SBI customers SGB purchase: SBI ಗ್ರಾಹಕರು ಮನೆಯಲ್ಲಿ ಕೂತು ಗ್ರಾಮ್ಗೆ ರೂ 4727ಕ್ಕೆ ಸವರನ್ ಗೋಲ್ಡ್ ಬಾಂಡ್ ಖರೀದಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಮನೆಯಲ್ಲಿ ಕೂತುಕೊಂಡೇ ಸವರನ್ ಗೋಲ್ಡ್ ಬಾಂಡ್ ಅನ್ನು ಗ್ರಾಮ್ಗೆ ರೂ. 4727ರಂತೆ ಖರೀದಿಸಬಹುದು.
ಸವರನ್ ಗೋಲ್ಡ್ ಬಾಂಡ್ಸ್ (SGB) ಮೊದಲ ಕಂತು ಮೇ 17ರಿಂದ ಸಬ್ಸ್ಕ್ರಿಪ್ಷನ್ ಶುರುವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಆನ್ಲೈನ್ ವ್ಯವಸ್ಥೆ ಮೂಲಕ ಹೂಡಿಕೆ ಮಾಡಬಹುದು. ಯಾರು ಆನ್ಲೈನ್ನಲ್ಲಿ ಅಪ್ಲೈ ಮಾಡಲು ಬಯಸುತ್ತಾರೋ ಅಂಥವರಿಗೆ ಪ್ರತಿ ಗ್ರಾಮ್ಗೆ 50 ರೂಪಾಯಿ ರಿಯಾಯಿತಿ ದೊರೆಯುತ್ತದೆ. ಯಾವುದೇ ಜಿಎಸ್ಟಿ ಅಥವಾ ಮೇಕಿಂಗ್ ಚಾರ್ಜ್ ಇರಲ್ಲ. ಎಲ್ಲ ಎಕ್ಸ್ಚೇಂಜ್ಗಳಲ್ಲೂ ಈ ಬಾಂಡ್ಗಳ ವಹಿವಾಟು ಆಗುತ್ತದೆ. ಮೇ 17ನೇ ತಾರೀಕಿನಿಂದ ಆರಂಭವಾಗಿರುವ ಸಬ್ಸ್ಕ್ರಿಪ್ಷನ್ ಮೇ 21ರ ತನಕ ಇರುತ್ತದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಎಸ್ಬಿಐ ಪೋರ್ಟಲ್ನ ಇ- ಸರ್ವೀಸಸ್ ಟ್ಯಾಬ್ ಅಡಿಯಲ್ಲಿ ಆನ್ಲೈನ್ ಮೂಲಕ ಸವರನ್ ಗೋಲ್ಡ್ ಬಾಂಡ್ನಲ್ಲಿ ಹೂಡಿಕೆ ಮಾಡಬಹುದು. ಅಥವಾ 1800112211 ಕರೆ ಮಾಡಬಹುದು ಅಥವಾ bank.sbi ಭೇಟಿ ನೀಡಬಹುದು.
ಒಂದು ಸಲ ಸವರನ್ ಗೋಲ್ಡ್ ಬಾಂಡ್ನಲ್ಲಿ ಹೂಡಿಕೆ ಮಾಡಬೇಕು ಅಂತ ಗ್ರಾಹಕರು ನಿರ್ಧರಿಸಿದ ಮೇಲೆ ಎಷ್ಟು ಗ್ರಾಮ್ ಖರೀದಿಸಬೇಕು ಎಂದು ತೀರ್ಮಾನ ಮಾಡಬೇಕು. ಆ ನಂತರ ಹಣ ಪಾವತಿ ಎಷ್ಟು ಮಾಡಬೇಕಾಗುತ್ತದೆ ಎಂಬ ಸಂಗತಿ ತಿಳಿಯುತ್ತದೆ. ಖಾತೆಯಿಂದ ಮೊತ್ತ ಕಡಿತ ಆಗುತ್ತದೆ ಮತ್ತು ಗ್ರಾಹಕರು/ಹೂಡಿಕೆದಾರರು ಆನ್ಲೈನ್ನಲ್ಲೇ ತಕ್ಷಣ ಸರ್ಟಿಫಿಕೇಟ್ ದೊರೆಯುತ್ತದೆ. 10 ವರ್ಷ ಮೇಲ್ಪಟ್ಟ ಎಸ್ಬಿಐನ ಯಾವುದೇ ಗ್ರಾಹಕರು ಈ ಬಾಂಡ್ ಖರೀದಿಸಬಹುದು. ಆದರೆ ಕೆಲವು ಮೂಲ ದಾಖಲಾತಿಗಳ ಲಭ್ಯತೆ ಮೇಲೆ ಆಧಾರಪಟ್ಟಿರುತ್ತದೆ.
