿದೆ. 2020-21ರ ಆರ್ಥಿಕ ವರ್ಷದಲ್ಲಿ ಬಂದ ಒಟ್ಟಾರೆ ಕ್ಲೇಮ್​ನ ಶೇಕಡಾ 57 ರಷ್ಟು ಮೊತ್ತ ಏಪ್ರಿಲ್ 1ರಿಂದ ಮೇ 14ರ ಮಧ್ಯೆ 44 ದಿನದಲ್ಲಿ ಬಂದಿದೆ.

ರಿಜೆಕ್ಷನ್ ದರ ಹೆಚ್ಚಳ ಎಕನಾಮಿಕ್ಸ್ ಟೈಮ್ಸ್ ವರದಿಯ ಪ್ರಕಾರ, ಹೆಚ್ಚುತ್ತಿರುವ ಕ್ಲೇಮ್​ಗಳ ದೃಷ್ಟಿಯಿಂದ, ಆರೋಗ್ಯ ವಿಮಾ ಕಂಪೆನಿಗಳು ಹೊಸ ಪಾಲಿಸಿಗಳ ಖರೀದಿಗೆ ನಿಯಮಗಳನ್ನು ಬಿಗಿಗೊಳಿಸಿವೆ. ಈ ಕಾರಣದಿಂದಾಗಿ ಹೊಸ ಅರ್ಜಿಗಳ ನಿರಾಕರಣೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳಿಗೆ ಇನ್ಷೂರೆನ್ಸ್ ಕವರ್ ಹೆಚ್ಚಿಸಲು ಮತ್ತು ಹೊಸ ಪಾಲಿಸಿಯನ್ನು ಪಡೆಯುವುದು ಈಗ ಕಷ್ಟಕರವಾಗಿದೆ.

ಉದ್ಯಮ ತಜ್ಞರ ಪ್ರಕಾರ, ಜಾಗತಿಕ ಮರುವಿಮೆದಾರ ಕಂಪೆನಿಗಳು ಜೀವ ಮತ್ತು ಆರೋಗ್ಯ ವಿಮೆದಾರರಿಗೆ ಅಂಡರ್‌ರೈಟಿಂಗ್ ಮಾನದಂಡಗಳನ್ನು ಹೆಚ್ಚು ಕಠಿಣವಾಗಿಸಲು ಕೇಳಿಕೊಂಡಿವೆ. ಮರುವಿಮೆ ಕಂಪೆನಿಗಳು ತಮ್ಮ ನಷ್ಟವನ್ನು ಕಡಿಮೆ ಮಾಡಲು ಇಂತಹ ಕ್ರಮ ಕೈಗೊಂಡಿವೆ. ಅಂದಹಾಗೆ ಈ ಮರುವಿಮೆದಾರರ ಕಂಪೆನಿಗಳು ವಿಮಾದಾರರ ಅಪಾಯವನ್ನು ಕವರ್ ಮಾಡಲು ವಿಮೆ ಮಾಡುತ್ತವೆ.

ಟರ್ಮ್ ಇನ್ಷೂರೆನ್ಸ್ ಪ್ರೀಮಿಯಂ ಶೇ 25 ರಿಂದ 30ರಷ್ಟು ಹೆಚ್ಚಾಗುತ್ತದೆ 2021-22ರ ಆರ್ಥಿಕ ವರ್ಷದ ಆರಂಭದಿಂದಲೂ ವಿಮಾ ಕ್ಷೇತ್ರದ 6 ದೊಡ್ಡ ಕಂಪೆನಿಗಳು ವಿಮಾ ಪ್ರೀಮಿಯಂ ಅನ್ನು ಶೇಕಡಾ 25 ರಿಂದ 30 ರಷ್ಟು ಹೆಚ್ಚಿಸಿವೆ. ಆದರೂ ದೇಶದ ಅತಿದೊಡ್ಡ ವಿಮಾ ಕಂಪನಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಪ್ರೀಮಿಯಂ ಅನ್ನು ಹೆಚ್ಚಿಸಿಲ್ಲ.

