Sign In

By signing in or creating an account, you agree with Associated Broadcasting Company's Terms & Conditions and Privacy Policy.

Sovereign Gold Bond Scheme 2021- 22: ಸವರನ್ ಗೋಲ್ಡ್ ಬಾಂಡ್ ಮೇ 17ರಿಂದ ಸಬ್​ಸ್ಕ್ರಿಪ್ಷನ್, ಬೆಲೆ ರೂ. 4777

ಸವರನ್ ಗೋಲ್ಡ್ ಬಾಂಡ್​ಗಳ 2021-22ನೇ ಸಾಲಿನ ಮೊದಲ ಕಂತಿನ ಬಿಡುಗಡೆ ಮೇ 17ನೇ ತಾರೀಕಿನಂದು ಆಗಲಿದೆ. ಗ್ರಾಮ್​ಗೆ ಎಷ್ಟು ಮೊತ್ತ, ಎಲ್ಲಿ ಖರೀದಿಸಬಹುದು ಎಂಬಿತ್ಯಾದಿ ವಿವರಗಳು ಇಲ್ಲಿವೆ.

Sovereign Gold Bond Scheme 2021- 22: ಸವರನ್ ಗೋಲ್ಡ್ ಬಾಂಡ್ ಮೇ 17ರಿಂದ ಸಬ್​ಸ್ಕ್ರಿಪ್ಷನ್, ಬೆಲೆ ರೂ. 4777
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 15, 2021 | 1:12 PM

ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2021- 22: ಭಾರತದ ಸರ್ಕಾರವು ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2021- 22 (SGB) ವಿತರಣೆ ಬೆಲೆಯನ್ನು ಗ್ರಾಮ್​ಗೆ 4,777 ರೂಪಾಯಿಗೆ ನಿಗದಿ ಮಾಡಿದೆ. ಈ ವಿತರಣೆಯ ಸಬ್​ಸ್ಕ್ರಿಪ್ಷನ್ ಮೇ 17ಕ್ಕೆ ಆರಂಭವಾಗುತ್ತದೆ. 5 ದಿನಗಳ ಕಾಲ ಅವಕಾಶ ಇರುತ್ತದೆ. ಕೋವಿಡ್​-19 ಇರುವುದರಿಂದ ಮುಂದೆ ಯಾವಾಗಲಾದರೂ ಸವರನ್ ಗೋಲ್ಡ್ ಬಾಂಡ್ ಖರೀದಿಸೋಣ ಅಂತ ನೀವು ಅಂದುಕೊಳ್ಳುವುದಾದರೆ, ಈ ವರ್ಷ ಇನ್ನೂ 5 ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಧಿಕೃತ ಹೇಳಿಕೆಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ತಿಳಿಸಿರುವ ಪ್ರಕಾರ, ರಿಸರ್ವ್ ಜತೆಗೆ ಚರ್ಚಿ ನಡೆಸಿ, ಸವರನ್ ಗೋಲ್ಡ್ ಬಾಂಡ್ಸ್ ವಿತರಣೆಗೆ ನಿರ್ಧರಿಸಿದೆ. 2021ರ ಮೇ ತಿಂಗಳಿಂದ 2021ರ ಸೆಪ್ಟೆಂಬರ್ ಮಧ್ಯೆ ಆರು ಕಂತುಗಳಲ್ಲಿ ಸವರನ್ ಗೋಲ್ಡ್ ಬಾಂಡ್​ಗಳನ್ನು ವಿತರಿಸಲಾಗುತ್ತದೆ.

ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸವರನ್ ಗೋಲ್ಡ್ ಬಾಂಡ್​ಗಳನ್ನು ವಿತರಣೆ ಮಾಡುತ್ತದೆ. ಅಧಿಕೃತ ಹೇಳಿಕೆ ಪ್ರಕಾರ, ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2021- 22 ಸಿರೀಸ್- I ಅಥವಾ ಮೊದಲನೇ ಕಂತು ಮೇ 17, 2021ರಿಂದ ಮೇ 21, 2021ರ ಮಧ್ಯೆ ಸಬ್​ಸ್ಕ್ರಿಪ್ಷನ್​ಗೆ ಲಭ್ಯ ಇರುತ್ತದೆ. ಬಾಂಡ್​ಗಳನ್ನು ಮೇ 25ನೇ ತಾರೀಕು ವಿತರಿಸಲಾಗುತ್ತದೆ.