ಒಂದು ಗ್ರಾಮ್ಗೆ ರೂ. 4777 ಎಂದು ದರ ನಿಗದಿ ಮಾಡಲಾಗಿದೆ. ಯಾರು ಆನ್ಲೈನ್ ಮೂಲಕ ಖರೀದಿ ಮಾಡುತ್ತಾರೋ ಅವರಿ 4727 ರೂಪಾಯಿ ಆಗುತ್ತದೆ. ವೈಯಕ್ತಿಕ ಹೂಡಿಕೆದಾರರು ಗರಿಷ್ಠ 4 ಕೇಜಿ, ಟ್ರಸ್ಟ್ ಅಥವಾ ದತ್ತಿ ಸಂಸ್ಥೆಗಳಾದಲ್ಲಿ 20 ಕೇಜಿ ತನಕ ಚಿನ್ನ ಖರೀದಿಸಬಹುದು. ಈ ಬಾಂಡ್ ಅವಧಿ ಎಂಟು ವರ್ಷಗಳದ್ದಾಗಿರುತ್ತದೆ. 5 ವರ್ಷದ ನಂತರ ಮುಂದೆ ಬಡ್ಡಿ ಪಾವತಿ ಮಾಡುವ ದಿನಾಂಕದಲ್ಲಿ ಹೊರ ಬರುವ ಅವಕಾಶ ಇರುತ್ತದೆ.
SGB ವಿತರಣೆ ಆಗುವ ದಿನಾಂಕದಿಂದಲೇ ಬಡ್ಡಿ ಅನ್ವಯ ಆಗುತ್ತದೆ. ಬಾಂಡ್ನ ಬೆಲೆಯ ಮೇಲೆ ವರ್ಷಕ್ಕೆ ಶೇ 2.50ರಷ್ಟು ವಿತರಿಸಲಾಗುತ್ತದೆ, ಬಡ್ಡಿಯನ್ನು ಆರು ತಿಂಗಳಿಗೊಮ್ಮೆ ನೀಡಲಾಗಿತ್ತದೆ. ಕೊನೆಯ ಕಂತಿನ ಬಡ್ಡಿ ಪಾವತಿ ವೇಳೆ ಅಸಲಿನ ಜತೆಗೆ ಪಾವತಿಸಲಾಗುತ್ತದೆ. ಸವರನ್ ಗೋಲ್ಡ್ ಬಾಂಡ್ ಅನ್ನು ಮತ್ತೆ ಮೇ 24ರಿಂದ ಮೇ 28, ಮೇ 31ರಿಂದ ಜೂನ್ 4, ಜುಲೈ 12ರಿಂದ 16, ಆಗಸ್ಟ್ 9ರಿಂದ 13 ಮತ್ತು ಆಗಸ್ಟ್ 30ರಿಂದ ಸೆಪ್ಟೆಂಬರ್ 3 ವಿತರಿಸಲಾಗುತ್ತದೆ.
ಇದನ್ನೂ ಓದಿ: Sovereign Gold Bond Scheme 2021- 22: ಸವರನ್ ಗೋಲ್ಡ್ ಬಾಂಡ್ ಮೇ 17ರಿಂದ ಸಬ್ಸ್ಕ್ರಿಪ್ಷನ್, ಬೆಲೆ ರೂ. 4777
(SBI customers can purchase Soverein Gold Bond (SGB) at Rs 4727 per gram by sitting at home. Know how?)
Published On - 6:51 pm, Tue, 18 May 21