ಟರ್ಮ್ ಇನ್ಷೂರೆನ್ಸ್‌ನಲ್ಲಿ ಸಂಪೂರ್ಣವಾದ ಅಪಾಯವು ಕವರ್ ಆಗುತ್ತದೆ. ಇದರಲ್ಲಿ ಮೆಚ್ಯೂರಿಟಿ ಹಣ ಅಂತೇನೂ ಬರುವುದಿಲ್ಲ. ಆದರೆ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರ ಸಾವು ಸಂಭವಿಸಿದರೆ ಅವರ ನಾಮಿನಿಗೆ ಹಣ ಸಿಗುತ್ತದೆ. ಈ ಪಾಲಿಸಿಯಲ್ಲಿ ಕಡಿಮೆ ಪ್ರಮಾಣದ ಪ್ರೀಮಿಯಂನಲ್ಲಿ ಹೆಚ್ಚಿನ ಪ್ರಮಾಣದ ವಿಮೆ ಲಭ್ಯವಿದೆ.

ಆರೋಗ್ಯ ವಿಮೆಯ ಪ್ರಯೋಜನಗಳು ಪ್ರತಿ ವಿಮಾ ಕಂಪೆನಿಯು ಬೇಸಿಕ್ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಈ ಆರೋಗ್ಯ ವಿಮಾ ಪಾಲಿಸಿಯು ಆಸ್ಪತ್ರೆಗೆ ದಾಖಲಾಗುವುದು ಸೇರಿದಂತೆ ಮೊದಲಾದ ಖರ್ಚುಗಳನ್ನು ಒಳಗೊಳ್ಳುತ್ತದೆ. ಆಸ್ಪತ್ರೆಗೆ ಸೇರಿದ ನಂತರದ ವೆಚ್ಚಗಳು, ಔಷಧಿಗಳ ವೆಚ್ಚಗಳು, ವೈದ್ಯರ ಶುಲ್ಕಗಳು ಮತ್ತು ಡಯಾಗ್ನೋಸ್ಟಿಕ್ ಬೆಂಬಲ ಕೂಡ ಇವುಗಳಲ್ಲಿ ಸೇರಿವೆ.

ಆರೋಗ್ಯ ವಿಮೆಯಲ್ಲಿ ಎರಡು ವಿಧಗಳಿವೆ. ಮೊದಲನೆಯದು ವೈಯಕ್ತಿಕ ಮತ್ತು ಎರಡನೆಯದು ಫ್ಯಾಮಿಲಿ ಫ್ಲೋಟರ್. ವೈಯಕ್ತಿಕವಾದ ಇನ್ಷೂರೆನ್ಸ್​ನಲ್ಲಿ ನಿಮಗೆ ಮಾತ್ರ ಕವರೇಜ್ ಪಡೆಯುತ್ತೀರಿ. ಆದರೆ ಫ್ಯಾಮಿಲಿ ಫ್ಲೋಟರ್​ನಲ್ಲಿ ಇಡೀ ಕುಟುಂಬಕ್ಕೆ ಕವರ್ ಆಗುತ್ತದೆ.

ಇದನ್ನೂ ಓದಿ: Covid-19 Insurance: ಏಪ್ರಿಲ್ 1ರಿಂದ ಮೇ 14ರ ಮಧ್ಯೆ 44 ದಿನದಲ್ಲಿ 8,385 ಕೋಟಿ ರೂ. ಕೋವಿಡ್- 19 ಇನ್ಷೂರೆನ್ಸ್ ಕ್ಲೇಮ್

ಇದನ್ನೂ ಓದಿ: LIC ಕ್ಲೇಮ್ ಸೆಟ್ಲ್​ಮೆಂಟ್ ದಾಖಲಾತಿ ಸಲ್ಲಿಸುವುದಕ್ಕೆ ಸ್ವಲ್ಪ ಮಟ್ಟಿಗೆ ವಿನಾಯಿತಿ

(Due to increase in covid 19 health insurance claims, insurance premium expected to increase by 20% to 30%.)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್