ಸವರನ್ ಗೋಲ್ಡ್ ಬಾಂಡ್ ಎಲ್ಲಿ ಖರೀದಿಸಬಹುದು? ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್​ಗಳು (ಸಣ್ಣ ಫೈನಾನ್ಸ್ ಬ್ಯಾಂಕ್​ಗಳು, ಪೇಮೆಂಟ್ಸ್​ ಬ್ಯಾಂಕ್​ಗಳನ್ನು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ನಿರ್ದಿಷ್ಟ ಅಂಚೆ ಕಚೇರಿಗಳು, ನ್ಯಾಷನಲ್ ಸ್ಟಾಕ್​ ಎಕ್ಸ್​ಚೇಂಜ್ ಆಫ್ ಇಂಡಿಯಾ ಮತ್ತು ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ನಂಥ ಅಧಿಕೃತ ಸ್ಟಾಕ್​ ಎಕ್ಸ್​ಚೇಂಜ್​ಗಳಲ್ಲಿ ಖರೀದಿ ಮಾಡಬಹುದು.

ಸವರನ್ ಗೋಲ್ಡ್ ಬಾಂಡ್ ವೈಶಿಷ್ಟ್ಯಗಳು ಸವರನ್ ಗೋಲ್ಡ್ ಬಾಂಡ್ ದರ: ಸಬ್​ಸ್ಕ್ರಿಪ್ಷನ್​ಗೆ ಮುಂಚಿನ ವಾರದ ಮೂರು ದಿನಗಳ 999ರಷ್ಟು ಶುದ್ಧತೆಯ ಬಂಗಾರದ ಸರಳ ಸರಾಸರಿ ಕ್ಲೋಸಿಂಗ್ ಬೆಲೆಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಂದಹಾಗೆ ಇದಕ್ಕಾಗಿ ಇಂಡಿಯನ್ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್ ಪ್ರಕಟಿಸುವ ದರವನ್ನೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

SGB ವಿತರಣೆಗೆ ಆಧಾರ: ಸವರನ್​ ಗೋಲ್ಡ್ ಬಾಂಡ್​ಗಳನ್ನು ಚಿನ್ನದ ಗ್ರಾಮ್​ ಆಧಾರದಲ್ಲಿ ವಿತರಿಸಲಾಗುತ್ತದೆ. ಕನಿಷ್ಠ 1 ಗ್ರಾಮ್​ನೊಂದಿಗೆ ಶುರುವಾಗಿ, ಅದರ ಮೇಲೆ 1 ಗ್ರಾಮ್​ ಗುಣಕದಲ್ಲಿ ಹೆಚ್ಚುತ್ತಾ ಹೋಗುತ್ತದೆ.

SGB ಅವಧಿ: ಸವರನ್ ಗೋಲ್ಡ್ ಬಾಂಡ್ ಅವಧಿ 8 ವರ್ಷಗಳು. 5 ವರ್ಷಗಳ ನಂತರ ಮುಂದಿನ ಬಡ್ಡಿ ಪಾವತಿಯ ದಿನಾಂಕದ ಸಂದರ್ಭದಲ್ಲಿ ಹೊರ ಬರಬಹುದು.

ಕನಿಷ್ಠ ಹಾಗೂ ಗರಿಷ್ಠ ಮಿತಿ: ಕನಿಷ್ಠ ಹೂಡಿಕೆ 1 ಗ್ರಾಮ್ ಚಿನ್ನವಾದರೆ, ಗರಿಷ್ಠ ಮಿತಿ 4 ಕೇಜಿ. ಇದು ವೈಯಕ್ತಿಕ ಹೂಡಿಕೆದಾರರಿಗೆ ಇರುವ ಮಿತಿ. ಹಿಂದೂ ಅವಿಭಕ್ತ ಕುಟುಂಬ- 4 ಕೇಜಿ ಟ್ರಸ್ಟ್ ಮತ್ತು ಅದೇ ರೀತಿ ಸಂಸ್ಥೆಗಳಿಗೆ- 20 ಕೇಜಿ. ಈ ಮಿತಿಯಲ್ಲಿ ಪ್ರಾಥಮಿಕವಾಗಿ ವಿವಿಧ ಕಂತಿನಲ್ಲಿ ವಿತರಿಸಿದ್ದು ಹಾಗೂ ಸೆಕೆಂಡರಿ ಮಾರುಕಟ್ಟೆಯಲ್ಲಿನ ಖರೀದಿ ಎರಡೂ ಒಳಗೊಂಡಿರುತ್ತದೆ.

ಇದನ್ನೂ ಓದಿ: Airtel Payments Bank: ಚಿನ್ನ ಖರೀದಿಗೆ ಡಿಜಿಗೋಲ್ಡ್ ಎಂಬ ಹೊಸ ಪ್ರಾಡಕ್ಟ್ ಆರಂಭಿಸಿದ ಏರ್​ಟೆಲ್​ ಪೇಮೆಂಟ್ ಬ್ಯಾಂಕ್

ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